Thursday, February 13, 2025

ನಳಿನ್ ಆಡಳಿತ ವೈಫಲ್ಯವೇ ಬಿಜೆಪಿಗೆ ಸೋಲು: ಅಶ್ವನಿ ಕುಮಾರ್ ರೈ

ಬಂಟ್ವಾಳ: ಮಂಗಳೂರು ಸಂಸದ ನಳಿನ್ ಕುಮಾರ್ ಅವರ ಆಡಳಿತ ವೈಫಲ್ಯವೇ ಈ ಬಾರಿ ಬಿಜೆಪಿಗೆ ಸೋಲಿನ ಆಘಾತವನ್ನು ಕೊಡಲಿದೆ ಎಂದು ಹಿರಿಯ ನ್ಯಾಯವಾದಿ, ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಅವರು ಆರೋಪ ಮಾಡಿದರು.


ಬಂಟ್ವಾಳ ಪುರಸಭಾ ವ್ಯಾಪ್ತಿಯ ಶಾಂತಿಯಂಗಡಿ ಪರಿಸರದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ ಪಾದಾಯಾತ್ರೆ ಕೈಗೊಂಡು ಮಾತನಾಡಿದ ಅವರು, ನಳಿನ್ ಎರಡು ಅವಧಿ ಸಂಸದನಾದರೂ, ಮಂಗಳೂರು ನಗರವನ್ನು ಅಭಿವೃದ್ಧಿ ಮಾಡಿಸುವಲ್ಲಿ ಸಂಪೂರ್ಣ ಸೋಲು ಕಂಡಿದ್ದಾರೆ ಎಂದು ಟೀಕಿಸಿದರು.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನ ಏನು ಸಾಲದು ಎಂದವರು, ಮಿಥುನ್ ರೈ ಓರ್ವ ಸಮರ್ಥ, ಯುವ ಹಾಗೂ ಸೃಜನಶೀಲ ವ್ಯಕ್ತಿತ್ವ ಹೊಂದಿರುವ ಅಭ್ಯರ್ಥಿಯಾಗಿದ್ದು, ಜನರ ಒಲುವು ಮಿಥುನ್ ರೈ ಪರವಾಗಿದೆ ಎಂದವರು ಭರವಸೆ ನುಡಿದರು.
ಮೋದಿಯಿಂದ ಆರ್ಥಿಕ ಬಿಕ್ಕಟ್ಟು!
ಮೋದಿ ಪ್ರಧಾನಿಯಾಗ ಬಳಿಕ ದೇಶದಲ್ಲಿ ಸಂಪೂರ್ಣ ಆರ್ಥಿಕ ಸಂಕಷ್ಟ ಎದುರಾಗಿದೆ. ಜನರು ನಿತ್ಯವೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಬಡವರು, ಸಾಮಾನ್ಯ ವರ್ಗದವರ ದೈನಂದಿನ ಖರ್ಚು ನಿರ್ವಹಣೆಗಾಗಿ ಸಾಕಷ್ಟು ಕಷ್ಟವಾಗುತ್ತಿದೆ. ಈ ದೇಶವನ್ನು ಉಸಿರುಗಟ್ಟಿದ ವಾತಾವರಣದಿಂದ ಮುಕ್ತಗೊಳಿಸಲು ಜನತೆ ಮೋದಿಯವರನ್ನು ತಿರಸ್ಕರಿಸಲಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಶಾಂತಿಯಂಗಡಿ, ಪರ್ಲಿಯಾ, ಮಧ್ವ, ತಾಳಿಪಡ್ಪು, ಕೊಡಂಗೆ, ಕೈಕಂಬ ಪರಿಸರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಅಶ್ವನಿ ಕುಮಾರ್ ರೈ, ಮಿಥುನ್ ರೈ ಪರ ಮತಯಾಚನೆ ನಡೆಸಿದರು. ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಮಾಜಿ ಅಧ್ಯಕ್ಷ ರಾಮಕೃಷ್ಣ ಆಳ್ವ, ಮಾಜಿ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಶೆರೀಫ್ ಶಾಂತಿಯಂಗಡಿ, ಲುಕ್ಮಾನ್ ಕೈಕಂಬ, ಇರಾ ಗ್ರಾ.ಪಂ. ಅಧ್ಯಕ್ಷ ರಝಾಕ್ ಕುಕ್ಕಾಜೆ, ಪ್ರಮುಖರಾದ ಅಮೀರ್ ತುಂಬೆ, ಸ್ಟೀವನ್ ಡಿಸೋಜ, ಗೋಪಾಲಕೃಷ್ಣ ತುಂಬೆ, ಮಹಮ್ಮದಾಲಿ ಶಾಂತಿಯಂಗಡಿ, ಅಶ್ರಫ್ ಕೈಕಂಬ ಮೊದಲಾದವರು ಪಾದಾಯಾತ್ರೆಯಲ್ಲ ಪಾಲ್ಗೊಂಡರು.

More from the blog

ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ

  ಬೆಂಗಳೂರು:    ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ...

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶ: ಬಂಟ್ವಾಳ ತಾಲೂಕು ಸಮಿತಿ ಪ್ರಮುಖರ ಸಭೆ

  ಬಂಟ್ವಾಳ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಉಚ್ಚಂಗೀ ಸಹಿತ ಕಾಪು ಸಾವಿರ ಸೀಮೆಯ ಒಡತಿ ಶ್ರೀ ಮಾರಿಯಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ಆಮಂತ್ರಣ ಪತ್ರಿಕೆ...

ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕದ ವಾರ್ಷಿಕೋತ್ಸವ

ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ವಾರ್ಷಿಕೋತ್ಸವ ಹಾಗೂ ಮಹಾಸಭೆಯು ಶಾರದಾ ಸಭಾಭವನ ರಾಮಲ್ಕಟ್ಟೆ ತುಂಬೆಯಲ್ಲಿ ನಡೆಯಿತು. ಪುರ್ವಾನ್ಹ ವಾರ್ಷಿಕೋತ್ಸವವನ್ನು ಸಂಘದ ಅಧ್ಯಕ್ಷರಾದ ಶಿವಕುಮಾರ್ ಉದ್ಘಾಟಿಸಿದರು. ಅಪರಾನ್ಹ 3 ಘಂಟೆಗೆ...

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...