ಮುಂಬಯಿ: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ (ರಿ.) ಬೆಂಗಳೂರು ವಾರ್ಷಿಕವಾಗಿ ಕೊಡಮಾಡುವ 2018ನೇ ಸಾಲಿನ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ’ಯನ್ನು ವಿಸ್ಮಯ ಜಾದೂ ಮ್ಯಾಜಿಕ್ ಪ್ರದರ್ಶನಗಳ ಮೂಲಕ ವಿಶ್ವ ಪ್ರಸಿದ್ಧಿಯ ಮಂಗಳೂರು ಮೂಲದ ಗಣೇಶ್ ಕುದ್ರೋಳಿ ಅವರಿಗೆ ಪ್ರದಾನಿಸಿ ಗೌರವಿಸಿತು.

ಬೆಂಗಳೂರು ಜೆ.ಸಿ ರಸ್ತೆಯಲ್ಲಿನ ರವೀಂದ್ರ ಕಲಾಕ್ಷೇತ್ರ ಇಲ್ಲಿ ಕಳೆದ ಗುರುವಾರ ಸಂಜೆ ನಡೆಸಲ್ಪಟ್ಟ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಆರ್ಯಭಟ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಹೆಚ್.ಎಲ್.ಎನ್ ರಾವ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಅತಿಥಿ ಅಭ್ಯಾಗತರಿಂದ ಪ್ರಶಸ್ತಿ ಪ್ರದಾನಿಸಿ ಗಣೇಶ್ ಕುದ್ರೋಳಿ ಅವರಿಗೆ ಶುಹಾರೈಸಿದರು.
