Friday, June 27, 2025

ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ವಿಧಿವಶ

ಮಾಜಿ ಕೇಂದ್ರ ಹಣಕಾಸು ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ, ಅನಾರೋಗ್ಯದ ಹಿನ್ನೆಲೆಯಲ್ಲಿ , ತೀವ್ರ ನಿಗಾ ಘಟಕದಲ್ಲಿಟ್ಟು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಏಮ್ಸ್‌ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಶ್ವಾಸಕೋಶದಲ್ಲಿ ನೀರು ತುಂಬಿದ್ದು, ಈ ಕಾರಣದಿಂದ ಅವರಿಗೆ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಶ್ವಾಸಕೋಶದಿಂದ ನೀರನ್ನು ಹೊರತೆಗೆಯಲಾಗುತ್ತಿದ್ದರೂ, ಮರಳಿ ತುಂಬಿಕೊಳ್ಳುತ್ತಿತ್ತು ಹೀಗಾಗಿ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಜೇಟ್ಲಿ ಬಹಳ ವರ್ಷಗಳಿಂದ ಮಧುಮೇಹ ಪೀಡಿತರಾಗಿದ್ದು, ಅವರಿಗೆ ಕಿಡ್ನಿ ಕಸಿಯನ್ನು ಸಹ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಅವರಿಗೆ ಸಾಫ್ಟ್ ಟಿಸ್ಯೂ ಕ್ಯಾನ್ಸರ್ ಇದೆ ಎಂಬುದು ಪತ್ತೆಯಾಗಿತ್ತು. ಸ್ಥೂಲಕಾಯದಿಂದ ಮುಕ್ತಿ ಪಡೆಯಲು ಅವರು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೂ ಸಹ ಒಳಗಾಗಿದ್ದರು.

66 ವರ್ಷದ ಹಿರಿಯ ನಾಯಕರಾದ ಅರುಣ್ ಜೇಟ್ಲಿ ಮೋದಿ ಸರಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಯನ್ನೆದುರಿಸಿರಲಿಲ್ಲ.

More from the blog

ವಿಟ್ಲ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ವಿಟ್ಲ ವರ್ತಕರ ಸಂಘದಿಂದ ತಯಾರಿಸಲಾದ ಪ್ಲಾಸ್ಟಿಕ್ ನಿಷೇಧದ ಸ್ಟಿಕ್ಕರ್ ನ್ನು ವರ್ತಕರ ಸಂಘದ ಸಹಕಾರದೊಂದಿಗೆ ವಿಟ್ಲ ಪೇಟೆಯ...

Installation Ceremony : ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ..

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.26 ರಂದು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...