ಶ್ರೀ ಅಯ್ಯಪ್ಪ ಸ್ವಾಮಿಯು ಪಂದಳ ರಾಜಭೋಗಗಳನ್ನು ತ್ಯಜಿಸಿ ಸಾಧುಜೀವನವನ್ನು ಬಯಸಿ ಅಖಂಡ ಬ್ರಹ್ಮಚಾರಿಯಾಗಿ ಶಬರಿಮಲೆಯಲ್ಲಿ ನೆಲೆಸಿದ್ದಾನೆ ಎಂಬುದುಎಲ್ಲರಿಗೂ ತಿಳಿದ ಸತ್ಯವಾಗಿದೆ.ತನ್ನಇಚ್ಛೆಯಂತೆಯೇ ಹದಿನೆಂಟು ಮೆಟ್ಟಿಲುಗಳನ್ನು ಹೊಂದಿರುವತನ್ನದೇವಾಲಯವನ್ನು ಪರಶುರಾಮರಿಂದ ಪ್ರತಿಷ್ಠಾಪಿಸಿಕೊಂಡು ತನ್ನನ್ನು ಆರಾಧಿಸಿ ಬರುವ ಭಕ್ತಾದಿಗಳಿಗೆ ಕೆಲವೊಂದು ವ್ರತದ ನಿಯಮಗಳನ್ನು ವಿಧಿಸಿರುವುದು ಅನೇಕ ಶತಮಾನಗಳ ಹಿಂದಿನ ಇತಿಹಾಸ.
ಇಲ್ಲಿ ಬಹಳ ಮುಖ್ಯವಾಗಿಗಮನಹರಿಸಬೇಕಾದ ಶಬರಿಮಲೆಯಾತ್ರೆಯ ಅನೇಕ ವಿಶಿಷ್ಟವಾದ ಧ್ಯೇಯೋದ್ದೇಶಗಳನ್ನು ಹೊಂದಿದೆ.ಶ್ರೀ ಅಯ್ಯಪ್ಪ ಸ್ವಾಮಿಯ ಆದರ್ಶಗುಣಗಳನ್ನು ತಮ್ಮ ಸಾಮಾನ್ಯಜೀವನದಲ್ಲಿ ಸಾಧ್ಯವಾದಷ್ಟು ಈ ಶ್ರೇಷ್ಠವಾದ ವ್ರತ ನಿಯಮಗಳ ಮೂಲಕ ಅಳವಡಿಸಿಕೊಳ್ಳುವುದೇ ಈ ವ್ರತದ ಪ್ರಮುಖ ಉದ್ದೇಶವಾಗಿದೆ. ಇಲ್ಲಿ ಅತ್ಯಂತ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟಿರುವುದು ಶ್ರೀ ಅಯ್ಯಪ್ಪ ಸ್ವಾಮಿಯ ಎರಡು ಆದರ್ಶಗಳಾದ ಸಾಧುಜೀವನ ಮತ್ತು ಅಖಂಡ ಬ್ರಹ್ಮಚರ್ಯ ಪಾಲನೆ
ಸಾಧುಜೀವನ: ಎಷ್ಟೇ ಸಕಲಭೋಗಗಳಿದ್ದರೂ ವ್ರತದ ನಿಯಮದ ಪ್ರಕಾರ ಅಯ್ಯಪ್ಪಧಾರಿಗಳು ಸಂಪೂರ್ಣ ಸಾಧುಜೀವನವನ್ನು ಪಾಲನೆ ಮಾಡಬೇಕು. ತಡವಾಗಿ ಏಳುವ ಸೂರ್ಯವಂಶದ ಪುತ್ರರಾದರೂ ಕೂಡ ಬೆಳಿಗ್ಗೆ ಬೇಗನೆ ಬ್ರಾಹ್ಮಿಮುಹೂರ್ತದಲ್ಲಿ ಏಳಬೇಕು.ಧನುರ್ಮಾಸದಕೊರೆಯುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಬೇಕು. ಶುದ್ಧವಾದ, ಸರಳವಾದ ಕಪ್ಪುಅಥವಾ ಕೆಂಪು ವಸ್ತ್ರವನ್ನು ಧರಿಸಿ, ಭಸ್ಮ, ಚಂದನ, ಕುಂಕುಮವನ್ನು ವಿಧಿವಿಧಾನಗಳ ಪ್ರಕಾರ ಲೇಪಿಸಿಕೊಂಡು ಸ್ವಾಮಿಯ ಪೂಜೆಗೆಅಣಿಯಾಗಬೇಕು.ಸ್ವಾಮಿಯ ಪೂಜೆಯನ್ನು ಮಾಡಿ ಶರಣು ಘೋಷಗಳನ್ನು ಪಠಿಸಬೇಕು.ಪೂಜೆಯ ನಂತರ ನಿಯಮಿತವಾದ ಶುದ್ಧ ಸಸ್ಯಾಹಾರವನ್ನು ಸೇವಿಸಿ ತಮ್ಮತಮ್ಮದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.ಸೂರ್ಯಾಸ್ತದ ನಂತರವೂಕೂಡ ಪುನಃ ತಣ್ಣೀರು ಸ್ನಾನ, ಶುದ್ಧವಾದ ವಸ್ತ್ರಾಧರಣೆ, ಭಸ್ಮ, ಕುಂಕುಮ, ಚಂದನದ ಲೇಪನ ನಂತರ ಸ್ವಾಮಿಯ ಪೂಜೆ ಹಾಗೂ ಶರಣನ್ನು ಪಠಿಸಬೇಕು.ಮಾಲೆಯನ್ನು ಧರಿಸಿದವರು ಬರಿಗಾಲಲ್ಲೆ ನಡೆಯಬೇಕು.ಕ್ಷೌರವನ್ನು ಮಾಡಿಸಿಕೊಳ್ಳುವಂತಿಲ್ಲ, ಗಡ್ಡವನ್ನುತೆಗೆಯುವಂತಿಲ್ಲ. ಎಲ್ಲಾ ನಿಯಮಗಳು ಭಕ್ತಾದಿಗಳಿಗೆ ವಿಧಿಸಿರುವುದು ಸಾಧುಜೀವನದ ಆದರ್ಶಗಳನ್ನು ಪಾಲಿಸುವ ಸಲುವಾಗಿ.ಶ್ರೀ ಅಯ್ಯಪ್ಪ ಸ್ವಾಮಿಯ ಸಾಧುಜೀವನದ ಶ್ರೇಷ್ಠ ಆದರ್ಶಗಳ ಸತ್ವವನ್ನುತಮ್ಮತಮ್ಮ ಸಾಮಾನ್ಯಜೀವನದಲ್ಲಿಯೋಗ್ಯಾನುಸಾರವಾಗಿ ಅಳವಡಿಸಿಕೊಳ್ಳಲು ಈ ಮನುಕುಲಕ್ಕೆ ದೊರೆತ ವರವೇ ಈ ವ್ರತ ಮತ್ತುಯಾತ್ರೆ.ಕಲಿಯುಗದಲ್ಲಿಐಷಾರಾಮಿಜೀವನದದುರಾಸೆ ಹೊತ್ತ ಮನುಷ್ಯ ಅನೇಕ ಪಾಪಕೃತ್ಯದಲ್ಲಿತನ್ನನ್ನುತಾನು ತೊಡಗಿಸಿಕೊಳ್ಳುತ್ತಾನೆ. ಈ ವ್ರತದ ಮೂಲಕ ಸಾಧುಜೀವನದ ಕೆಲವು ಸತ್ವಗಳು ವ್ರತದ ನಂತರದ ದಿನಗಳಲ್ಲಿ ಐಷಾರಾಮಿಜೀವನ ಹೊಂದುವದುರಾಸೆಯಿಂದದೂರ ಇರಿಸಿ ಒಂದುಯೋಗ್ಯವಾದಜೀವನಕ್ಕೆ ಸನ್ಮಾರ್ಗವನ್ನುಕಲ್ಪಿಸುತ್ತದೆ.
ಅಖಂಡ ಬ್ರಹ್ಮಚರ್ಯ:
ಶ್ರೀ ಅಯ್ಯಪ್ಪ ಸ್ವಾಮಿಯುಅಖಂಡ ಬ್ರಹ್ಮಚಾರಿಯಾಗಿ ಶಬರಿಮಲೆಯಲ್ಲಿ ನೆಲೆಸಿದ್ದಾನೆ. ಸ್ವಾಮಿಯ ಬ್ರಹ್ಮಚರ್ಯೆ ಪಾಲನೆಯಆದರ್ಶದ ಸತ್ವಯುತವಾದತತ್ವವನ್ನುತಮ್ಮಜೀವನದಲ್ಲಿ ಅಳವಡಿಸಿಕೊಳ್ಳಲು ವ್ರತಾದಾರಿಗಳಿಗೆ ಅರ್ಥಪೂರ್ಣವಾದ ಕೆಲವು ವಿಧಿವಿಧಾನಗಳಿವೆ.
ಓರ್ವ ಸಾಮಾನ್ಯ ಸಂಸಾರಿಯು ಮಾಲೆಯನ್ನು ಧರಿಸಿದ ನಂತರಅಪ್ಪಟ ಸನ್ಯಾಸಿಯಾಗುವನು.ಈ ವ್ರತದ ಸಮಯದಲ್ಲಿ ನಿಯಮವನ್ನು ಪರಿಪೂರ್ಣವಾಗಿ ಪಾಲಿಸುವ ಸಲುವಾಗಿ ಹೆಚ್ಚಿನ ಭಕ್ತಾದಿಗಳು ತಮ್ಮತಮ್ಮ ಮನೆಗಳಲ್ಲಿ ವಾಸವಾಗದೆ, ಸಾಮೂಹಿಕವಾಗಿ ಕುಟೀರ/ಶಿಬಿರಗಳಲ್ಲಿ ವಾಸ ಮಾಡುತ್ತಾರೆ.ಬ್ರಹ್ಮಚರ್ಯ ಪಾಲನೆಯ ಮೂಲ ಮಂತ್ರ ಸಂಯಮ.ಈ ಸಂಯಮವನ್ನು ಶಾಶ್ವತವಾಗಿ ಕರಗತಗೊಳಿಸಿಕೊಳ್ಳಲು ಪೂರಕವಾಗುವ ವಾತಾವರಣವನ್ನು ಹೊಂದುವುದು ಈ ವ್ರತದ ಮತ್ತೊಂದುಧ್ಯೇಯವಾಗಿದೆ.
ಬ್ರಹ್ಮಚರ್ಯ ಪಾಲನೆಯ ಪರಿಶುದ್ಧತೆಎಷ್ಟರ ಮಟ್ಟಿಗೆಇರುತ್ತದೆಎಂದರೆ, ನಿಷಿದ್ಧ ವಯೋಮಾನದ ಸ್ತ್ರೀಯರಿಂದ ತಯಾರಿಸಲ್ಪಟ್ಟಆಹಾರವನ್ನುಕೂಡ ಸೇವಿಸುವಂತಿಲ್ಲ ಹಾಗೂ ಒಂದು ನಿರ್ದಿಷ್ಟವಾದಅಂತರವನ್ನು ಕಾಯ್ದುಕೊಳ್ಳಬೇಕು.ಇಂತಹ ಮೂಲ ಉದ್ದೇಶವನ್ನಿಟ್ಟುಕೊಂಡು ಕೈಗೊಳ್ಳುವ ಈ ಶಿಸ್ತುಬದ್ಧ ಧಾರ್ಮಿಕಆಚರಣೆಗೆಅಸಮಾನತೆಅಥವಾ ಲಿಂಗಭೇದವೆಂಬ ಹಣೆಪಟ್ಟಿಯನ್ನುಕಟ್ಟುವುದುಖಂಡಿತವಾಗಿಯೂ ನಿರಾಧಾರ ಹಾಗೂ ಸಲ್ಲ.
ಉದಾಹರಣೆಗೆಓರ್ವ ಸಾಮಾನ್ಯ ಸಂಸಾರಿಯಾದ ವ್ಯಕ್ತಿಯು ಮಾಲಾಧಾರಣೆ ನಂತರ ವ್ರತದ ಸಮಯದಲ್ಲಿ ಮಧ್ಯಮ ವಯಸ್ಸಿನ ತನ್ನ ಬಾಳಸಂಗಾತಿಯಾದ ಹೆಂಡತಿ ಹಾಗೂ ನೆಚ್ಚಿನ ಸಹೋದರಿಯೊಂದಿಗೆ ನಿರ್ದಿಷ್ಟವಾದಅಂತರವನ್ನುಎಲ್ಲಾ ವಿಷಯಗಳಲ್ಲಿ ಕಾಪಾಡಿಕೊಂಡು ಬರುತ್ತಾರೆ.ಆದರೆ ವಯಸ್ಸಾದತನ್ನತಾಯಿಯು ತಯಾರಿಸಿದ ಆಹಾರವನ್ನು ಸೇವಿಸುತ್ತಾರೆ ಹಾಗೂ ತನ್ನಚಿಕ್ಕ ಹೆಣ್ಣು ಮಗಳನ್ನು ಎತ್ತಿಕೊಂಡು ವಾತ್ಸಲ್ಯವನ್ನುತೋರಿಸುತ್ತಾರೆ.ಇಂತಹ ಸಂದರ್ಭದಲ್ಲಿ ಆ ಮಾಲಾಧಾರಿಗಳು ತನ್ನ ಹೆಂಡತಿ ಹಾಗೂ ಸಹೋದರಿಯರನ್ನುಅಸಮಾನತೆಯಿಂದಕಾಣುವರುಅಥವಾ ಲಿಂಗ ತಾರತಮ್ಯ ಮಾಡುವರುಎಂದು ಹೇಳಲು ಎಂದಿಗೂ ಸಾಧ್ಯವಿಲ್ಲ.
ಇನ್ನು ಆ ಮನೆಯಲ್ಲಿರುವ ಸ್ತ್ರೀಯರು ಈ ಮಾಲಾಧಾರಿಗಳ ವ್ರತ ನಿಯಮ ಪಾಲನೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡುತ್ತಾರೆ.ಹೀಗೆ ಅಯ್ಯಪ್ಪ ಮಾಲಾಧಾರಿಗಳ ವ್ರತ ನಿಯಮಗಳಿಗೆ ಭಂಗಬಾರದಂತೆ ನಡೆದುಕೊಳ್ಳುವುದೇ ತಾವು ಶ್ರೀ ಅಯ್ಯಪ್ಪಸ್ವಾಮಿಗೆ ಸಲ್ಲಿಸುವ ಭಕ್ತಿ ಹಾಗೂ ವ್ರತಎಂದು ಭಾವಿಸುತ್ತಾರೆ.ನಿಜಕ್ಕೂಇದೇ ಶ್ರೇಷ್ಠ ಭಕ್ತಿ ಹಾಗೂ ಇವರೇ ಮುಂದೆ ನಿರ್ದಿಷ್ಟ ವಯಸ್ಸಾದ ನಂತರ ಶ್ರೇಷ್ಠ ಭಕ್ತಿಯೊಂದಿಗೆ ಶ್ರೀ ಶಬರಿಮಲೆಯಯಾತ್ರೆಯನ್ನು ಸಾಂಗವಾಗಿ ಕೈಗೊಳ್ಳುತ್ತಾರೆ.ಇವರನ್ನು ಸಾಕ್ಷಾತ್‌ದೇವಿಯರೂಪದಲ್ಲಿ ಅಯ್ಯಪ್ಪಧಾರಿಗಳು ಹಾಗೂ ಸಮಾಜಕಂಡುಗೌರವಿಸುತ್ತಾರೆ.
ಶಬರಿಮಲೆ ವ್ರತ ಹಾಗೂ ಯಾತ್ರೆಅತ್ಯಂತ ಶ್ರೇಷ್ಠ ಧಾರ್ಮಿಕಆಚರಣೆಯಾಗಲುಇನ್ನೂ ಅನೇಕ ಕಾರಣಗಳಿವೆ. ಒಂದುಕಡೆ ವ್ರತ ನಿಯಮಗಳು ವ್ರತಧಾರಿಗಳ ಆಂತರಿಕ ಮೌಲ್ಯ ಹಾಗೂ ವ್ಯಕ್ತಿತ್ವವನ್ನುಉನ್ನತೀಕರಿಸುತ್ತಾ ಹೋಗುವುದುಆದರೆಇನ್ನೊಂದುಕಡೆ ಸಾಮಾಜಿಕ ಮೌಲ್ಯಗಳನ್ನು ಸಮಾಜದಲ್ಲಿಎತ್ತಿಹಿಡಿದಿದೆ.ಶಬರಿಮಲೆ ವ್ರತದ ನಿಯಮಗಳಲ್ಲಿ ಅಡಕವಾಗಿರುವ ಶ್ರೇಷ್ಠ ಸಾಮಾಜಿಕ ಮೌಲ್ಯಗಳಲ್ಲಿ ಅತಿಪ್ರಮುಖವಾದುದು ಭಾವೈಕ್ಯತೆ, ಸಮಾನತೆ, ಸಹಬಾಳ್ವೆ ಹಾಗೂ ಸಂಯಮ.


ಭಾವೈಕ್ಯತೆಯ ಸಂಗಮ ಈ ಶಬರಿಮಲೆಯಾತ್ರೆ
ಈ ಯಾತ್ರೆಯ ದೊಡ್ಡ ಪಾದ ಯಾತ್ರೆಯನ್ನು ಮಾಲಾಧಾರಿಗಳು ಎರಿಮಲೆಯಿಂದ ಪ್ರಾರಂಭ ಮಾಡಿ ಸುಮಾರು ೪೦ ಕಿ.ಮೀ. ಗಿಂತಲೂ ಹೆಚ್ಚು ದೂರದಲ್ಲಿರುವ ಶಬರಿಮಲೆಯವರೆಗೂದಟ್ಟಕಾಡುದಾರಿಯಲ್ಲಿ ಪಾದಯಾತ್ರೆಯನ್ನು ಕೈಗೊಳ್ಳುತ್ತಾರೆ.ಹೀಗೆ ಪಾದಯಾತ್ರೆಯ ಪ್ರಾರಂಭ ಸ್ಥಳವಾದ ಎರಿಮಲೆಯಲ್ಲಿರುವ ನದಿಯಲ್ಲಿ ಸ್ನಾನ ಮಾಡಿ, ಅಲ್ಲೆಇರುವ ಸ್ವಾಮಿಯಒಂದುದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ನಂತರವಾವರ ಸ್ವಾಮಿಯ ಆಶೀರ್ವಾದವನ್ನು ಪಡೆಯುತ್ತಾರೆ.ವಾವರ ಸ್ವಾಮಿಯುಇಸ್ಲಾಂಧರ್ಮ ಬಾಂಧವರಆರಾಧ್ಯದೇವರು.ಎರಿಮಲೆಯಲ್ಲಿಒಂದು ಸುಂದರವಾದ ಮಸೀದಿಯಲ್ಲಿ ವಾವರಸ್ವಾಮಿಯಐಕ್ಯತೆಇದೆ.ಈ ಪವಿತ್ರ ಮಸೀದಿಗೆ ಲಕ್ಷಾಂತರ ಅಯ್ಯಪ್ಪಧಾರಿಗಳು ಪ್ರದಕ್ಷಿಣೆಯನ್ನು ಹಾಕಿ ವಾವರ ಸ್ವಾಮಿಯೇ ಶರಣಂಅಯ್ಯಪ್ಪ ಎಂದು ಭಾವೋದ್ವೇಗದಿಂದಘೋಷಣೆಯನ್ನುಕೂಗುತ್ತಾರೆ.ಆಗ ಪ್ರತಿಯೊಬ್ಬರಲ್ಲೂ ಭಾವೈಕ್ಯತೆಯ ಶ್ರೇಷ್ಠ ಭಾವವುಐಕ್ಯವಾಗುತ್ತದೆ.ಅನೇಕತೆಏಕತೆಯಾಗಿ ಮಾನವೀಯತೆಯ ಮೌಲ್ಯಗಳು ಧರ್ಮದ ಸಂಕೇತಎನ್ನುವುದುಇಲ್ಲಿ ವಿಜೃಂಭಿಸುತ್ತದೆ.ಬಹುಶಃ ಹೀಗೆ ಸ್ವಧರ್ಮದಒಂದುಧಾರ್ಮಿಕಆಚರಣೆಯಲ್ಲಿ ಪರಧರ್ಮದದೈವಾರಾಧನೆ ಮಾಡುವಇಂತಹ ಶ್ರೇಷ್ಟ ವ್ರತ ಈ ಪ್ರಪಂಚದಲ್ಲಿಇನ್ನೊಂದಿಲ್ಲ.
ಇಲ್ಲಿಎಲ್ಲರೂ ಸಮಾನರು:
ಮಾಲೆ ಧರಿಸಿದ ಎಲ್ಲಾ ಅಯ್ಯಪ್ಪಧಾರಿಗಳು ಇಲ್ಲಿ ಸಮಾನರು.ಜಾತಿ, ಅಂತಸ್ತು, ವಿದ್ಯೆ, ಹುದ್ದೆಯೆಂಬ ಯಾವಅಸಮಾನತೆಯಒಂದು ಸಣ್ಣ ಸೊಂಕು ಕೂಡಇಲ್ಲಿಲ್ಲ. ಅಯ್ಯಪ್ಪಧಾರಿಗಳು ಎಲ್ಲರನ್ನೂ ಸ್ವಾಮಿಎಂದು ಸಂಭೋದಿಸಬೇಕು. ವ್ರತಾಚರಣೆಯ ಸಂದರ್ಭದಲ್ಲಿ ಸಾಮೂಹಿಕವಾಗಿ ಅನೇಕ ವ್ರತಾಧಾರಿಗಳು ಶಿಬಿರದಲ್ಲಿ ವಾಸ ಮಾಡುತ್ತಾರೆ.ಇಲ್ಲಿಜಾತಿ, ಅಂತಸ್ತು, ಬಣ್ಣ, ಹುದ್ದೆ, ವಿದ್ಯೆಗೆಎಲ್ಲವೂ ಸಮಾನತೆಎನ್ನುವ ಶ್ರೇಷ್ಠ ತತ್ವದೊಂದಿಗೆ ವಿಲೀನವಾಗುತ್ತದೆ.ಎಲ್ಲರೂಒಟ್ಟಿಗೆ ಪೂಜಾಕಾರ್ಯವನ್ನು ಕೈಗೊಳ್ಳುತ್ತಾರೆ. ಹಾಗೆಯೇ ನಿದ್ರಾಹಾರವನ್ನು ಸವಿಯುತ್ತಾರೆ. ಪೂಜಾಕಾರ್ಯ ಮುಗಿದ ನಂತರ ’ಪಾದಸೇವೆ’ ಎಂಬ ಆಚರಣೆಇದೆ.ಇಲ್ಲಿ ಪ್ರತಿಅಯ್ಯಪ್ಪಧಾರಿಯು ಶಿಬಿರದಲ್ಲಿರುವ ಇತರಎಲ್ಲಾ ಸ್ವಾಮಿಯವರ ಪಾದವನ್ನು ಮುಟ್ಟಿ ನಮಸ್ಕರಿಸಬೇಕು.ಇದೊಂದು ಶ್ರೇಷ್ಠ ಆಚರಣೆ, ಇಲ್ಲಿದೊಡ್ಡವರುಚಿಕ್ಕವರ ಪಾದ ಸ್ಪರ್ಶಸಿ ನಮಸ್ಕರಿಸಬೇಕು.ವೃತ್ತಿಯಲ್ಲಿಯಜಮಾನನಾಗಿದ್ದರೂ ಮಾಲೆಯಲ್ಲಿ ಮಾಲಾಧಾರಿಯಾದತನ್ನ ಸೇವಕನ ಪಾದಾರವಿಂದಗಳಿಗೆ ನಮಸ್ಕರಿಸಿ ಮಾನವೀಯತೆಯ ಮೌಲ್ಯಗಳಿಗೆ ನಿಜ ಯಜಮಾನನಾಗುತ್ತಾನೆ.
ಸಹಬಾಳ್ವೆ :
ಅಯ್ಯಪ್ಪಧಾರಿಗಳು ವ್ರತಾಚರಣೆಯ ಸಂದರ್ಭದಲ್ಲಿ ಮಾಲಾಧಾರಿಗಳನ್ನಲ್ಲದೆ ಇತರರನ್ನೂ ’ಸ್ವಾಮಿ’ಯೆಂದು ಸಂಭೋದಿಸಬೇಕು.ಓರ್ವಅಯ್ಯಪ್ಪಧಾರಿಯುತನ್ನಕುಟುಂಬದವರನ್ನು ಸಂಬಂದದೊಂದಿಗೆಅಪ್ಪ ಸ್ವಾಮಿ, ಅಮ್ಮ ಸ್ವಾಮಿ, ಅಕ್ಕ ಸ್ವಾಮಿ, ಅಣ್ಣ ಸ್ವಾಮಿಎಂದುಕರೆಯುವಾಗ ಸಹಬಾಳ್ವೆಯ ಪರಾಕಾಷ್ಠೆ ಆ ಕುಟುಂಬದಲ್ಲಿಆವರಿಸುತ್ತದೆ.ಒಂದು ಹಬ್ಬದ ವಾತಾವರಣ ಆ ಮನೆಯಲ್ಲಿ ಮೂಡುತ್ತದೆ.ನೆರೆಹೊರೆಯವರನ್ನು ಸ್ವಾಮಿಎಂದುಕರೆಯುವಾಗ ಹಾಗೂ ಅವರು ಈ ಮಾಲಾಧಾರಿಯನ್ನು ಸ್ವಾಮಿಎಂದುಕರೆಯುವಾಗಎಲ್ಲೆಲ್ಲಿಯೂ ಪ್ರೀತಿ ಹಾಗೂ ಸಹಬಾಳ್ವೆ ಪ್ರಹರಿಸುತ್ತದೆ.
ಸಂಯಮ:
ಶಬರಿಮಲೆ ವ್ರತದ ಮೂಲಮಂತ್ರ ಸಂಯಮ.ಸಾಧುಜೀವನ ಶೈಲಿ, ಬ್ರಹ್ಮಚರ್ಯ ಪಾಲನೆ, ಎಲ್ಲರಲ್ಲೂದೇವರನ್ನುಕಾಣುವ ಭಾವ ವ್ರತಾಧಾರಿಗಳಲ್ಲಿ ಒಂದು ಶಕ್ತಿಯುತವಾದ ಸಂಯಮವನ್ನು ಕಲಿಸಿಕೊಡುತ್ತದೆ.ಕ್ರಮೇಣ ಅಯ್ಯಪ್ಪಧಾರಿಗಳು ಸಂಯಮವನ್ನು ಜಯಿಸಿ ಶ್ರೇಷ್ಠರಾಗುತ್ತಾರೆ.ತನಗೆಎಂತಹತೊಂದರೆಯಾದರೂ ಸಂಯಮವನ್ನು ಕಳೆದುಕೊಳ್ಳುವುದಿಲ್ಲ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಇತ್ತೀಚಿನ ಶಬರಿಮಲೆಯಲ್ಲಿ ನಡೆದ ಘಟನೆಗಳು. ತಮ್ಮಧಾರ್ಮಿಕ ನಂಬಿಕೆಗಳಿಗೆ ತೀವ್ರಧಕ್ಕೆತರುವಂತಹ ಪ್ರಯತ್ನಗಳು, ಘಟನೆಗಳು ನಡೆಯುತ್ತಿದ್ದರೂಕೂಡಾ ಲಕ್ಷಾಂತರ ಅಯ್ಯಪ್ಪಧಾರಿಗಳು ಸಂಯಮವನ್ನುಉತ್ಕೃಷ್ಟ ಮಟ್ಟದಲ್ಲಿಕಾಪಾಡಿಕೊಂಡಿದ್ದಾರೆ. ಏಕೆಂದರೆ ಸಂಯಮವನ್ನು ಮೀರಿದರೆತಮ್ಮ ವ್ರತದ ಶ್ರೇಷ್ಠ ನಿಯಮಗಳನ್ನು ಮುರಿದಂತೆಆಗುತ್ತದೆ.ತಮ್ಮಧಾರ್ಮಿಕ ನಂಬಿಕೆಗಳನ್ನು ಮುರಿಯುವ ಪ್ರಯತ್ನಗಳು ನಡೆಯುತ್ತಿದ್ದರೂಕೂಡಾತಮ್ಮ ವ್ರತ ನಿಯಮಗಳನ್ನು ಮುರಿಯದೆಇದ್ದ ಆ ಎಲ್ಲಾ ಲಕ್ಷಾಂತರ ಅಯ್ಯಪ್ಪಧಾರಿಗಳು ಈ ಮನುಕುಲಕ್ಕೆ ನಿಜಕ್ಕೂಆದರ್ಶಪ್ರಾಯರು.
ಮೇಲೆ ವಿವರಿಸಿದ ಎಲ್ಲಾ ಅಂಶಗಳು ಶಬರಿಮಲೆ ವ್ರತಯಾತ್ರೆಯಅತ್ಯಂತ ಪ್ರಮುಖ ಭಾಗಗಳು.ಈ ಎಲ್ಲಾ ಪ್ರಮುಖ ಘಟ್ಟಗಳನ್ನು ದಾಟಿಬಂದ ನಂತರದಅಂತಿಮ ಭಾಗ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯದೇಗುಲ ಪ್ರವೇಶವಾಗಿದೆ. ಪವಿತ್ರ ಹದಿನೆಂಟು ಸಿದ್ಧಿಗಳ ಸಂಕೇತವಾದ ಹದಿನೆಂಟು ಮೆಟ್ಟಿಲುಗಳನ್ನು ಇರುಮುಡಿಯೊಂದಿಗೆಏರಿ ಮುಂಭಾಗದಿಂದತಮ್ಮಆರಾಧ್ಯದೇವರದೇಗುಲವನ್ನು ಪ್ರವೇಶ ಮಾಡುತ್ತಾರೆ. ಸ್ವಾಮಿಯದರ್ಶನ ಪಡೆದುಜೀವನದ ಸಾರ್ಥಕತೆಯ ಭಾವವನ್ನು ತಳೆಯುತ್ತಾರೆ.ಆದ್ದರಿಂದ ’ದೇಗುಲ ಪ್ರವೇಶ’ ಈ ಯಾತ್ರೆಯಒಂದು ಭಾಗವಾಗಿದೆಯೇ ಹೊರತುದೇಗುಲ ಪ್ರವೇಶವೇ ಈ ಯಾತ್ರೆಯಲ್ಲ. ಶ್ರೀ ಸ್ವಾಮಿಯಅಖಂಡ ಬ್ರಹ್ಮಚರ್ಯ ಪಾಲನೆಯ ತತ್ವಗಳನ್ನು ಗೌರವಿಸುವ ಹಾಗೂ ಎತ್ತಿಹಿಡಿಯುವ ಸಲುವಾಗಿ ಅವುಗಳಿಗೆ ಪೂರಕವಲ್ಲದ ಅಂಶಗಳಿಗೆ ಇಲ್ಲಿಗೌರವಯುತವಾದ ನಿಷೇಧವಿದೆ ಹೊರತುಒಂದು ನಿರ್ದಿಷ್ಟ ಪಂಗಡಕ್ಕಲ್ಲ. ಆದ್ದರಿಂದಇಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯವೆಂದರೆ, ಶ್ರೀ ಸ್ವಾಮಿಯು ನೆಲೆಸಿದ ನೆಲದಲ್ಲಿ, ಅವರ ತತ್ವಗಳನ್ನು ನಾವು ಮೆರೆಯಬೇಕೆ ಹೊರತು, ಮುರಿಯಬಾರದು. ಶ್ರೀ ಸ್ವಾಮಿಯ ಆದರ್ಶಗಳನ್ನು ನಾವು ಎತ್ತಿ ಹಿಡಿಯಬೇಕೇ ಹೊರತುಅಪಚಾರ ಮಾಡುವುದಲ್ಲ. ಇನ್ನು ಸರಳವಾಗಿ ಹೇಳಬೇಕೆಂದರೆ ನಮಗೆ ಯಾರ ಮೇಲೆ ಗೌರವವಿದೆಯೋ, ಭಕ್ತಿಯಿದೆಯೋ ನಾವು ಅವರ ತತ್ವಗಳನ್ನು ಗೌರವಿಸುತ್ತೇವೆ ಹಾಗೂ ಅವುಗಳಿಗೆ ಪೂರಕವಾಗುವರೀತಿಯಲ್ಲಿ ನಡೆದುಕೊಳ್ಳುತ್ತೇವೆ. ಇದಿಲ್ಲದಿದ್ದಲ್ಲಿ ಅವುಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತೇವೆ. ನಮ್ಮದೇಶದಲ್ಲಿಕೋಟ್ಯಂತರ ಮಾತಾಭಗಿನಿಯರು ಶ್ರೀ ಅಯ್ಯಪ್ಪ ಸ್ವಾಮಿಯನ್ನು ನಂಬಿದ್ದಾರೆ ಹಾಗೂ ಆರಾಧಿಸುತ್ತಿದ್ದಾರೆ. ಶ್ರೀ ಸ್ವಾಮಿಯಆದರ್ಶ ತತ್ವಗಳನ್ನು ಗೌರವಿಸುವ ಸಲುವಾಗಿ ಅಯ್ಯಪ್ಪಧಾರಿಗಳು ಆಚರಿಸುವಎಲ್ಲಾ ವ್ರತ ನಿಯಮಗಳಿಗೆ ತಮ್ಮಕೈಲಾದಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.ಅಯ್ಯಪ್ಪಧಾರಿಗಳ ವ್ರತಾಚರಣೆಗೆ ಪೂರಕವಾಗಿ ನಡೆದುಕೊಳ್ಳುವುದೆ ನಾವು ಆಚರಿಸುವ ವ್ರತ ಹಾಗೂ ತೋರಿಸುವ ಸ್ವಾಮಿ ಭಕ್ತಿಎಂದು ನಂಬಿ ನಡೆದುಕೊಳ್ಳುತ್ತಿದ್ದಾರೆ.ವ್ರತ ನಿಯಮದ ಪ್ರಕಾರತಮಗೆ ಶಬರಿಮಲೆಗೆ ಹೋಗುವ ಅವಕಾಶ ಬಂದಾಗ ಭಕ್ತಿಯಿಂದ ಈ ವ್ರತಯಾತ್ರೆಯನ್ನು ಕೈಗೊಳ್ಳುತ್ತಾರೆ.ಆದ್ದರಿಂದಲೇ ಈ ಪವಿತ್ರ ವ್ರತಕ್ಕೆ ಅನೇಕ ಶತಮಾನಗಳ ಇತಿಹಾಸವಿದೆ. ಗ್ರಹಣದಅವಧಿ ದೀರ್ಘವಾಗಿರುವುದಿಲ್ಲ. ಅನೇಕ ಶತಮಾನಗಳಿಂದ ಆಚರಿಸಿಕೊಂಡು ಬಂದ ಈ ಪವಿತ್ರ ಶಬರಿಮಲೆ ವ್ರತಾಚರಣೆಗೆ ಈಗ ಸ್ವಲ್ಪಗ್ರಹಣದ ಭಾದೆಇರಬಹುದು ಹೊರತೆಇದು ಶಾಶ್ವತವಾದತೊಡಕಲ್ಲ. ಶ್ರೀ ಸ್ವಾಮಿಯಅನುಗ್ರಹದಿಂದ ಒಳ್ಳೆಯ ದಿನಗಳು ಖಂಡಿತ ಶೀಘ್ರದಲ್ಲೆ ಬಂದೆ ಬರುತ್ತದೆ.ಇನ್ನು ಮುಂದೆಯೂಕೂಡ ಈ ಪವಿತ್ರಧಾರ್ಮಿಕಆಚರಣೆಯು ಹಿಂದಿನ ಸಂಪ್ರದಾಯದಂತೆ ಮುಂದುವರಿಯುತ್ತಾ ಈ ಮನುಕುಲಕ್ಕೆ ದಾರಿದೀಪವಾಗುತ್ತದೆ. ’ಸ್ವಾಮಿಯೇ ಶರಣಂಅಯ್ಯಪ’.
– ಅನಿಲ್ ಕುಮಾರ್, ಧರ್ಮಸ್ಥಳ
ಮೊ. 9480498266