✍️ *ನೀತು ಪೂಜಾರಿ ಆಜಿಲಮೊಗರು*

ಯಾರಿಗೆ ಇನ್ನೊಬ್ಬರನ್ನು ಬೆಳೆಸುವ ಮನಸ್ಸು ಇರುತ್ತದೋ ಆ ವ್ಯಕ್ತಿ ತಾನಾಗಿಯೇ ಬೆಳೆಯುತ್ತಿರುತ್ತಾನೆ ಎನ್ನುವ ಮಾತನ್ನು ಕೇಳಿದ್ದೀರಾ….
ಆದರೆ ಅದಕ್ಕೆ ತದ್ವಿರುದ್ಧವಾಗಿ ಬೆಳೆದ ವ್ಯಕ್ತಿ ನಮ್ಮೆಲ್ಲೇ ಇದ್ದರೆ…..
ಎಲ್ಲವನ್ನು ತ್ಯಾಗ ಮಾಡಿ, ತನ್ನ ಕಷ್ಟವನ್ನು ಬದಿಗಿಟ್ಟು ಬೆಳೆದ ವ್ಯಕ್ತಿ ನವೀನ್ ಪಿ ಮಿಜಾರ್ ಎನ್ನುವ ಮೃದು ಮನಸ್ಸಿನ ವ್ಯಕ್ತಿ…..
ಯಾವ ವ್ಯಕ್ತಿ ಸಮಾಜಕ್ಕೆ ಹಿತವನ್ನು ಬಯಸಲು ಹೋರಾಟ ಮಾಡುತ್ತಾನೋ ಆ ವ್ಯಕ್ತಿಯನ್ನು ಅವಮಾನಿಸುವವರು, ಹಿಯಾಳಿಸುವವರು ಜಾಸ್ತಿನೇ ಆದರೆ ಅವರನ್ನು ಪ್ರೀತಿಸುವ, ಅಭಿಮಾನದಿಂದ ನೋಡುವವರು ಅದಕ್ಕಿಂತ ದುಪ್ಪಟ್ಟು…..
ಬಯಸದೆ ಬಂದ ಭಾಗ್ಯದಿಂದ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಸಂಸ್ಥೆಯ ನಾಯಕತ್ವವನ್ನು ಹಿಡಿದ ಇವರು ಸಂಸ್ಥೆಯ ಸೇವಾ ಕಾರ್ಯಕರ್ತರ ಸಹಕಾರದಿಂದ ಅದೆಷ್ಟು ಅಶಕ್ತ ಕುಟುಂಬದ ಕಣ್ಣೀರಿಗೆ ನಂದಾದೀಪವಾಗಿದ್ದರೆ ಅನ್ನೋದು ಈ ಸಮಾಜವೇ ಕಂಡಿದೆ.
ಸ್ವಾರ್ಥಮಯದಿಂದ ನಡೆಯುತ್ತಿರುವ ಈ ಸಮಾಜದಲ್ಲಿ ಅಧಿಕಾರದ ಆಸೆಗಾಗಿ ನಾಯಕತ್ವವನ್ನು ಪಡೆದು ಸ್ವಪ್ರತಿಷ್ಠೆಯನ್ನು ಸ್ಥಾಪಿಸುವುದನ್ನು ನಾವು ಕಂಡಿದ್ದೇವೆ. ಅಂತವವರ ಮಧ್ಯೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ನಾನು ನನ್ನದು ನನ್ನಿಂದಲೇ ಎನ್ನುವ ಅಹಂ ಇಲ್ಲದೆ ಇರುವ ವ್ಯಕ್ತಿಗಳಲ್ಲಿ ನವೀನ್ ಪಿ ಮಿಜಾರ್ ಒಬ್ಬರು.
ಅವಮಾನ, ಅಪಮಾನ ಕೊನೆಗೆ ಸನ್ಮಾನ ಇದು ಸಮಾಜದಲ್ಲಿ ನಡೆಯುತ್ತಿರುವ ಒಂದು ಸತ್ಯವಾದ ಘಟನೆಯು ಕೂಡ ಹೌದು ಹಾಗಂತ ಸಮಾಜದ ಹಾಳು ಮಾಡುವವರಿಗೆ ಈ ಸನ್ಮಾನ ನೀಡುವ ಬದಲು ಇಂತಹ ತೆರೆಮರೆಯ ನಾಯಕನಿಗೆ ಸಿಗಬೇಕು ಅಲ್ವಾ….
ಕೆಲವರು ಬಾಯಲ್ಲಿ ಎಷ್ಟೋ ಬೇಕಾದರೂ ಮಾತಾಡುತ್ತಾರೆ ಅದು ಹಾಗೆ ಮಾಡಬೇಕು ಇದು ಹೀಗೆ ಮಾಡಬೇಕಿತ್ತು ಎಂದು ಆದರೆ ಅದನ್ನು ಕಾರ್ಯ ರೂಪಕ್ಕೆ ತರಲು ಅವರಿಗೆ ಆಗಲ್ಲ, ಆದರೆ ಇವರು ಆಗಲ್ಲ ಮಾತಾಡಲ್ಲ, ಅದನ್ನು ಮಾಡಿ ಕಾರ್ಯ ರೂಪಕ್ಕೆ ತಂದು ತೋರಿಸೋದು ಅದಕ್ಕಾಗಿಯೇ ಈ ತುಳುನಾಡ ಪೊರ್ಲು ಸೇವಾ ಟ್ರಸ್ಟ್® ಎತ್ತರಕ್ಕೆ ಬೆಳೆದದ್ದು.
ಇವರು ಏನು ಹೇಗೆ ಅಂತ ಇವರನ್ನು ನಂಬಿದವರಿಗೆ, ಇವರ ಅಭಿಮಾನಿಗಳಿಗೆ, ಈ ಆತ್ಮೀಯರಿಗೆ ಗೊತ್ತು, ಅದನ್ನು ಎಲ್ಲವನ್ನು ಇಲ್ಲಿ ಗೀಚುವ ಅವಶ್ಯಕತೆ ಇಲ್ಲ, ಆದರೆ ಕೆಲಸಕ್ಕೆ ಬಾರದವರು ಇವರ ಕಾಲೆಳೆಯುವವರಿಗೆ ಅಸೂಯೆ ಬರಲಿ ಎಂದು ಬರೆದೆ…
ಕೊನೆಯದಾಗಿ ನನ್ನ ಒಂದು ಅನಿಸಿಕೆ, ಈ ತುಳುನಾಡ ಪೊರ್ಲು ಸೇವಾ ಟ್ರಸ್ಟ್® ಮುಂದುವರಿಯಬೇಕಾದರೆ ನಿಮ್ಮ ನಾಯಕತ್ವ ಬೇಕೇ ಬೇಕು ಅದಕ್ಕಾಗಿ ಇನ್ನು ಮುಂದೆಯೂ ನೀವೇ ಈ ಸಂಸ್ಥೆಯ ನಾಯಕತ್ವ ಆಗಿರಬೇಕೆಂದು ನನ್ನ ಆಸೆ ಎಂದು ಕೇಳಿಕೊಳ್ಳುತ್ತ, ತೆರೆಮರೆಯ ನಾಯಕನಿಗೆ ನನ್ನದೊಂದು ಸಲಾಂ….
Tulunada porlu seva trust(R.)