ಕಲ್ಲಡ್ಕ ಎಂದಾಕ್ಷಣ ಅದೇನೋ ಹೊಸತು ವೈಶಿಷ್ಟ್ಯತೆ ನಮಗೆ ಎದ್ದು ಕಾಣುತ್ತದೆ. ಅಂಥದ್ದೇ ಒಂದು ಕಾರ್ಯಕ್ರಮ ಎಂದರೆ ಅದು ಶ್ರೀರಾಮ ಪದವಿ ವಿಭಾಗದ ಶಿಕ್ಷಕರ ದಿನಾಚರಣೆ.
ಹೌದು ನಾನು ಹೇಳುತ್ತಿರುವುದು ಅದನ್ನೇ ಮೊನ್ನೆ ಸೆಪ್ಟೆಂಬರ್ ಐದು ಶಿಕ್ಷಕರ ದಿನಾಚರಣೆ ಶ್ರೀರಾಮ ಪದವಿ ವಿಭಾಗದಲ್ಲಿ ನಡೆಯಿತು. ಅದು ಕೇವಲ ಅಲ್ಲಿ ಕಲಿಸುವಂಥ ಶಿಕ್ಷಕರು ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರೆ ಅದು ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಸಾಮಾನ್ಯ ಹಾಗೂ ಅದರಲ್ಲಿ ನನಗೇನು ವಿಶೇಷ ಅನ್ನಿಸುತ್ತಿರಲಿಲ್ಲ ಆದರೆ ಇದೊಂದು ಮಕ್ಕಳಿಗೆ ಶಿಕ್ಷಕರ ಮೇಲಿನ ಗೌರವ ಹೆಚ್ಚಿಸುವ ಕಾರ್ಯಕ್ರಮವಾಗಿತ್ತು. ಎಂದು ನನ್ನ ಅನಿಸಿಕೆ.


ಯಾಕೆಂದರೆ ಇಲ್ಲಿ ಶಿಕ್ಷಕ ವೃತ್ತಿ ನಡೆಸುತ್ತಿರುವ ಶಿಕ್ಷಕರ ಗುರುಗಳು ಕೂಡ ತಮ್ಮ ಶಿಷ್ಯರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಎಂದು ಮಾತ್ರ ಹೇಳಿದರೆ ತಪ್ಪಾದೀತು. ಯಾಕೆಂದರೆ ಇಲ್ಲಿಯ ಶಿಕ್ಷಕರು ತಮ್ಮ ಗುರುಗಳನ್ನು ವೇದಿಕೆಗೆ ಕರೆ ತಂದು ಗುರುಗಳ ಪಾದಗಳನ್ನು ತೊಳೆದು ಒರೆಸಿ ಪುಷ್ಪಾರ್ಚನೆಗೈದು ತನ್ನ ಗುರುಗಳ ಕೈಯಿಂದ ತಿಲಕ ಧಾರಣೆ ಮಾಡಿಸಿ. ಗುರುಗಳು ತಮ್ಮ ಶಿಷ್ಯರಿಗೆ ಅಕ್ಷತೆ ಕಾಳುಗಳನ್ನು ತಲೆಗೆ ಹಾಕಿ ಆಶೀರ್ವದಿಸುವುದರ ಮುಖಾಂತರ ಮಕ್ಕಳಿಗೆ ಮಾದರಿ ಶಿಕ್ಷಕರಾದರು. ಇದೊಂದು ಭಾವನಾತ್ಮಕ ಕಾರ್ಯಕ್ರಮ ಅನ್ನುವುದಕ್ಕೆ ಇಲ್ಲಿಯ ಶಿಕ್ಷಕರ ಗುರುಗಳ ಕಣ್ಣಂಚು ಹಾಗೂ ಶಿಕ್ಷಕರ ಕಣ್ಣು ಮತ್ತು ಮುಂದೆ ಕುಳಿತಿದ್ದ ವಿದ್ಯಾರ್ಥಿಗಳ ಕಣ್ಣಂಚುಗಳು ತುಂಬಿ ಹರಿಯುತ್ತಿದ್ದ ಆನಂದಭಾಷ್ಪ ಹೇಳುತ್ತಿತ್ತು ಇದೊಂದು ಕೇವಲ ಶಿಕ್ಷಕರ ದಿನಾಚರಣೆಯಲ್ಲ ಇದೊಂದು ಸಂಬಂಧಗಳ ದಿನಾಚರಣೆ ಇದೊಂದು ಬಾಂಧವ್ಯಗಳ ದಿನಾಚರಣೆ ಇದೆಲ್ಲಕ್ಕಿಂತಲೂ ಹೆಚ್ಚಾಗಿ ಇದೊಂದು ಅರ್ಥಪೂರ್ಣ ದಿನಾಚರಣೆ.
ಶ್ರೀರಾಮ ಪದವಿ ಮಹಾವಿದ್ಯಾಲಯದ ಮಕ್ಕಳಿಗೆ ತನ್ನ ಶಿಕ್ಷಕರ ಶಿಕ್ಷಕರನ್ನು ನೋಡುವ ಸುವರ್ಣ ಅವಕಾಶವನ್ನು ಮಾಡಿಕೊಟ್ಟ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ನನ್ನ ನಮನಗಳು.🙏

✍ ಗಿರೀಶ್ ತುಳಸೀವನ

