Friday, July 4, 2025

ತರಗತಿಗಳ ಆರಂಭ ಮತ್ತು ಕೋವಿಡ್ -19 (ಮುಂದುವರಿದ ಭಾಗ-2)

ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ದಿನಕ್ಕೊಂದು ಅಭಿಪ್ರಾಯ, ಮನಕ್ಕೊಂದು ತೀರ್ಮಾನ ಎಂಬಂತೆ ಇನ್ನೂ ಸಂದಿಗ್ದತೆ ಕೊನೆಗೊಂಡಿಲ್ಲ. ಪಾಳಿ ಬೇಕೆ? ಆನ್‍ಲೈನ್ ಯಾಕೆ? ಶಾಲಾರಂಭ ಆಗಸ್ಟ್ ನಲ್ಲಿ ಸಾಕೇ? ಹೀಗೆ ಪ್ರಶ್ನೆಗಳು ಹೆತ್ತವರನ್ನು ಮತ್ತು ಶಿಕ್ಷಕರನ್ನು ಕಾಡುತ್ತಿದ್ದರೆ ಕೆಲವು ಶಿಕ್ಷಣ ತಜ್ಞರು ಮತ್ತು ಶಾಲಾಡಳಿತ ಮಂಡಳಿಗಳು ತಮ್ಮ ಮೂಗಿನ ನೇರದ ಅಭಿಪ್ರಾಯಗಳನ್ನು ನೀಡುತ್ತಿವೆ. ಖಾಸಗಿಯವರಿಗೆ ದುಡ್ಡು ಮಾಡುವ ಉದ್ದೇಶವಾದರೆ ಸರಕಾರಿಯವರಿಗೆ ಸೇವೆಯ ಆಶಯ. ಸರಕಾರಿ ಶಾಲೆಗಳ ಅಧ್ಯಾಪಕರು ಮತ್ತು ಅನುದಾನಿತ ಶಾಲಾ ಶಿಕ್ಷಕರು ಹಾಗೂ ಬಹುತೇಕ ಅನುದಾನಿತ ಶಾಲಾ ಆಡಳಿತ ಮಂಡಳಿಗಳು ಶಾಲಾರಂಭವನ್ನು ನಿಧಾನಗೊಳಿಸುವುದರ ಪರವಾಗಿದ್ದರೆ, ನಗರಗಳ ಖಾಸಗಿ ಆಡಳಿತ ಮಂಡಳಿಗಳು ಆನ್‍ಲೈನ್ ಮೂಲಕ ಶೈಕ್ಷಣ ಕ ಚಟುವಟಿಕೆಗಳನ್ನು ನೀಡುತ್ತೇವೆ ಎಂದು ಹಣಗಳಿಸುವ ಪ್ರಯತ್ನದಲ್ಲಿ ಶುಲ್ಕ ಪಾವತಿಸಲು ಸಂದೇಶಗಳನ್ನು ಹೆತ್ತವರಿಗೆ ರವಾನಿಸ ತೊಡಗಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚ್ ಮುಂತಾದ ಆರಾಧನಾಲಯಗಳು ಪುನರಾರಂಭವಾಗಿವೆ. ವಿದ್ಯಾಲಯಗಳನ್ನು ಪುನರಾರಂಭಿಸಲು ಮೀನ ಮೇಷ ಏಕೆ? ಎಂಬ ಕುಹಕಗಳೂ ಹರಿದಾಡುತ್ತಿವೆ.

ಶಾಲೆಗಳು ಈಗಾಗಲೇ ಆಡಳಿತ ಮಂಡಳಿ ಅಥವಾ ಎಸ್.ಡಿ.ಎಂ.ಸಿ ಮತ್ತು ಪಾಲಕರ ಜೊತೆ ವಿಚಾರ ವಿನಿಮಯ ಆರಂಭಿಸಿದ್ದು ಶಾಲಾರಂಭದ ಬಗ್ಗೆ ಅವರ ಅಭಿಮತಗಳ ಸಂಗ್ರಹಣೆಯಾಗುತ್ತಿವೆ. ಇಲಾಖೆಯು ನೀಡಿದ ಪ್ರಶ್ನಾವಳಿಯಂತೆಯೇ ವಿಷಯ ಕ್ರೋಢೀಕರಣಗಳಾಗುತ್ತಿವೆ. ಕ್ರೋಢೀಕೃತ ಜನಾಭಿಪ್ರಾಯಗಳು ಜೂನ್ ಇಪ್ಪತರ ನಂತರದಲ್ಲಿ ಸರಕಾರದ ಕೈಸೇರಲಿದ್ದು ಒಂದುವಾರದಲ್ಲಿ ಸರಕಾರ ಈಗಿರುವ ಗೊಂದಲಗಳಿಗೆ ಸಮರ್ಪಕವಾದ ಮತ್ತು ಸರ್ವಜನಾಭಿಪ್ರಾಯಗಳಿಗೆ ಬೆಂಬಲವಾಗುವಂತಹ ನಿರ್ದೇಶನಗಳನ್ನು ಹೊರಡಿಸಬಹುದು. ಶಾಲೆಗಳನ್ನು ಜುಲೈಯಿಂದ ಆರಂಭಗೊಳಿಸುವ ನಿರ್ಧಾರದಲ್ಲಿ ಶೈಕ್ಷಣ ಕ ಹಿತದೃಷ್ಟಿ ಇದೆಯಾದರೂ ಆರೋಗ್ಯದ ಮೇಲೆ ಆಗಬಹುದಾದ ಹಾನಿಗಳನ್ನೂ ಗಮನಿಸಬೇಕಲ್ಲವೇ? ಶಿಕ್ಷಣ ಜೀವನದ ಅವಿಭಾಜ್ಯ ಅಂಗ ಹೌದಾದರೂ ಮೊದಲ ಆದ್ಯತೆ ಜೀವವೇ ತಾನೇ? ಶಾಲೆಗಳಲ್ಲಿ ದಾಖಲಾತಿಯ ಹಂತದಲ್ಲಿ ಹೆತ್ತವರ ಜೊತೆಗೆ ಆರೋಗ್ಯ ರಕ್ಷಣೆಗೆ ಪೂರಕವಾಗಿ ಶ್ರದ್ಧಿಸಲು ಸರಕಾರ ಸುತ್ತೋಲೆ ಹಾಕಿದೆ. ಆ ಸುತ್ತೋಲೆಯು ಹೇಳುವಂತೆ ಅಂತರ ಕಾಯುವುದು, ಸಾನಿಟೈಝೇಷನ್, ಹೆತ್ತವರು ಅನಗತ್ಯವಾಗಿ ಯಾವುದನ್ನೂ ಮುಟ್ಟದಂತೆ ಎಚ್ಚರಿಕೆ ವಹಿಸುವುದು ಎಲ್ಲವೂ ಸವಿವರವಾಗಿವೆ. ಆದರೆ ಇವನ್ನು ಹೆತ್ತವರು ಪಾಲಿಸುವಂತೆ ನೋಡಿಕೊಳ್ಳಲು ಶಿಕ್ಷಕರಿಂದ ಸಾಧ್ಯವೇ? ಪೋಲೀಸರನ್ನೇ ಅಡ್ಡಾಸಿದ ಘಟನೆಗಳು ನಮ್ಮಲ್ಲಿ ಇನ್ನೂ ಜೀವಂತವಾಗಿರುವಾಗ, ಶಿಕ್ಷಕರನ್ನೂ ಅಡ್ಡಾಡಿಸುವ ಘಟನೆಗಳು ಶಾಲೆಗಳಲ್ಲೂ ಆಗುವುದಿಲ್ಲ ಎಂಬ ಖಾತ್ರಿಯಿಲ್ಲವಲ್ಲ.
ಕೊರೋನಾ ಪ್ರಸರಣೆಯ ಪ್ರಚಲಿತ ಪರಿಸ್ಥಿತಿಯನ್ನು ಅವಲೋಕಿಸಿದರೆ ಇನ್ನೂ ಮೂರು ನಾಲ್ಕು ತಿಂಗಳು ಇದೇ ಚಿತ್ರಣ ಉಳಿದುಕೊಳ್ಳುತ್ತದೆ. ಕೊರೋನಾ ಶೂನ್ಯ ಹಂತಕ್ಕೆ ಬರಲು ಇಸವಿ 2021ರ ಪ್ರವೇಶ ಆಗಬೇಕಾದೀತು. ಅವಸರದಲ್ಲಿ ಶಾಲೆಗಳ ಆರಂಭವಾದರೆ ಉಂಟಾಗಬಹುದಾದ ಅಪಾಯಗಳು ಅನೇಕ. ದಿನಾ ಸ್ಯಾನಿಟೈಜೇಷನ್ ಮಾಡುವುದು ಎಳೆಯ ಮಕ್ಕಳ ಕೋಮಲ ಚರ್ಮಕ್ಕೆ ರೋಗವನ್ನುಂಟು ಮಾಡಬಹುದು. ಮಳೆಗಾಲದ ಈ ದಿನಗಳಲ್ಲಿ ಮಕ್ಕಳಿಗೆ ಜ್ವರ, ಶೀv ಮತ್ತು ಕಫಗಳುÀ ಸಾಮಾನ್ಯ. ಇದರಿಂದಾಗಿ ಆಗಾಗ ಮಕ್ಕಳು ಕ್ವಾರೆಂಟೈನ್‍ಗಳಿಗೆ ಒಳಗಾಗುವಂತಾದರೆ? ಅಕಸ್ಮಾತ್ ಒಂದು ಮಗು ಸೋಂಕಿತನೇ ಆದರೆ ಆ ಶಾಲೆಯ ಎಲ್ಲರನ್ನೂ ಕ್ವಾರೆಂಟೈನ್ ಮಾಡಬೇಡ್ವೇ? ಆ ಮಕ್ಕಳ ಹೆತ್ತವರಿಗೂ ಕ್ವಾರೆಂಟೈನ್ ಬೇಕಲ್ಲವೇ? ಇವರೆಲ್ಲರ ಪ್ರಯಾಣ ಇತಿಹಾಸ ನೋಡಿ ಮತ್ತೊಂದಷ್ಟು ಮಂದಿಯೂ ಶಂಕಿತರೆನಿಸುವಂತಾಗದೇ? ಹಾಗಾಗಿ ಈ ಒಂದು ಶೈಕ್ಷಣ ಕ ವರ್ಷ ನಷ್ಟವಾದರೂ ಮಕ್ಕಳ ಜೀವದ ದೃಷ್ಟಿಯಿಂದ ಶಾಲೆಗಳನ್ನು ಆರಂಭಿಸುವುನ್ನು ವಿಳಂಬಿಸುವುದೇ ಸೂಕ್ತ.
ತರಗತಿಯ ಪಾಠ, ಪರೀಕ್ಷೆ ಮತ್ತು ಅಂಕಗಳು ಮಾತ್ರ ಶಿಕ್ಷಣವಲ್ಲ. ಮನೆಯೇ ಮೊದಲ ಪಾಠ ಶಾಲೆಯಲ್ಲವೇ? ಒಂದಷ್ಟು ಸಮಯ ಪಾಲಕರು ಮನೆಯಲ್ಲಿ ಮಕ್ಕಳು ಈಗ ಹೊಂದಿರುವ ಕಲಿಕೆಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಪರ್ಯಾಯವಾದ ಚಿಂತನೆಗಳನ್ನು ಮಾಡಬಹುದೇ? ಅವರಿಗೆ ಏಕಾಗ್ರತೆ, ಶಿಸ್ತು, ಸಮಯಪಾಲನೆಯೊಂದಿಗೆ ಸೂಕ್ತ ವ್ಯಾಯಾಮ, ಆರೋಗ್ಯ ಪೂರಕ ಆಹಾರ ಕ್ರಮಗಳನ್ನು ಕಲಿಸಬಹುದೇ? ಲಿಖಿತ ಪುಸ್ತಕ ಸಾಹಿತ್ಯ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ಮಕ್ಕಳಲ್ಲಿ ಬಲಗೊಳಿಸ ಬಹುದೇ? ಶಾಲಾ ಗ್ರಂಥಾಲಯವನ್ನು ಮಕ್ಕಳ ಮನೆ ಮನೆ ತಲುಪಿಸುವ ಯೋಚನೆ ಮಾಡಬಹುದೆ? ಮನೆಯಲ್ಲೇ ಓದಿ ಕಲಿತವರಿಗೆ ಇಲಾಖೆ ಪರೀಕ್ಷೆ ಮಾಡಿ ಮುಂದಿನ ತರಗತಿಗೆ ದಾಖಲಿಸಬಹುದೇ? ವಿನೂತನ ಕಲಿಕಾ ವ್ಯವಸ್ಥೆಗಳನ್ನು ಪರಿಶೀಲಿಸಲು ಇದು ಸಕಾಲವಾಗಬಹುದೇ? ಈ ಎಲ್ಲ ದಿಕ್ಕುಗಳಿಗೂ ನಮ್ಮ ಮನಸನ್ನು ಹರಿಯ ಬಿಡಬಹುದಲ್ಲವೇ?
ಕೆಲವು ಹೆತ್ತವರು ಹೇಳುವಂತೆ, “ಮಕ್ಕಳು ಮನೆಯಲ್ಲಿದ್ದರೆ ಅವರನ್ನು ಆಳುವುದು ಯಾರು? ಅವರು ಬೇಕಾ ಬಿಟ್ಟಿಯಾಗಿರುವುದಕ್ಕಿಂತ ಶಾಲೆಯಾದರೂ ಇದ್ದರೆ ಒಳಿತು. ಕಾಯಿಲೆ ಬರುವಂತಹದಿದ್ದರೆ ಮನೆಯಲ್ಲಿದ್ದರೂ ಬರುವುದಿಲ್ಲವೆ? ಶಾಲೆಯಿಲ್ಲವೆಂದಾದರೆ ಮಕ್ಕಳು ಹಾಳಾಗಿ ಹೋಗುತ್ತಾರೆ”.
ಅವರ ಮಾತುಗಳಲ್ಲಿ ಅರ್ಧ ಸತ್ಯವಿದೆ. ಶಾಲೆಗಳ ಹೊರತಾದ ಶೈಕ್ಷಣ ಕ ಚಟುವಟಿಕೆಗಳಿಗೆ ನಮ್ಮ ದೇಶ ಪೂರಕವಲ್ಲ. ಹಾಗಾಗಿ ಶಾಲೆಗಳೇ ಬೇಕು, ಆನ್‍ಲೈನ್ ಬೋಧನೆ ಬೇಡವೇ ಬೇಡ. ಕಾಯಿಲೆಯು ಬರುವಂತಹದಿದ್ದರೆ ಮನೆಯಲ್ಲದ್ದರೂ ಬರಬಹುದೆಂಬ ಮಾತು ಎಷ್ಟು ಸತ್ಯವೋ ಹಾಲಾಗುವಂತಹ ಮಕ್ಕಳು ಶಾಲೆಗೆ ಹೋದರೂ ಉದ್ಧಾರವಾಗರು ಎಂಬ ಮಾತೂ ಅಷ್ಟೇ ದಿಟ. ಕೆಲವೇ ಹೆತ್ತವರ ಬೇಜವಾಬ್ದಾರಿಯಿಂದ ಅವರ ಮಕ್ಕಳು ಹಾಳಾಗುತ್ತಿರುವುದು ದುರದೃಷ್ಟಕರ.

ಲೇ: ರಮೇಶ ಎಂ. ಬಾಯಾರು ಎಂ.ಎ, ಬಿಎಡ್,
ನಿವೃತ್ತ ರಾಜ್ಯಪ್ರಶಸ್ತಿ ಪುರಸ್ಕøತ ಶಿಕ್ಷಕರು
‘ನಂದನ’ ಕೇಪು- 574243

More from the blog

ಬೆಂಜನಪದವು ಶಾಲೆ : ಉಚಿತ ಯಕ್ಷಗಾನ ನಾಟ್ಯ ತರಗತಿ ಶುಭಾರಂಭ..

ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ಗೊಂಡಿತು. ಫೌಂಡೇಶನ್ ನ ಸಂಚಾಲಕರಾದ ಶ್ರೀ ವಾಸುದೇವ ಐತಾಳ್ ದೀಪ...

ಜು.12ರಂದು ಬಂಟ್ವಾಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್..

ಬಂಟ್ವಾಳ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜು.12ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವರ...

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...