ಬಂಟ್ವಾಳ: ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಪ್ಪು ಕಲ್ಲುಗಳನ್ನು ಹೊಡೆಯುತ್ತಿದ್ದ ಬಾಲಪರಾಧಿ ಸಹಿತ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.


ಬಾಗಲಕೊಟೆ ನಿವಾಸಿ ಲಕ್ಷಣ್ ಅಂಬಾಣಿ ಮತ್ತು ಯುವಕ ಆರೋಪಿಗಳು. ಬಂಧಿತರಿಂದ ಸುಮಾರು ಐದು ಸಾವಿರ ರೂ. ಮೌಲ್ಯದ ಸ್ಫೋಟಕಗ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಕುಚ್ಚಿಗುಡ್ಡೆ ಎಂಬಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿಕೊಂಡು ಕಪ್ಪು ಕಲ್ಲುಗಳನ್ನು ಒಡೆಯುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು. ಹಾಗಾಗಿ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಠಾಣಾ ಎಸ್ ಐ ಚಂದ್ರಶೇಖರ್ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಉಳಿದಂತೆ ಈ ಅಕ್ರಮ ಕಾಮಗಾರಿಯ ಹಿಂದೆ ಇರುವ ವ್ಯಕ್ತಿಗಳ ಮಾಹಿತಿ ಕಲೆಹಾಕುತ್ತಿದ್ದು ಶೀಘ್ರವಾಗಿ ಬಂಧನ ಮಾಡುವುದಾಗಿಯೂ ತಿಳಿಸಿದ್ದಾರೆ.
ಕಾರ್ಯಚರಣೆ ಯಲ್ಲಿ ಎ.ಎಸ್.ಐಗಳಾದ ಶಿವರಾಮ, ಜಿನ್ನಪ್ಪ, ಎಚ್.ಸಿ.ಸುಜು ಪಾಲ್ಗೊಂಡಿದ್ದರು.