ಬಂಟ್ವಾಳ: ಬಿ ಮೂಡ ಗ್ರಾಮದ ತಲಪಾಡಿ ಬಳಿಯ ದುರ್ಗಾ ಗ್ಯಾರೇಜ್ ಬಳಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾ.ನ ಮಂಚಿಗ್ರಾಮದ ಕುಕ್ಕಾಜೆ ನಿವಾಸಿ ದಿ.ಅಬುಬಕ್ಕರ್ ಅವರ ಮಗ ಸಂಶುದ್ಧಿನ್ ( 25 ) ಬಂಧಿತ ಆರೋಪಿಯಾಗಿದ್ದಾನೆ.


ಖಚಿತ ಮಾಹಿತಿಯನ್ನಾಧರಿಸಿ ಬಂಟ್ವಾಳ ನಗರ ಠಾಣೆಯ ಎಸ್ ಐ ಚಂದ್ರಶೇಖರ್ ಮತ್ತವರ ಸಿಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಉಳ್ಳಾಲದ ಮಿಸ್ಬಾ ಎಂಬಾತನಿಂದ ಉಪ್ಪಿನಂಗಡಿಯ ಒರ್ವ ವ್ಯಕ್ತಿ ಯ ಮುಖಾಂತರ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತನಿಖೆಯ ವೇಳೆ ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 1.896 ಕೆ.ಜಿ. ಗಾಂಜಾ,ಮೊಬೈಲ್,ನಗದು 110 ರೂ.ವನ್ನು ವಶಪಡಿಸಲಾಗಿದ್ದು, ಇದರ ಮೌಲ್ಯ 40.000/- ರೂ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.