Friday, June 27, 2025

ಫರಂಗಿಪೇಟೆ ಕಡೆಗೋಳಿ ಚೌಟ ಗ್ಯಾಸ್ ಏಜೆನ್ಸಿಯಲ್ಲಿ ಕಳವು ಆರೋಪಿ ಬಂಧನ

ಬಂಟ್ವಾಳ ಜ. ೧೧: ಫರಂಗಿಪೇಟೆ ಕಡೆಗೋಳಿ ಚೌಟ ಇಂಡೇನ್ ಗ್ಯಾಸ್ ಏಜನ್ಸಿ ಕಚೇರಿಯಲ್ಲಿ ಜ. ೧೦ರಂದು ಕಳೆದ ಐದು ತಿಂಗಳ ಹಿಂದೆ ಕಳವು ಮಾಡಿದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿದಿಸಲಾಗಿದೆ.
ಆರೋಪಿಯನ್ನು ಮೂಡಬಿದಿರೆ ನಿವಾಸಿ ಪ್ರಸಾದ್ ಪೂಜಾರಿ (೨೮) ಎಂದು ಗುರುತಿಸಲಾಗಿದೆ. ಬಾಲ್ಯದಿಂದಲೇ ಕಳವು ಹವ್ಯಾಸ ಮೈಗೂಡಿಸಿಕೊಂಡಿದ್ದ ಆತ ಹಲವಾರು ಕಡೆಗಳಲ್ಲಿ ಕಳವು ನಡೆಸಿ, ಒಂದು ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದ.
ತೊಕ್ಕೊಟ್ಟಿನ ಲಾಡ್ಜ್ ಒಂದರಲ್ಲಿ ಕೆಲವು ದಿನಗಳ ಹಿಂದೆ ರೂಂ ಮಾಡಿದ್ದ ಆರೋಪಿ ಹೊರ ಹೋದವನು ನಾಲ್ಕೈದು ದಿನಗಳಿಂದ ರೂಮಿಗೆ ಬಾರದೆ ಕೀ ಹಿಂತಿರುಗಿಸದ ಕಾರಣ ಲಾಡ್ಜ್‌ನಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಉಪಸ್ಥಿತಿಯಲ್ಲಿ ಬಾಗಿಲು ತೆರೆಸಿ ಪರಿಶೀಲನೆ ಮಾಡಿದಾಗ ದೊರೆತ ಹಲವಾರು ಮೊಬೈಲ್, ಪೆನ್‌ಡ್ರೈವ್‌ಗಳನ್ನು ತಪಾಸಣೆ ಮಾಡಿದಾಗ ಈತ ಕಳವು ಪ್ರಕರಣದಲ್ಲಿ ಶಿಕ್ಷೆ ಪಡೆದ ಆರೋಪಿ ಎಂದು ಗುರುತಿಸಲಾಗಿತ್ತು.
ಕೆಲವು ದಿನಗಳನ್ನು ಬಿಟ್ಟು ಈ ಸಾಮಾಗ್ರಿಗಳನ್ನು ಕೊಂಡು ಹೋಗಲು ಆರೋಪಿಯು ಲಾಡ್ಜ್‌ಗೆ ಬಂದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಬಂಧನಕ್ಕೆ ಕಾರಣವಾಗಿತ್ತು. ಕಂಕನಾಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾಗ ಚೌಟ ಗ್ಯಾಸ್‌ನಲ್ಲಿ ನಡೆಸಿದ ಕಳವು,ಮಂಗಳೂರು ಪಡೀಲ್ ಟೊಯೋಟ ಕಂಪೆನಿಯಲ್ಲಿ ನಡೆದ ಕಳವು ಪ್ರಕರಣ, ಮಂಗಳೂರು ನಗರದಲ್ಲಿ ಎರಡು ಮೊಬೈಲ್ ಅಂಗಡಿಯಲ್ಲಿ ನಡೆದ ಕಳವು ಪ್ರಕರಣದ ಬಗ್ಗೆ ಬಾಯಿ ಬಿಟ್ಟಿದ್ದ ಎನ್ನಲಾಗಿದೆ.
ಚೌಟ ಗ್ಯಾಸ್ ಏಜೆನ್ಸಿ ಕಟ್ಟಡದ ಹಿಂಬಾಗದ ಕಿಟಕಿಯ ವೆಲ್ಡ್ ಮಾಡಿದ ಸರಳನ್ನು ಲಿವರ್ ಬಳಸಿ ಬಾಗಿಸುವ ಮೂಲಕ ಒಳ ನುಗ್ಗಿ ನಗದು ಮತ್ತು ಒಂದು ಮೊಬೈಲ್ ಕಳವು ಮಾಡಿದ್ದ. ಕಳವು ಮಾಡುವಾಗ ಮುಖಕ್ಕೆ ಕಪ್ಪು ಬಟ್ಟೆಯ ಮುಸುಕು ಹಾಕಿಕೊಂಡು, ಎರಡು ಕೈಗಳಿಗೆ ಗ್ಲೌಸ್ ಹಾಕಿಕೊಂಡಿದ್ದು ಒಂದು ಕೈಯಲ್ಲಿ ಚಿಕ್ಕದಾಗಿ ಮಿನುಗುವ ಲೈಟ್ ಮತ್ತು ಇನ್ನೊಂದು ಕೈಯಲ್ಲಿ ಸ್ಕ್ರೂಡ್ರೈವರನ್ನು ಹಿಡಿದುಕೊಂಡು ಕಳ್ಳನು ಓಡಾಡುವ ದ್ರಶ್ಯ ಚಲನವಲನಗಳು ಸಿಸಿ ಕೆಮರಾದಲ್ಲಿ ಆಗ ಸ್ಪಷ್ಟವಾಗಿ ಮೂಡಿತ್ತು.
ಘಟನೆಯ ಸಂದರ್ಭದಲ್ಲಿ ಪೊಲೀಸರು ಕಳವು ಮಾಡಿದವ ವೃತ್ತಿಪರ ಹಾಗೂ ವಾಹನದಲ್ಲಿ ಬಂದು ಕಳವು ನಡೆಸಿದ್ದಾಗಿ ಶಂಕಿಸಿದ್ದರು. ಅದೇ ಪ್ರಕಾರ ಅವನೊಬ್ಬ ವೃತ್ತಿಪರ ಕಳ್ಳನಾಗಿದ್ದು ಏಕಾಂಗಿಯಾಗಿ ಕಳವು ನಡೆಸುತ್ತಿದ್ದ. ಶ್ವಾನವು ಕಳ್ಳನ ಜಾಡು ಹಿಡಿದು ಸುಮಾರು ದೂರಕ್ಕೆ ಹೋಗಿ ಅಂಗನವಾಡಿ ಕಟ್ಟಡದ ಬಳಿ ನಿಂತಿತ್ತು. ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಂತೆ ಆರೋಪಿಯು ಅಂಗನವಾಡಿ ಕಟ್ಟಡದ ಬಳಿ ತನ್ನ ದ್ವಿಚಕ್ರ ಕೆನೆಟಿಕ್ ನಿಲ್ಲಿಸಿ ನಡೆದುಕೊಂಡು ಕಟ್ಟಡದ ಹಿಂಬದಿಗೆ ಬಂದು ಕಳವು ಮಾಡಿದ್ದ.
ಆರೋಪಿಯಿಂದ ಕಳವು ಮಾಡಿದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ ನಗದಲ್ಲಿ ಆತ ಮೂಡಬಿದಿರೆಯಲ್ಲಿ ಕೆಲವರಿಂದ ಪಡೆದ ಕೈಸಾಲವನ್ನು ಸಂದಾಯಿಸಿದ್ದಾಗಿ ಉಪಯೋಗಿಸಿದ್ದಾಗಿ ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ಯೆ ಗೌಡ ನೇತೃತ್ವದಲ್ಲಿ ಸಿಬಂದಿಗಳು ತನಿಖೆ ನಡೆಸುತ್ತಿದ್ದಾರೆ.

More from the blog

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...