ಬಂಟ್ವಾಳ: ವಾಮದಪದವು ಸಮೀಪದ ಮಾವಿನಕಟ್ಟೆಯ ಮನೆಯೊಂದರ ಬಳಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪುಂಜಾಲಕಟ್ಟೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.


ಇಲ್ಲಿನ ನಿವಾಸಿ ಸದಾನಂದ ಪೂಜಾರಿ ಎಂಬಾತ ಆರೋಪಿಯಾಗಿದ್ದು, ಆತನಿಂದ ಎರಡು ಬಾಕ್ಸ್ ಬೀಯರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ತನ್ನ ಮನೆಯ ಬಳಿಯ ಗುಡ್ಡದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಹಿಳೆಯರು ದೂರು ನೀಡಿದ್ದರು.












