ಬಂಟ್ವಾಳ: ಅಡಿಕೆ ಆಮದು ನಿಷೇಧಿಸುವಂತೆ ಒತ್ತಾಯಿಸಿ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ರೈತ ಒಕ್ಕೂಟದ ವತಿಯಿಂದ ಮಾ.7 ರಂದು ಇಂದು ಗುರುವಾರ ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ನಡೆದ ವಾಹನ ಜಾಥವನ್ನು ಹಿರಿಯ ಕೃಷಿಕ ದಿವಾಕರ್ ಪೈ ಮಜಿಗುಂಡಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರೈತ ಪರವಾದ ಘೋಷಣೆಗಳನ್ನು ಕೂಗಿದರು. ಅ ಬಳಿಕ ಟ್ರ್ಯಾಕ್ಟರ್ ಹಾಗೂ ವಿವಿಧ ವಾಹನಗಳ ಜಾಥದ ಮೂಲಕ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಕಳ್ಳ ಮಾರ್ಗದಿಂದ ಯಥೇಚ್ಛವಾಗಿ ಅಡಿಕೆ ಗಡಿಭಾಗದಿಂದ ಬರುತ್ತಿದ್ದು ಇದನ್ನು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣ ವಿಫಲಾವಾಗಿದ್ದು, ಇದರ ಪರಿಣಾಮವಾಗಿ ಅಡಿಕೆ ಬೆಲೆ ಕುಸಿದು,ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ರೈತ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅದಕ್ಕೂ ಮುನ್ನ ಬಿಸಿರೋಡಿನ ವೃತ್ತದಿಂದ ಟ್ರ್ಯಾಕ್ಟರ್ ಹಾಗೂ ವಾಹನ ಜಾಥದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮುಖಂಡನಾಗರತ್ನ, ಸನ್ನಿ ಡಿಸೋಜ, ಓಸ್ವಾಲ್ಡ್ ಪೆರ್ನಾಂಡಿಸ್, ರೂಪೇಶ್ ರೈ, ಅಮರನಾಥ ಆಳ್ವ,ಭಾಸ್ಕರ್ ರೈ, ಅಲ್ವಿನ್ ಮಿನೇಜಸ್ ಮತ್ತಿತರ ಪ್ರಮುಖರು ಹಾಗೂ ನೂರಾರು ರೈತರು ವಾಹನ ಜಾಥದಲ್ಲಿ ಭಾಗವಹಿಸಿದರು.