ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ದ ಪ್ರಯುಕ್ತ ನಡೆಯುವ ಶ್ರೀ ಉಳ್ಳಾಕುಲು ಮಗೃಂತಾಯಿ ಮತ್ತು ಪರಿವಾರ ದೈವಗಳ ಮೆಚ್ಚಿ ನೇಮಕ್ಕೆ ಶ್ರದ್ದಾ ಭಕ್ತಿ ಹಾಗೂ ಸಾಮರಸ್ಯದ ಕ್ಷೇತ್ರವಾದ ಅರ್ಕುಳ ಬೀಡಿನಿಂದ ಇಂದು ಮುಂಜಾನೆ 6.30 ಕ್ಕೆ ಭಂಡಾರದ ಶೋಭಾಯಾತ್ರೆ ನಡೆಯಿತು.
ವರ್ಷಾವಧಿ ಜಾತ್ರೆಯ ಪುಣ್ಯವಸರದಲ್ಲಿ ಪೂರ್ವಕಟ್ಟುಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿ ಗೆ ಇಂದು ದ್ವಜಾವರೋಹಣದ ಬಳಿಕ ರಾತ್ರಿ ಧರ್ಮ ದೈವಗಳ ನೇಮ ಸೇವೆ ಸಂಪನ್ನಗೊಳ್ಳಲಿದೆ.
