ಬಂಟ್ವಾಳ : 18 ವರ್ಷದ ಹಿಂದೆ ಸ್ಥಾಪನೆಯಾದ ” ಟೀಮ್ ವೀರಾಂಜನೇಯ ಫರಂಗಿಪೇಟೆ” ತಂಡದ ನೂತನ ಲಾಂಛನ ಬಿಡುಗಡೆ ಹಾಗೂ ಸಂಕಲ್ಪ ಸಮೃದ್ಧಿ ಸಾರ್ಥಕತೆ ಎಂಬ ಧ್ಯೇಯ ವಾಕ್ಯ ಅನಾವರಣ ಕಾರ್ಯಕ್ರಮವು ಅರ್ಕುಳ ಬೀಡುವಿನಲ್ಲಿ ನಡೆಯಿತು.

ಅರ್ಕುಳ ಬೀಡು ಧರ್ಮದರ್ಶಿಗಳಾದ ವಜ್ರನಾಭ ಶೆಟ್ಟಿ ಅವರು ಲಾಂಛನದ ಬಿಡುಗಡೆಗೊಳಿಸಿದರು. ಉಜಿರೆ ರಸ್ ಡಿ ಎಂ ಕಾಲೇಜಿನ ಉಪನ್ಯಾಸಕರಾದ ಡಾ|| ಜಯಕುಮಾರ್ ಶೆಟ್ಟಿ ಧ್ಯೇಯ ವಾಕ್ಯವನ್ನು ಅನಾವರಣಗೊಳಿಸಿ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮುಖೇನ ಅಸ್ತಿತ್ವಕ್ಕೆ ಬಂದಿರುವ ಟೀಮ್ ವೀರಾಂಜನೇಯ ಫರಂಗಿಪೇಟೆ ಯುವಕರ ತಂಡದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸ್ಥಳೀಯವಾಗಿ ಗುರುತಿಸಿರುವದನ್ನು ಶ್ಳಾಘಿಸಿದರು. ಇದಕ್ಕು ಮೊದಲು ಅರ್ಕುಳ ಬೀಡು ಧರ್ಮ ಚಾವಡಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು, ಸ್ಥಳೀಯ ಗಣ್ಯರಾದ ಕಂಪ ಸದಾನಂದ ಅಲ್ವಾ, ಚಂದ್ರಶೇಖರ ಗಾಂಭೀರ, ಜನಾರ್ದನ ಅರ್ಕುಳ, ಜಯರಾಜ್ ಕರ್ಕೇರ, ಸಂತೋಷ್ ಕುಮಾರ್ ತುಪ್ಪೆಕಲ್ಲು,ಕೆ ಆರ್ ಶೆಟ್ಟಿ ಅಡ್ಯಾರ್ ಪದವು, ಸೇಸಪ್ಪ ಕರ್ಕೇರ ಧರ್ಮಗಿರಿ ಮೊದಲಾದವರು ಉಪಸ್ಥಿತರಿದ್ದರು.
ದಿನಕರ ಕರ್ಕೇರ ಮಂಟಮೆ ಸ್ವಾಗತಿಸಿ, ವಂದಿಸಿದರು.