Thursday, February 13, 2025

ಅಡಿಕೆ ಧಾರಣೆ ಏರಿಕೆ : 170ಕ್ಕೆ ತಲುಪಿದ ಕೊಕ್ಕೊ… ಬೆಳೆಗಾರರ ಮುಖದಲ್ಲಿ ಮಂದಹಾಸ

ಪುತ್ತೂರು: ಮಂಗಳೂರು ಚಾಲಿ ಅಡಿಕೆ ಧಾರಣೆ ಹಾಗೂ ಕೊಕ್ಕೊ ಧಾರಣೆ ಏರಿಕೆಯತ್ತ ಮುಖಮಾಡಿದ್ದು, ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಕ್ಯಾಂಪ್ಕೋ, ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಸ್ಥಿರವಾಗಿದ್ದರೆ, ಆದರೆ ಸಿಂಗಲ್ ಚೋಲ್, ಡಬ್ಬಲ್ ಚೋಲ್ ಧಾರಣೆ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳ ಧಾರಣೆಯ ಅಂಕಿ-ಅಂಶ ಗಮನಿಸಿದರೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್‌ ಚೋಲ್‌ ಕೆ.ಜಿ.ಗೆ 20 ರೂ., ಡಬ್ಬಲ್‌ ಚೋಲ್‌ ಕೆ.ಜಿ.ಗೆ 20 ರೂ., ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 8 ರಿಂದ 10 ರೂ., ಸಿಂಗಲ್‌ ಚೋಲ್‌ ಕೆ.ಜಿ.ಗೆ 20ರಿಂದ 25 ರೂ., ಡಬ್ಬಲ್‌ ಚೋಲ್‌ ಕೆ.ಜಿ.ಗೆ 20ರಿಂದ 23 ರೂ.ನಷ್ಟು ಏರಿಕೆ ಕಂಡಿದೆ.

ಕ್ಯಾಂಪ್ಕೋ ಮಾರು ಕಟ್ಟೆಯಲ್ಲಿ ಮಾ. 12ರಂದು ಹೊಸ ಅಡಿಕೆಗೆ ಹೊಸ ಅಡಿಕೆಗೆ 340-350 ರೂ., ಸಿಂಗಲ್‌ ಚೋಲ್‌ಗೆ 418 ರೂ.ನಿಂದ 420 ರೂ., ಡಬ್ಬಲ್‌ ಚೋಲ್‌ 430 ರೂ.ನಿಂದ 440 ರೂ. ತನಕ ಇತ್ತು. ಮಾ. 18ರಂದು ಹೊಸ ಅಡಿಕೆಗೆ 340ರಿಂದ 350 ರೂ., ಸಿಂಗಲ್‌ ಚೋಲ್‌ಗೆ 420ರಿಂದ 430 ರೂ., ಡಬ್ಬಲ್‌ ಚೋಲ್‌ಗೆ 435 ರಿಂದ 445 ರೂ. ತನಕ ಧಾರಣೆ ಇತ್ತು.

ಇನ್ನು ಅಡಿಕೆ ಧಾರಣೆ ಜೊತೆಗೆ ಕೊಕ್ಕೊ ಧಾರಣೆ ಕೂಡ ಏರಿಕೆ ಕಂಡಿದೆ. ನಾಲ್ಕು ದಿನಗಳ ಹಿಂದೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 170 ರೂ. ದರದಲ್ಲಿ ಮಾರಾಟವಾಗಿದೆ. ಒಣ ಕೊಕ್ಕೊ ಕೆ.ಜಿ.ಗೆ 500-575 ರೂ. ವರೆಗೆ ಖರೀದಿಯಾಗಿದೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...