ಬಂಟ್ವಾಳ: ತಾಲೂಕಿನ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ನಡ್ವಂತಾಡಿ ಶ್ರೀ ಉದಯ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.18ರಿಂದಆರಂಭಗೊಂಡಿದ್ದು, ಫೆ.23ರವರೆಗೆ ಜರಗಲಿದೆ.

ಫೆ.20ರಂದು ನಡುಬಲಿ ಉತ್ಸವ, ಚಂದ್ರಮಂಡಲೋತ್ಸವ ನಡೆಯಲಿದೆ. ರಾತ್ರಿ ಬೆಂಗಳೂರು ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದವರಿಂದ ದಶಾವತಾರ ನೃತ್ಯ ರೂಪಕ ನಡೆಯಲಿದೆ. ಫೆ.21ರಂದು ಸಂಜೆ ಭಜನೆ, ರಾತ್ರಿ ಮಹಾರಥೋತ್ಸವ, ಬಾಲಗೋಕುಲದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಂಗ ಪೂಜೆ ನಡೆಯಲಿದೆ.
ಫೆ.22ರಂದು ಶ್ರೀ ಚಂಡಿಕಾಯಾಗ, ಹರಕೆ ತುಲಾಭಾರ ಸೇವೆ, ಸಂಜೆ ಭಜನೆ, ಶ್ರೀ ದೇವರ ಬಲಿ ಉತ್ಸವ,ಅವಭೃತ ಸ್ನಾನ, ಧ್ವಜಾವರೋಹಣ, ರಾತ್ರಿ ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಇವರಿಂದ ತುಳು ನಾಟಕ ಸಂಕಲೆ ಪ್ರದರ್ಶನ, ಶ್ರೀ ಧೂಮಾವತಿ, ಮಹಿಷಂತಾಯ ದೈವಗಳ ನೇಮ ನಡೆಯಲಿದೆ.ಫೆ.23ರಂದು ಸಂಪ್ರೋಕ್ಷಣೆ ನಡೆಯಲಿದೆ .