ಆರಾಧನಾ ಫ್ರಂಡ್ಸ್ ಸರ್ಕಲ್ ಇವರ 36 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹನುಮಗಿರಿ ಮೇಳದವರಿಂದ ಯಕ್ಷಗಾನ ಜರಗಿತು.

ಈ ಸಂದರ್ಭದಲ್ಲಿ ಕಲಾ ಪೋಷಕಿ ಶಾರದಾ ಬೊಕ್ಕಸ ಇವರಿಗೆ ಆರಾಧನ ಪ್ರಶಸ್ತಿ 2024 ನ್ನು ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ದ ಅಂಗವಾಗಿ ಅನನ್ಯ ಎಲ್.ಎಸ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇ.ಮೂ. ಶಿವರಾಮ ಮಯ್ಯ, ಜಯಶಂಕರ್ ಬಾಸ್ತ್ರಿತ್ತಾಯ, ಹರೀಶ್ ಕೋಟ್ಯಾನ್ ಕುದನೆ, ಡಾ.ಶಿವರಾಮ ಹೊಳ್ಳ, ಗಣಪತಿ ಸೋಮಯಾಜಿ, ಕೆ. ನರೇಶ್ ಹೊಳ್ಳ, ಕೆ.ಸುರೇಶ್ ಹೊಳ್ಳ, ಗಣೇಶ್, ಯೋಗೀಶ್, ಪ್ರಕಾಶ್ ಸಂಜೀವಾ ಕೊಟ್ಟಾರಿ, ರಾಮಚಂದ್ರ ಮಯ್ಯ ಉಪಸ್ಥಿತರಿದ್ದರು.
ಜಗದೀಶ್ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.