ಬಂಟ್ವಾಳ: ಅಂದ ಹಾಗೆ ಇವತ್ತು ಎ.1. ಎಪ್ರಿಲ್ ಪೂಲ್ ಅಗದಿರಿ ಎಂದು ನೆನಪಿಸುವ ಉದ್ದೇಶದಿಂದ ಈ ಸಂದೇಶ ನೀಡುತ್ತಿದ್ದೇವೆ.
ಕೆಲವರು ಇಷ್ಟೋತ್ತಿಗೆ ಈ ಸಂದೇಶ ನೊಡುವಷ್ಟರಲ್ಲಿ ಎಪ್ರಿಲ್ ಪೂಲ್ ನ ಬಲೆಗೆ ಬಿದ್ದಾಗಿರಬಹುದು.
ಕೆಲವರು ಈ ಸಂದೇಶ ನೋಡಿ ಮನಸ್ಸೊಳಗೆ ನಗುತ್ತಿರಬಹುದು. ಎಪ್ರಿಲ್ ಒಂದು ಅಂದಾಕ್ಷಣ ಬೆಳಿಗ್ಗೆ ಬೆಳಿಗ್ಗೆ ಯೇ ಪೋನ್ ಮಾಡಿ ಸ್ನೇಹಿತರು ಅಭಿಮಾನಿಗಳು ಪೂಲ್ ಮಾಡುವುದು ಮಾಮೂಲಿ, ಏನೇ ಇರಲಿ ಎಪ್ರಿಲ್ ಪೂಲ್ ನ ಸಣ್ಣ ವಿಚಾರಕ್ಕೆ ಯಾರೂ ಸ್ನೇಹ ಕಳೆದುಕೊಳ್ಳಬೇಡಿ ಎಂಬುದೇ ನಮ್ಮ ಬಂಟ್ವಾಳದ ಆಶಯ.
