ವಿಟ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಮತ್ತು ಬಾಲವಿಕಾಸ ಮಹಿಳಾ ಮಂಡಲ ಅಂಗನವಾಡಿ ಕೇಂದ್ರ ವಿಟ್ಲ ಇದರ ಸಹಯೋಗದೊಂದಿಗೆ ನಿವೃತ್ತ ಅಂಗನವಾಡಿ ಸಹಾಯಕಿ ಇಂದಿರಾ ಅವರನ್ನು ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.
ಈ ಕಾರ್‍ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಉದ್ಘಾಟಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಮಹಿಳಾ ಮಂಡಲದ ಸ್ಥಾಪಕಾಧ್ಯಕ್ಷರಾದ ಕಮಲ ಕೆ. ಭಟ್ ನಿವೃತ್ತರನ್ನು ಸನ್ಮಾನಿಸಿದರು. ವಿಟ್ಲ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಉಪಾಧ್ಯಕ್ಷ ಜಯಂತ ನಾಯ್ಕ, ಸದಸ್ಯರುಗಳಾದ ರಾಮದಾಸ ಶೆಣೈ, ಅಶೋಕ ಶೆಟ್ಟಿ ಮತ್ತು ಉಷಾ ಕೆ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ, ಬಾಬು ಕೊಪ್ಪಳ ಹಾಗೂ ಸಿಡಿಪಿಒ ಸುಧಾ ಜೋಷಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸವಿತಾ ಜತ್ತಪ್ಪ ಗೌಡ ಸ್ವಾಗತಿಸಿದರು. ಅಂಗನವಾಡಿ ಕಾರ್‍ಯಕರ್ತೆ ಮೂಕಾಂಬಿಕಾ ವಂದಿಸಿದರು. ಮೇಲ್ವಿಚಾರಕಿ ರೋಹಿಣಿ ಕಾರ್‍ಯಕ್ರಮ ನಿರೂಪಿಸಿದರು.

