Monday, February 2, 2026

ಬಲ್ಲು ಕೊರಗ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯ ಹಾಗೂ ಜೇನು‌ಕುರುಬರ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ಜನ್ ಮನ್ ಯೋಜನೆಯ ಮೂಲಕ 20 ಕೋಟಿ ರೂ ಮಂಜೂರಾಗಿದೆ, ಸಮಾಜದ ಎಲ್ಲಾ ವರ್ಗದವರನ್ನು ಮುಖ್ಯವಾಹಿನಿಗೆ ತರುವುದು ಪ್ರಧಾನಮಂತ್ರಿಗಳ ಕನಸು ಎಂದು ಮಂಗಳೂರು ಸಂಸದ ಕ್ಯಾ.ಬೃಜೇಶ್ ಚೌಟ ಹೇಳಿದ್ದಾರೆ.
ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಆರೋಗ್ಯ, ಆಶ್ರಯ ಹಾಗೂ ಅಕ್ಷರದ ಉದ್ದೇಶಕ್ಕೆ ಭಾರತೀಯ ಜನತಾ ಪಾರ್ಟಿ ಯ ಸ್ಥಾಪನೆಯಾಗಿದೆ. ಬಿಜೆಪಿಯ ಅನಂತಾಡಿ ಶಕ್ತಿ ಕೇಂದ್ರ ಸಮಾಜದಲ್ಲಿ ಹಿಂದುಳಿದ ಸ್ಥಿತಿಯಲ್ಲಿರುವ ಕೊರಗ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಧರ್ಮದ ಹಾದಿಯಲ್ಲಿ ನಡೆದಾಗ ದೇವರ ಕೃಪೆ ಲಭಿಸುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ರಾಷ್ಟ್ರ ನಿರ್ಮಾಣದ ಕೆಲಸ, ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯ ನಡೆಸಿದ ಎಲ್ಲರಿಗೂ ಅಭಿನಂದನೆ ಎಂದರು. ವಿಧಾನಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿಯವರು ಮಾತನಾಡಿ, ಕೊರಗ ಸಮುದಾಯ ಹಿಂದೂ ಸಮಾಜದ‌ ಮೂಲಪುರುಷರು, ಅವರು ನಮ್ಮ ಬಹುದೊಡ್ಡ ಆಸ್ತಿ. ಕೊರಗರ ಸಮಸ್ಯೆಗೆ ಸ್ಪಂದಿಸುವ ಮೂಲಕ ಭಗವಂತನಿಗೆ ಪ್ರಿಯವಾಗುವ ಕೆಲಸ‌ ಅನಂತಾಡಿ ಗ್ರಾಮದಲ್ಲಿ‌ ನಡೆದಿದೆ. ಹಿಂದೂ ಸಮುದಾಯಕ್ಕೆ‌ಶಕ್ತಿ ತುಂಬಿದ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಎಲ್ಲರಿಂದಲೂ ಆಗಬೇಕಿದೆ ಎಂದರು.

ಮನೆನಿರ್ಮಾಣಕ್ಕೆ ವಿಶೇಷ ಸಹಕಾರ ನೀಡಿದ ನಾಟಿವೈದ್ಯ ಗಂಗಾಧರ ಪಂಡಿತ್ ದಂಪತಿಯನ್ನು ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಒದಗಿಸಿಕೊಟ್ಟ ಕರುಣಾಕರ ರೈ ಯವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಬಿಜೆಪಿ ಮಂಡಲದ ರೈತ ಮೋರ್ಛಾದ
ಅಧ್ಯಕ್ಷ ಸನತ್ ಕುಮಾರ್ ರೈ, ಗ್ರಾ.ಪಂ.ಅಧ್ಯಕ್ಷೆ ಸುಜಾತಸುರೇಶ್, ತಾ.ಪಂ.ಮಾಜಿ ಸದಸ್ಯರಾದ ಗೀತಾ ಚಂದ್ರ ಶೇಖರ್, ಮಾಣಿ‌ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾಗೇಶ್ ಮೊದಲಾದವರು ಕಾರ್ಯಕ್ರಮದ‌ ನೇತೃತ್ವ ವಹಿಸಿದ್ದರು.
ಅನಂತಾಡಿ ಬಿಜೆಪಿ ಮಹಾ‌ಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ನಗರ ಬಿಜೆಪಿ ಅಧ್ಯಕ್ಷರಾದ ಶಿವಕುಮಾರ್ ಪಿ. , ಬಿಜೆಪಿ ಪ್ರಮುಖರಾದ ಸುದರ್ಶನ್ ಬಜ, ದಿನೇಶ್ ಅಮ್ಟೂರು, ಪುಷ್ಪರಾಜ್ ಚೌಟ, ಮಾಧವ ಮಾವೆ, ಸಂದೇಶ್ ಶೆಟ್ಟಿ ಅರೆಬೆಟ್ಟು, ರಶ್ಮಿತ್ ಶೆಟ್ಟಿ, ತನಿಯಪ್ಪ ಗೌಡ, ಪುಷ್ಪರಾಜ ಚೌಟ, ನಾರಾಯಣ ಶೆಟ್ಟಿ ದೋಟ,ಬಲ್ಲು ಕೊರಗ ಉಪಸ್ಥಿತರಿದ್ದರು.

ಪೂರ್ವಾಹ್ನ ಅನಂತಾಡಿ ಶ್ರೀ ಉಳ್ಳಾಲ್ತಿ ದೇವಸ್ಥಾನದ ಪ್ರಧಾನ ಅರ್ಚಕ ಕೊಬ್ರಿಮಠ ಗೋಪಾಲಕೃಷ್ಣ ಬನ್ನಿಂತಾಯ ರವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಮಾಣಿ‌ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ದಿನೇಶ್ ಪಿಲ್ಚಂಡಿಗುಡ್ಡೆ ಕಾರ್ಯಕ್ರಮ‌ ನಿರ್ವಹಿಸಿದರು.

More from the blog

ಬಂಟ್ವಾಳ : ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಜ್ಞಾನ ವಿಕಾಸ ತಾಲೂಕು ಮಟ್ಟದ ಮಹಿಳಾ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು...

ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಹೊಸ ಬೈಲಾದಂತೆ ಅಭಿವೃದ್ಧಿ ಶುಲ್ಕ : ಸಾಮಾನ್ಯ ಸಭೆ ಸ್ಪಷ್ಟನೆ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ಜ.31ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಗೆ ಬಂದ ಅಭಿವೃದ್ಧಿ ಶುಲ್ಕ ದ ಸುತ್ತೋಲೆಯ...

ಬಿ. ಜನಾರ್ದನ ಪೂಜಾರಿ ಮನೆಗೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಭೇಟಿ

ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿಯವರು ಇಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಜಿಲ್ಲೆಯ ರಾಜಕೀಯ ವ್ಯವಸ್ಥೆ ಬಗ್ಗೆ...

ಮಿತ್ತೂರು: ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ : ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ನೌರತ್ತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಅಮಾನುಷವಾಗಿ ಬೆತ್ತದಿಂದ ಗಂಭೀರವಾಗಿ ಹಲ್ಲೆ ನಡೆಸಿದ ಶಾಲಾ ಶಿಕ್ಷಕ ಇಸ್ತಿಕಾರ್ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ...