ಬಂಟ್ವಾಳ : ಅನಂತಾಡಿ ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಘಟಕದ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕಾರ ಸಮೇತ ಸಮವಸ್ತ್ರ ವಿತರಿಸಿ “ಸ್ವಚ್ಛಸಖಿ” ಎಂದು ನಾಮಕರಣ ಮಾಡುವ ಬ್ರಾಂಡಿಂಗ್ ಕಾರ್ಯಕ್ರಮ ಜು. 4ರಂದು ನಡೆಯಿತು.



ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರುಗಳು ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಕಾರ್ಯಕ್ರಮವನ್ನು ನೆರೆವೇರಿಸಿದರು ಸಾರ್ವಜನಿಕರು ಉಪಸ್ಥಿತರಿದ್ದರು
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಘಟಕವಿದ್ದು, ತ್ಯಾಜ್ಯ ಸಂಗ್ರಹಣ ವ್ಯವಸ್ಥೆಗೆ ನೂತನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, ಇದರ ಅಂಗವಾಗಿ ಸ್ವಚ್ಛತಾ ನೌಕರರಿಗೆ ಸ್ವಚ್ಛ ಸಖಿ ಎಂದು ನಾಮಕರಣ ಮಾಡಲಾಗಿದ್ದು ಸಾರ್ವಜನಿಕರು ತಮ್ಮ ಮನೆ ಬಾಗಿಲಿಗೆ ಬರುವ ತ್ಯಾಜ್ಯ ಸಂಗ್ರಹಣ ಸ್ವಚ್ಛ ಸಖಿ ಯರಿಗೆ ಒಣ ಕಸವನ್ನು ನೀಡಿ ಸಹಕರಿಸಬೇಕು ಅಂತ ಈ ಸಂದರ್ಭದಲ್ಲಿ ಅಧ್ಯಕ್ಷರು ಸಾರ್ವಜನಿಕರಲ್ಲಿ ವಿನಂತಿಸಿದರು.












