ಬಂಟ್ವಾಳ: ಕೆಲವು ದಿನಗಳ ಹಿಂದೆ ರಾಜ್ಯ ಸಹ ವಕ್ತಾರೆ ಸುಲೋಚನ ಭಟ್ ಗಿಡ ನೆಡುವ ಮೂಲಕ ಅನಂತಾಡಿಯ ಕರಿಂಕದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ಈ ಅಭಿಯಾನದ ಅಂಗವಾಗಿ ಸಾವಿರಾರು ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿ ಸದಸ್ಯತ್ವ ನೀಡಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರ ಪರಿಸರ ಸಂರಕ್ಷಣೆಯ ದ್ಯೇಯವನ್ನು ಅನಂತಾಡಿ ಸ್ಥಾನಿಯ ಸಮಿತಿ ೨೦೮ರಲ್ಲೂ ಕಾರ್ಯರೂಪಕ್ಕೆ ತರಲಾಗಿದ್ದು ಪರಿಸರದಲ್ಲಿ ಹಲವಾರು ಗಿಡ ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡಲಾಯಿತು.
ಅನಂತಾಡಿ ಪಂಚಾಯತ್ ಅದ್ಯಕ್ಷ ಸನತ್ ಕುಮಾರ್ ರೈ, ಕ್ಷೇತ ಸಮಿತಿ ಸದಸ್ಯ ನಾಗೇಶ್ ಭಂಡಾರಿ ಕರಿಂಕ, ಯುವ ಮೋರ್ಚ ಕಾರ್ಯದರ್ಶಿ ಕಿರಾಣ್ ಪೂಜಾರಿ, ಪ್ರಮುಖರಾದ ಕೃಷ್ಣಪ್ಪ ಗೌಡ, ಪೂವಪ್ಪ ಗೌಡ, ನಿಶಾಂತ್, ವಾಸಪ್ಪ ಗೋಳಿಕಟ್ಟೆ, ಈಶ್ವರ ಪೂಜಾರಿ, ರಾಜೇಶ್ ಪೂಜಾರಿ ಹಾಗೂ ಪಕ್ಷದ ಹಲವು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
