ಬಂಟ್ವಾಳ: ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ಇದರ ಅಧ್ಯಕ್ಷ ಜಿ.ಅನಂದ ಅವರಿಗೆ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ಇದರ ಪ್ರಧಾನ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು.
ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಜಿ.ಆನಂದ ಅವರು ಕೊನೆಯುಸಿರೆಳೆದರು.
ಈ ಹಿನ್ನೆಲೆಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ ಉಪಾಧ್ಯಕ್ಷ ಮಹಾಬಲ ಶೆಟ್ಟಿ ಅವರ ಅಧ್ಯಕ್ಷ ತೆಯಲ್ಲಿ ಸಭೆ ನಡೆಸಿ ಸಂತಾಪ ಸೂಚಿಸಿದರು.
ಜಿ.ಆನಂದ ಅವರು ಸಹಕಾರಿ ಸಂಘಕ್ಕೆ ನೀಡಿದ ಕೊಡುಗೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.1995 ರಿಂದ ನಿರಂತರವಾಗಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅಧ್ಯಕ್ಷ ರಾಗಿಯೇ ಕೊನೆಯುಸಿರೆಳೆದರು.
ಇವರ ಅವಧಿಯಲ್ಲಿ ಸಂಘ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಇವರ ಶ್ರಮ ಮಹತ್ತರ ವಾಗಿತ್ತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ವಿದ್ಯಾವತಿ ಪ್ರಮೋದ್ ಕುಮಾರ್, ಲಕ್ಮೀಪ್ರಭು, ಕರುಣೇಂದ್ರ ಪೂಜಾರಿ, ಶೇಖರ್, ಮನೋಹರ್ ಮೂಲ್ಯ, ಪ್ರಕಾಶ್ , ಕೇಶವ ಕಿಣಿ, ಭವಾನಿಶಂಕರ್, ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಜಯಪ್ರಕಾಶ್ ಕಾಮತ್ ಹಾಗೂ ಸಿಬ್ಬಂದಿ ಗಳು ಹಾಜರಿದ್ದರು.

