ಬಂಟ್ವಾಳ: ವಿಟ್ಲಪಡ್ನೂರು ಗ್ರಾಮದ ಕೋಡಪದವು , ಕಡಂಬು, ಕುಕ್ಕಿಲ , ಮದಕ ಪ್ರದೇಶಗಳಲ್ಲಿ ಮಾಜಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಅಮ್ಟೂರು ಮತಯಾಚನೆ ನಡೆಸಿದರು.

ಈ ಬಾಗದ 217, 218,219,220 ಬೂತ್ ಗಳಲ್ಲಿ ಲೋಕಸಭಾ ಚುನಾವಣೆ ಯ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ ಪರವಾಗಿ ಮಾಜಿ ತಾ. ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.
ಕಳೆದ ಐದು ವರ್ಷಗಳ ಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ಏರಿಸಿದ ನರೇಂದ್ರ ಮೋದಿ ಸರಕಾರ ಮತ್ತೋಮ್ಮೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.
ದೇಶದ ಇತಿಹಾಸದಲ್ಲಿ ದಿಟ್ಟ ನಿರ್ಧಾರ ದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗುರುತಿಸಲ್ಪಡುವ ವಿಶೇಷ ಪ್ರಧಾನಿಯವರಿಗೆ ನಾವು ಅವಕಾಶ ನೀಡಬೇಕು,
ಜಿ.ಎಸ್.ಟಿ.ಮೂಲಕ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಯನ್ನು ಬಲಪಡಿಸಿದ , ನೋಟ್ ಬ್ಯಾನ್ ಭಯೋತ್ಪಾದಕ ರನ್ನು , ನಕ್ಸಲೀಯರನ್ನು ಮಟ್ಟ ಹಾಕಿದ ಏಕೈಕ ಪ್ರಧಾನಿ ನರೇಂದ್ರ .
ಕಳೆದ ಹಲವಾರು ವರ್ಷಗಳಿಂದ ಕಾಂಗ್ರೇಸ್ ದಲಿತ ಸಮುದಾಯವನ್ನು ಕಡೆಗಣಿಸಿ ಓಟ್ ಬ್ಯಾಂಕ್ ಮಾಡಿತ್ತು.
ಪಂಚ ತೀರ್ಥ ಪುಣ್ಯ ಕ್ಷೇತ್ರ ಗಳ ಮೂಲಕ
ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಗೌರವ ತಂದಕೊಟ್ಟ ಪ್ರಧಾನಿ ಮೋದಿಯವರು
ಎಂದು ಅವರು ಹೇಳಿದ್ದಾರೆ. ಹಾಗಾಗಿ ಜನಪರ ಆಡಳಿತ , ಹಾಗೂ ದೇಶದ ರಕ್ಷಣೆಯ ದ್ರಷ್ಟಿಯಿಂದ , ಭಾರತ ವಿಶ್ಬಗುರುವಾಗಲು ಬಿಜೆಪಿ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರಬೇಕಾಗಿದೆ , ಈ ನಿಟ್ಟಿನಲ್ಲಿ ಮತನೀಡುವಂತೆ ಅವರು ಮತದಾರರ ಲ್ಲಿ ಕೇಳಿಕೊಂಡರು..
ಈ ಸಂದರ್ಭದಲ್ಲಿ ಮಾಣಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ರೈ, ವಿಟ್ಲ ಪಡ್ನೂರು ಬಿಜೆಪಿ ಅದ್ಯಕ್ಷ ಸತೀಶ್ ಭಟ್ ಪಂಜಿಗದ್ದೆ, ವಿಟ್ಲ ಪಡ್ನೂರು ಗ್ರಾ.ಪಂ.ಅಧ್ಯಕ್ಷ ರವೀಶ್ ಶೆಟ್ಟಿ, ಪ್ರಮುಖರಾದ ಕ್ರಷ್ಣ ಕಿರಣ್ ಭಟ್, ನಾಗೇಶ್ ಶೆಟ್ಟಿ, ಮುರಳೀಕ್ರಷ್ಣ ಭಟ್, ನಾರಾಯಣ ಪೂಜಾರಿ, ನಾಗೇಶ್ ಗೌಡ ಬನ, ಜಯಕೊಟ್ಟಾರಿ, ಚೇತನ್ ಕಡಂಬು, ಪುನೀತ್ ಕಡಂಬು, ಹಾಗೂ ಚೇತನ್ ಹಾಜರಿದ್ದರು.