ಬಂಟ್ವಾಳ: ಬಾಂಬಿಲ ಪದವು ಎಂಬಲ್ಲಿ ಕೋಳಿ ಸಾಕಾಣಿಕೆ ಕೇಂದ್ರ ದ ನಿರ್ವಹಣೆ ಸರಿಯಾಗಿಲ್ಲದ ಕಾರಣ, ಈ ಪರಿಸರದ ಸುತ್ತ ಸೊಳ್ಳೆ ಹಾಗೂ ನೊಣಗಳು ಉತ್ಪತ್ತಿ ಯಾಗಿ ಹತ್ತಿ ರದ ಅಂಗನವಾಡಿ ಸಹಿತ ಸುಮಾರು 35 ಅಧಿಕ ಮನೆಗಳು ಮನೆಯ ಬೀಗ ಹಾಕಿ ವರ್ಷವಿಡೀ ಜೀವನ ಸಾಗಿಸಬೇಕಾದ ಶೋಚನೀಯ ಸ್ಥಿತಿ ಇದೆ.


ಇದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಂಬಿಲ ಪದವು ಎಂಬಲ್ಲಿ ನ ನಾಗರಿಕರ ಬದುಕಿನ ಬವಣೆಯ ಕಥೆಯ ವ್ಯಥೆ.
ಕೆಂಪುಗುಡ್ಡೆಯ ಕಲ್ಲು ಕೋರೆಗಳ ನ್ನು ದಾಟಿ ಮುಂದೆ ಸಾಗಿದಾಗ ಬಾಂಬಿಲ ಪದವು ಎಂಬ ಊರು ಸಿಗುತ್ತೆ.
ಇಲ್ಲಿ ಸುಮಾರು 20 ಸಾವಿರ ಕೋಳಿ ಸಾಕಾಣಿಕೆ ಮಾಡುವ ಕೇಂದ್ರ ಇದೆ.
ಆದರೆ ಈ ಕೇಂದ್ರ ದ ನಿರ್ವಹಣೆ ಯನ್ನು ಸರಿಯಾದ ರೀತಿಯಲ್ಲಿ ಮಾಡದೆ ಸೊಳ್ಳೆ ಹಾಗೂ ನೊಣಗಳು ಉತ್ಪಾದನೆ ಯಾಗಿ ಈ ಪರಿಸರದ ಜನರಿಗೆ ವಿಪರೀತ ಕಾಟ ಹಾಗೂ ದುರ್ನಾತ ಬೀರುತ್ತಿದೆ ಎಂದು ಗುರುವಾರ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಸ್ಥಳೀಯ ಅಮ್ಟಾಡಿ ಗ್ರಾಮ ಪಂಚಾಯತ್ ನ
ಪಿಡಿಒ, ತಾಲೂಕು ಪಂಚಾಯತ್ ಇ.ಒ., ತಾಲೂಕು ಆರೋಗ್ಯ ಧಿಕಾರಿ, ಪೋಲೀಸ್ ಠಾಣೆ ಗೂ ದೂರು ನೀಡಲಾಗಿತ್ತು.
ಆದರೆ ಈವರಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿ
ದಿನೇಶ್ ರೋಡ್ರಿಗಸ್ ಅವರು ಆರೋಪ ವ್ಯಕ್ತಪಡಿಸಿದರು.
ಅಮ್ಟಾಡಿ ಗ್ರಾ.ಪಂ.ನಲ್ಲಿ
ಇತ್ತೀಚಿಗೆ ನಡೆದ ಗ್ರಾಮಸಭೆಯಲ್ಲೂ ಈ ವಿಷಯ ಪ್ರಸ್ತಾಪ ಮಾಡಲಾಗಿತ್ತು . ಆದರೂ ಯಾವುದೇ ಸ್ಪಂದನೆ ಇಲ್ಲ.
ಕಳೆದ ಎಂಟು ತಿಂಗಳಿನಿಂದ ದೂರು ನೀಡುತ್ತಲೇ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಕೇಂದ್ರ ಸಂಪೂರ್ಣ ಅಕ್ರಮವಾಗಿದೆ ಎಂದು ಅವರು ಆರೋಪ ವ್ಯಕ್ತಪಡಿಸಿದರು.
ಈ ಕೋಳಿ ಸಾಕಾಣಿಕೆ ಕೇಂದ್ರ ಕ್ಕೆ
ಎನ್‌ಒ.ಸಿ.ಇಲ್ಲ, ಲೈಸೆನ್ಸ್ ಇಲ್ಲ, ಎಂದು ನಗರ ಠಾಣೆ ಯ ಹಿಂಬರಹ ಇದೆ ಎಂದು ದೂರು ನೀಡಿದ ಸ್ಥಳೀಯ ರು ತಿಳಿಸಿದ್ದಾರೆ.
ಆದರೆ ಈವರೆಗೆ ಈ ಕೇಂದ್ರದ ಮೇಲೆ ಯಾವುದೇ ಕಠಿಣ ಕ್ರಮ ಮಾಡಿಲ್ಲ.
ಎಸ್.ಐ.ಬೇಟಿ:
ಜಿಲ್ಲಾಧಿಕಾರಿ ಅವರ ಬಾಗಿಲು ತಟ್ಟಿದ ಸ್ಥಳೀಯ ರು ಮತ್ತೆ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರಿಗೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಎಸ್.ಐ.ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಈ ಹಿಂದೆ ದೂರಿನ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲು ಸ್ಥಳೀಯ ಗ್ರಾ.ಪಂ.ನವರಿಗೂ ಕೋರಿದ್ದರು.
ಅವರ ಸ್ಪಂದನೆ ಇಲ್ಲದ ಕಾರಣ ಮತ್ತೆ ಸ್ಥಳಕ್ಕೆ ಭೇಟಿ ನೀಡಿ ಕೋಳಿ ಸಾಕಾಣಿಕಾ ಕೇಂದ್ರ ದ ಕೆಲಸಗಾರರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಿಲ್ಲ ವಾದರೆ ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ ಎಸ್.ಐ.ಚಂದ್ರಶೇಖರ್.
ಬಾಗಿಲು ತೆರೆಯುವಂತಿಲ್ಲ:
ಇಲ್ಲಿನ ನಿವಾಸಿಗಳು ವರ್ಷ ಪೂರ್ತಿ ಮನೆಯ ಬಾಗಿಲು ತೆರದು ಇಡುವಂತಿಲ್ಲ.
ಹೊರಗೆ ಹೋಗಲು, ಬರಲು ಮಾತ್ರ ಬಾಗಿಲು ತೆರೆಯಬೇಕಾದ ಅನಿವಾರ್ಯ ಪರಿಸ್ಥಿತಿ.
ಒಂದು ವೇಳೆ ಬಾಗಿಲು ತೆರೆದರೆ ಮನೆಯ ತುಂಬಾ ಸೊಳ್ಳೆ ನೊಣಗಳ ರಾಶಿ ರಾಶಿ.
ಮನೆಯ ಆಹಾರದಿಂದ ಹಿಡಿದು ಮೈ ತುಂಬಾ ನೊಣಗಳು ತುಂಬಿಕೊಳ್ಳುತ್ತೆ.
ಸಣ್ಣ ಮಗು ಕೂಡಾ ಮನೆಯಲ್ಲಿರುವಯದರಿಂದ ನಮಗೆ ಆರೋಗ್ಯ ದ ಸಮಸ್ಯೆ ಯ ಹೆದರಿಕೆ ಅಗುತ್ತಿದೆ ಎಂದು ದಿನೇಶ್ ರೋಡ್ರಿಗಸ್ ಅವರ ಮನೆಯವರು ಬೇಸರ ವ್ಯಕ್ತಪಡಿಸುತ್ತಾರೆ.
ಜಿಲ್ಲೆಯ ಲ್ಲಿ ಮಾರಕ ರೋಗಗಳು ದಿನದಿಂದ ದಿನಕ್ಕೆ ಹೆಚ್ಚಾಗುವ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಸಮಸ್ಯೆ ಗಳ ಬಗ್ಗೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಸ್ಥಳೀಯ ರು ಮನವಿ ಮಾಡಿದ್ದಾರೆ.