ಬಂಟ್ವಾಳ: ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ತಹಶೀಲ್ದಾರ್ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆ.16 ರಂದು ಅಮ್ಮುಂಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮ್ಮುಂಜೆ ಗ್ರಾ.ಪಂ.ಅದ್ಯಕ್ಷ ವಾಮನ ಆಚಾರ್ಯ ಅವರು ಮಾತನಾಡಿ,
ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದರ ಸಂಪೂರ್ಣ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಲು ಅವರು ತಿಳಿಸಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ಸುಲಭ ವಿಧಾನವಾಗಿದ್ದು, ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಬೇಕಾದ ಮಾಹಿತಿ ಹಾಗೂ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನ ಮೇಲೆ ಪರಿಹಾರ ನೀಡಲು ಇದೊಂದು ಸುವರ್ಣ ಅವಕಾಶ ವಾಗಿದೆ ಎಂದರು.
ಇಲಾಖಾ ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡಿ, ಸ್ಥಳ ದಲ್ಲೇ ಪರಿಹಾರ ನೀಡಲು ಪರಿಹಾರ ನೀಡುವ ಭರವಸೆ ನೀಡುತ್ತೇನೆ ಎಂದು ಗ್ರೇಡ್ 2 ತಹಶೀಲ್ದಾರ್ ಕವಿತಾ ಅವರು ಹೇಳಿದರು.



ಅ.16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಗ್ರೇಡ್ 2 ಪ್ರಭಾರ ತಹಶೀಲ್ದಾರ್ ಕವಿತಾ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮ ದಲ್ಲಿ ವಾಸ್ತವ್ಯ ಹೂಡಿದ್ದರು. ಈ ಕಾರ್ಯಕ್ರಮ ದಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ಹಾಗೂ ಇತರ ಇಲಾಖೆ ಗಳ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಕೂಡ ನಡೆಯಿತು.
ಉಪಾಧ್ಯಕ್ಷೆ ಪ್ರಮೀಳಾ, ಗ್ರಾಮ ಪಂಚಾಯತ್ ಸದಸ್ಯರಾದ ಕಾರ್ತಿಕ್ ಬಲ್ಲಾಳ್, ರಾಧಾಕೃಷ್ಣ ತಂತ್ರಿ, ರವೀಂದ್ರ ಸುವರ್ಣ, ರೋನಾಲ್ಡ್ ಡಿ.ಸೋಜ, ಲೀಲಾವತಿ, ಭಾಗೀರಥಿ, ಪೌಝಿಯಾ, ಲೀಲಾವತಿ, ಲಕ್ಷ್ಮೀ, ಟಿಎಚ್.ಅಬ್ದುಲ್ ರಝಾಕ್, ನೆಫೀಸಾ,
ಎ.ಡಿ.ಎಲ್ ಆರ್ ರೇಣುಕಾ ನಾಯಕ್ , ಉಪತಹಶೀಲ್ದಾರ್ ನರೇಂದ್ರ ನಾಥ್ ಭಟ್ ಮಿತ್ತೂರು, ಕಂದಾಯ ನಿರೀಕ್ಷಕ ಧರ್ಮ ಸಾಮ್ರಾಜ್ಯ, ಸಿಬ್ಬಂದಿ ಗ್ರೆಟ್ಟಾ , ಅಮ್ಮುಂಜೆ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮ ಕರಣೀಕ ಜಗದೀಶ್ ಶೆಟ್ಟಿ ಸ್ವಾಗತಿಸಿ, ಉಪತಹಶೀಲ್ದಾರ್ ದಿವಾಕರ ಧನ್ಯವಾದ ನೀಡಿದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.
ಕಣ್ಣೀರಿಟ್ಟ ಮಹಿಳೆ
ಸದಾಶಿವ ಅಮ್ಮುಂಜೆ ಎಂಬವರು ಕಳೆದ 20 ವರ್ಷಗಳಿಂದ ವಾಸ್ತವ್ಯ ಇರುವ ಮನೆಗೆ ಮನೆ ನಂ ನೀಡಿಲ್ಲ, ಎಂಬ ದೂರು ಅರ್ಜಿ ಬಂದಿದೆ, ಜೊತೆಗೆ ಅವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಿದ್ದಾರೆ.ಹಾಗಾಗಿ ಅವರಿಗೆ ಕಾನೂನು ಸಡಿಲಗೊಳಿಸಿ ಮನೆ ನಂ ನೀಡುವಂತೆ ಮನವಿ ಮಾಡಿದರು.
ಅಮ್ಮುಂಜೆ ಗ್ರಾ.ಪಂ.ಸದಸ್ಯೆ ಭಾಗೀರಥಿ ಎಂಬವರು ಅಕ್ರಮವಾಗಿ ಜಮೀನನ್ನು ಅಗೆದ ಕಾರಣ ಕರುಣಾಕರ ಮೂಲ್ಯ ಎಂಬವರ ಮನೆ ಬೀಳುವ ಸ್ಥಿತಿಯಲ್ಲಿದೆ.ಈ ಬಗ್ಗೆ ಗ್ರಾ.ಪಂ.ಗೆ ದೂರು ನೀಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಕಣ್ಣೀರು ಹಾಕಿದರು .
ಕೂಲಿ ಮಾಡಿ ಬದುಕು ಸಾಗಿಸುವ ನಮಗೆ ಮನೆಯಿಲ್ಲದೆ ಮಕ್ಕಳ ಜೊತೆ ಬೀದಿಗೆ ಬರುವಂತೆ ಗ್ರಾ.ಪಂ.ಸದಸ್ಯೆ ಮಾಡಿದ್ದಾರೆ ಎಂದು ಆರೋಪಿದಲ್ಲದೆ, ಅಪಾಯದಲ್ಲಿರುವ ಮನೆಯನ್ನು ಉಳಿಸಿಕೊಡಿ ಎಂದು ಮನವಿ ಮಾಡಿದರು.
ಬಿಸಿರೋಡಿನಿಂದ ಅಮ್ಮುಂಜೆ ಮಾರ್ಗವಾಗಿ ಪೊಳಲಿ ಸಂಪರ್ಕಕ್ಕೆ ಸರಕಾರಿ ಬಸ್ ಒದಗಿಸಬೇಕು ಎಂದು ಅಮ್ಮುಂಜೆ ಗ್ರಾಮ ಪಂಚಾಯತ್ ಮಾಜಿಸದಸ್ಯ ಆಬೂಬಕ್ಕರ್ ಅಮ್ಮುಂಜೆ ಮನವಿ ನೀಡಿದರು. ಮತ್ತು ಕರಿಂಗಳದಲ್ಲಿರುವ ಗ್ರಾಮ ಕರಣಿಕ ರ ಕಚೇರಿಯ ನ್ನು ಅಮ್ಮುಂಜೆ ಗ್ರಾ.ಪಂ.ಕಚೇರಿಗೆ ವರ್ಗಾಯಿಸಬೇಕು ಎಂದು ಅವರು ಒತ್ತಾಯಿಸಿದರು.
ನಿವೇಶನ ರಹಿತ ಫಲಾನುಭವಿಗಳಿಗೆ ಅಮ್ಮುಂಜೆ ಗ್ರಾ.ಪಂ.ಈವರೆಗೆ ನಿವೇಶನ ನೀಡಿಲ್ಲ , ನಮಗೆ ನಿವೇಶನಕ್ಕೆ ಜಾಗ ನೀಡಿ ಎಂದು ಸುಮಾರು ಕುಟುಂಬ ಗಳು ಅರ್ಜಿ ನೀಡಿದರು.
ಸರಕಾರದ ಕಾರ್ಯಕ್ರಮಕ್ಕೆ ಸೀಮಿತ ಸರಕಾರದ ಕಾರ್ಯಕ್ರಮ ವಾದ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಕೇವಲ ಸರಕಾರದ ನಿರ್ದೇಶನ ಕ್ಕೊಸ್ಕರ ಮಾಡಲಾಗಿದೆ ಎಂಬಂತೆ ಭಾಸವಾಗುತ್ತಿತ್ತು.
ಇಲ್ಲಿ ಗ್ರಾಮಸ್ಥರಿಗಿಂತ ಹೆಚ್ಚು ತಾಲೂಕು ಮಟ್ಟದ ಅಧಿಕಾರಿಗಳೇ ಸಭೆಯಲ್ಲಿ ಭಾಗಿಯಾಗಿ ದ್ದರು.
ಸ್ಥಳದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ವಿಫಲರಾಗಿದ್ದರು. ಪ್ರಭಾರ ಗ್ರೇಡ್ 2
ತಹಶೀಲ್ದಾರ್ ಸಮಸ್ಯೆಯನ್ನು ಆಲಿಸಿದ್ದು ಮಾತ್ರವೇ ಹೊರತು ಸಮಸ್ಯೆಗಳಿಗೆ ಸ್ಪಂದನೆ ನೀಡಲು ಪರದಾಡಿದ ಪ್ರಸಂಗಗಳು ನಡೆಯಿತು.

