ಬಂಟ್ವಾಳ : ಸತತ ಸಮಾಜ ಸೇವೆಗಳನ್ನು ಮಾಡುತ್ತ ಬಂದಿರುವ ಮಾತೃ ಮಂಡಳಿ ದುರ್ಗವಾಹಿನಿ ವಿಶ್ವಹಿಂದುಪರಿಷದ್ ಬಜರಂಗದಳ ಛತ್ರಪತಿ ಶಿವಾಜಿ ಶಾಖೆ ಕುಮುಡೆಲ್ ಬಂಟ್ವಾಳ ಪ್ರಖಂಡ ವತಿಯಿಂದ ಹಿಂದೂ ಬಡ ಜನರ ಸೇವೆಗಾಗಿ ನೂತನ ಆಂಬ್ಯುಲೆನ್ಸ್ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಗಣೇಶ್ ಗುರೂಜಿ ಕೊಡಾಜೆಕಲ್ಲು ಇವರ ದಿವ್ಯ ಹಸ್ತದಿಂದ ಲೋಕಾರ್ಪಣೆ ಮಾಡಲಾಯಿತು.

ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷರಾದ ಡಾ! ಪ್ರಸನ್ನ ಪುತ್ತೂರು, ಬಜರಂಗದಳ ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲ್, ವಕೀಲರಾದ ಪ್ರಸಾದ್ ರೈ, ಜಿಲ್ಲಾ ಸಹಸಂಚಾಲಕಾರದ ಗುರುರಾಜ್ ಬಂಟ್ವಾಳ, ಬಂಟ್ವಾಳ ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಭಾಸ್ಕರ ಚೌಟ, ಸೋಮಾನಾಥ ಕುಮ್ಡೇಲ್ ಹಾಗೂ ಪ್ರಖಂಡದ ಪ್ರಮುಖರು ಹಾಗೂ ಘಟಕದ ಪ್ರಮುಖರು ಉಪಸ್ಥಿತರಿದ್ದರು

