ಬಂಟ್ವಾಳ:
ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪ್ಪಾಡಿ ಸಜೀಪಮೂಡ ಇಲ್ಲಿ ಮೇ. 28 ರಂದು ನಡೆಯಲಿರುವ ವಾಷಿ೯ಕ ಪೂಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಪಣೋಲಿಬೈಲು ಕಾಯ೯ ನಿವಾ೯ಹಣಾಧಿಕಾರಿ ಶ್ರೀ ಹರಿಶ್ಚಂದ್ರ ಇವರು ಬಿಡುಗಡೆಗೊಳಿಸಿದರು.ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಮುಂಡಪ್ಪ ಶೆಟ್ಟಿ ನಗ್ರಿಗುತ್ತು, ಅನ್ನಪ್ಪಾಡಿ ಕ್ಷೇತ್ರದ ಪ್ರಧಾನ ಅಚ೯ಕ ಸುಬ್ರಹ್ಮಣ್ಯ ಭಟ್ ಆಲಾಡಿ, ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಸಹ ಕಾಯ೯ದಶಿ೯ ಲೋಹಿತ್ ಪಣೋಲಿಬೈಲು ಉಪಸ್ಥಿತರಿದ್ದರು.
