ಬಂಟ್ವಾಳ: ಶಿಕ್ಷಣದಿಂದ ವಂಚಿರಾಗಬಾರದು, ಗುಣಮಟ್ಟದ ಶಿಕ್ಷಣ ಬೇಕು ಎಂಬ ಸರಕಾರದ ಚಿಂತನೆ ಒಂದೆಡೆಯಾದರೆ, ಇನ್ನೊಂದು ಕಡೆಯಿಂದ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಹಂಬಲ ಪೋಷಕರದ್ದು.
ಆದರೆ ಈ ನಡುವೆ ಉತ್ತಮ ಫಲಿತಾಂಶ ಬರಬೇಕು ಶಾಲೆಗೆ ಹೆಸರು ಬರಬೇಕು ಅ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು ಎಂಬುದು ಖಾಸಗಿ ಶಿಕ್ಷಣ ಸಂಸ್ಥೆಗಳದ್ದು.
ಇದಕ್ಕೇನಪ್ಪಾ ಅಂತ ಕೇಳಿದರೆ ಇಲ್ಲಿದೆ ನೋಡಿ
ಅಲ್ಲಿಪಾದೆ ಖಾಸಗಿ ಶಾಲೆಯೊಂದರ ನಾಲ್ವರು ವಿಧ್ಯಾರ್ಥಿಗಳಿಗೆ ಇಲ್ಲಿನ ಶಿಕ್ಷಕರು ಎಸ್ .ಎಸ್.ಎಲ್. ಸಿ. ಪರೀಕ್ಷೆ ಗೆ ಪ್ರವೇಶ ನಿರಾಕರಣೆ ಮಾಡಿದ ಘಟನೆ ನಡೆದಿದೆ.
ಕಾರಣ ಇಷ್ಟೇ ಈ ನಾಲ್ವರು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಉಳಿದಿದ್ದರು ಅನ್ನುವ ಕಾರಣಕ್ಕಾಗಿ ಪೋಷಕರ ಅನುಮತಿಯೊಂದಿಗೆ ಹತ್ತನೇ ತರಗತಿಯ ಪರೀಕ್ಷೆಗೆ ನೊಂದಾವಣೆಯನ್ನು ಮಾಡದೆ ವಿದ್ಯಾರ್ಥಿಗಳು ಪರೀಕ್ಷೆ ಗೆ ಹಾಜರಾಗಲು ಸಾಧ್ಯವಾಗದಂತೆ ಅಗಿದೆ.
ಕಲಿಕೆಯಲ್ಲಿ ಹಿಂದೆ ಉಳಿದಿದ್ದರಿಂದ ಈ ಶಾಲೆಯ ಫಲಿತಾಂಶ ದ ಮೇಲೆ ಪರಿಣಾಮ ಬೀಳುವ ಸಾದ್ಯತೆ ಗಳಿವೆ ಎಂಬ ಯೋಚನೆ ಈ ಶಾಲೆಯ ಕಮಿಟಿ ಯವರದ್ದಾಗಿರಬೇಕು ಎಂದು ಹೇಳಲಾಗುತ್ತಿದೆ.


ಶಾಲೆಗೆ ಬಿ.ಒ.ಪ್ರಕಾಶ್ ಬೇಟಿ: ಅಲ್ಲಿಪಾದೆ ಖಾಸಗಿ ಶಾಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳ ಪ್ರವೇಶ ನಿರಾಕರಣೆಯ ಮಾಹಿತಿ ಪಡೆದ ಬಳಿಕ ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಅವರು ಪರಿಶೀಲನೆ ನಡೆಸಿ 24 ಗಂಟೆಯೊಳಗೆ ಸ್ಪಷ್ಟ ನೆ ನೀಡುವಂತೆ ಶಾಲೆಯವರಿಗೆ ನೋಟೀಸ್ ನೀಡಿದ್ದಾರೆ.
ಜೊತೆಗೆ ಒಂದು ವರ್ಷ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ ದ ಮೇಲೆ ಪರಿಣಾಮ ಬೀರುತ್ತದೆ, ಹಾಗಾಗಿ ಅದಕ್ಕೆ ಬೇಕಾದ ಕ್ರಮಗಳನ್ನು ಈ ಶಾಲೆಯವರೇ ಭರಿಸಬೇಕು ಎಂದು ಹೇಳಿದ್ದಾರೆ.
ಇದೇ ರೀತಿ ಕೆಲ ವರ್ಷಗಳ ಹಿಂದೆ ಸಿದ್ದಕಟ್ಟೆ ಸರಕಾರಿ ಶಾಲೆಯೊಂದರಲ್ಲಿ ಘಟನೆ ನಡೆದು ಶಾಲಾ ಶಿಕ್ಷನೋರ್ವನ ಅಮಾನುತ ಕೂಡ ನಡೆದಿದೆ.