ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ ಅವರು ಕಂಪ್ಯೂಟರ್ ಅನ್ನು ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಎಸ್ ಯಲ್ಲಪ್ಪ ಅವರಿಗೆ ಹಸ್ತಾಂತರ ಮಾಡಿದರು.
ವಿಟ್ಲ ಠಾಣೆಯಿಂದ ದಾಂಡೇಲಿಗೆ ವರ್ಗಾವಣೆಯಾಗಿರುವ ಎಸ್. ಯಲ್ಲಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ಮಾಡಲಾಯಿತು. ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್, ಪ್ರೊಬೆಶನರಿ ಎಸ್.ಐ ರಾಜೇಶ್ ಕೆ. ವಿ., ರಘುರಾಮ, ಬೀಟ್ ಪೊಲೀಸ್ ಅನುಕುಮಾರ್, ಚಂದ್ರಶೇಖರ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.














