ಪುತ್ತೂರು: ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತಿಕಾರ ತಿರಿಸಿಕೊಳ್ಳುವ ಸಲುಹುವಾಗಿ ಪ್ಲ್ಯಾನ್ ಮಾಡಿದ್ದ ನಾಲ್ವರನ್ನು ಪುತ್ತೂರು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ನಿವಾಸಿ ಕಿಶೋರ್ ಕಲ್ಲಡ್ಕ, ಪುತ್ತೂರಿನ ಮನೋಜ್, ಆಶಿಕ್ ಹಾಗೂ ಸನತ್ ಕುಮಾರ್ ಎಂಬುವವರು ಬಂಧಿತರು.
ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತಿಕಾರ ತಿರಿಸಿಕೊಳ್ಳಲು ಹತ್ಯೆಯ ಆರೋಪಿ ಮನೀಶ್ ಸಹೋದರ ಮನೋಜ್ ಎಂಬವವರಿಗೆ ಬೆದರಿಕೆ ಕರೆ ಮಾಡಿದ್ದರು. ಈ ಹಿನ್ನಲೆ ಮನೋಜ್ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.
‘ನಿನ್ನ ತಮ್ಮ ಮನೀಶ್ ಹಾಗೂ ಉಳಿದ ಆರೋಪಿಗಳು ಜೈಲಿನಿದ್ದಾರೆ. ಆದ್ರೆ, ನಿನ್ನನ್ನ ಬಿಡಲ್ಲ ಎಂದು ಫೋನ್ ಕರೆ ಮಾಡಿದ್ದರು. ಬಳಿಕ ಮನೋಜ್ ಚಲನವಲನವನ್ನ ದುಷ್ಕರ್ಮಿಗಳ ತಂಡ ಗಮನಿಸುತ್ತಿದ್ದರು. ಅದರಂತೆ ಪುತ್ತೂರಿನ ಮುಕ್ರಂಪಾಡಿಯಲ್ಲಿ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳ ತಂಡ ತಲ್ವಾರ್ ಸಹಿತ ಅವಿತ್ತಿದ್ದರು. ಸದ್ಯ ಕಾರು, ತಲ್ವಾರ್ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.