ಬಂಟ್ವಾಳ: ಅಜ್ಜಿಬೆಟ್ಟು ಗ್ರಾಮದ ಅಜ್ಜಿಬೆಟ್ಟುವಿನಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಹಾಗೂ ನೇಮೋತ್ಸವ ಜ.25ರಂದು ನಡೆಯಿತು.

ವೇ.ಮೂ. ಶ್ರೀಪಾದ ಪಾಂಗಣ್ಣಾಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಬೆಳಗ್ಗೆ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ದೈವ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ನಾಗಬನದಲ್ಲಿ ಪಂಚಪರ್ವಾದಿಗಳು, ಆಶ್ಲೇಷಾ ಬಲಿ, ತಂಬಿಲ, ಪ್ರಸನ್ನ ಪೂಜೆ, ನಿತ್ಯನೈಮಿತ್ತಿಕಗಳ ಬಗ್ಗೆ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ನಡೆಯಿತು.
ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಬೇಬಿ ಕುಂದರ್, ಜಿ.ಕೆ. ಭಟ್, ರಘುನಾಥ ಟಿ.ಪೈ ಮಾವಿನಕಟ್ಟೆ, ಯತೀಶ್ ಶೆಟ್ಟಿ, ಕುಂಡೋಳಿಗುತ್ತು ಶೀನ ಶೆಟ್ಟಿ, ವಾರಿಜಾ ವೆಂಕಪ್ಪ ಶೆಟ್ಟಿ, ಕುಂಡೋಳಿಗುತ್ತು ಉದಯ್ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.