Tuesday, July 8, 2025

ಅಜ್ಜಿಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಹರೀಶ್ ಮಾಂಬಾಡಿ

ಬಂಟ್ವಾಳ: ಬಿ.ಮೂಡ ಗ್ರಾಮದ ಅಜ್ಜಿಬೆಟ್ಟುವಿನಲ್ಲಿರುವ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯ ಹಿನ್ನೆಲೆಯಲ್ಲಿ ಪೋಷಕರ ಸಭೆ ನಡೆಯಿತು. ಈ ಸಂದರ್ಭ ಸಮಿತಿ ರಚನಾ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಹರೀಶ ಮಾಂಬಾಡಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಮತಾ ಕುಪ್ಪಿಲ, ಸದಸ್ಯರಾಗಿ ರೋಷನ್ ಡಿಸೋಜ, ಕೇಶವ ನಾಯಕ್, ಪ್ರೇಮಾ, ಸುಜಾತಾ, ಶಿಲ್ಪಾ, ವಿನುತಾ, ವನಿತಾ, ಕುಮುದಾಕ್ಷಿ, ಸುನಂದಾ, ಜ್ಯೋತಿ, ಗಣೇಶ್ ಟಿ, ರಾಜೇಂದ್ರ, ಪಾಂಡು ಮಾದರ, ದೀಪಕ್, ಪ್ರಭಾಕರ್ ಮತ್ತು ರಾಜೇಶ್ವರಿ ಆಯ್ಕೆಗೊಂಡರು. ನಾಮನಿರ್ದೇಶಿತ ಸದಸ್ಯರಾಗಿ ಮುಖ್ಯೋಪಾಧ್ಯಾಯಿನಿ ಕುಶಲ ಎ (ಕಾರ್ಯದರ್ಶಿ), ಪುರಸಭಾ ಸದಸ್ಯೆ ವಿದ್ಯಾವತಿ, ಸ್ನೇಹಾಂಜಲಿ ಸೇವಾ ಸಂಘದ ಅಧ್ಯಕ್ಷ ಉದಯ ಅಮೀನ್, ಹಿರಿಯ ಸಹಾಯಕ ಶಿಕ್ಷಕಿ ತಾಹಿರಾ ಬಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸ್ಥಳೀಯ ಆರೋಗ್ಯ ಕಾರ್ಯಕರ್ತೆ ನೇಮಕಗೊಂಡರು. ಇದೇ ಸಂದರ್ಭ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪಠ್ಯಪುಸ್ತಕವನ್ನು ವಿತರಿಸಲಾಯಿತು. ಶಿಕ್ಷಕ ನವೀನ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

More from the blog

ಸೌಹಾರ್ದ ಬದುಕು ಕಟ್ಟೋಣ : ಡಾ.ಎನ್.ಇಸ್ಮಾಯಿಲ್..

ಮಂಗಳೂರು : ನಮ್ಮೊಳಗಿನ ಜಾತಿ, ಧರ್ಮ, ಭಾಷೆಯ ವೈವಿಧ್ಯತೆಯನ್ನು ಜೊತೆಗಿರಿಸಿಕೊಂಡು ನಾವೆಲ್ಲರೂ ಒಂದೇ ಅನ್ನುವ ಸೌಹರ್ದತೆಯ ಸಮಾಜವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಜವಬ್ದಾರಿ ಮಹತ್ವವಾದುದು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್...

Bantwal: ಅಪ್ರಾಪ್ತ ಬಾಲಕ ನೇಣಿಗೆ ಶರಣು:ಕಾರಣ ನಿಗೂಡ

ಬಂಟ್ವಾಳ: ಅಪ್ರಾಪ್ತ ಬಾಲಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಜುಲೈ 7 ರಂದು ಸಂಜೆ ವೇಳೆ ನಡೆದಿದೆ. ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ...

ಕುಜ್ಲುಬೆಟ್ಟು ಶಾಲೆ : ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂಟ್ವಾಳ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಶಾಲಾಭಿವೃದ್ಧಿ ಸಮಿತಿ ಕುಜ್ಲುಬೆಟ್ಟು ಇದರ ಸಹಯೋಗದೊಂದಿಗೆ ಇಂದು ಶಾಲಾ ಪರಿಸರದಲ್ಲಿ...

Puttur : ನಾಪತ್ತೆಯಾಗಿದ್ದ ಯುವತಿ ಮನೆಗೆ ಬಿಜೆಪಿ ಪ್ರಮುಖರು, ಹಿಂದೂ ಸಂಘಟನೆಯ ಮುಖಂಡರು ಭೇಟಿ..

ಪುತ್ತೂರು: ಪುತ್ತೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿದ್ದು, ನಂತರ ಬೆಂಗಳೂರಿನಲ್ಲಿ ಪತ್ತೆಯಾದ ಯುವತಿ ರೂಪ ಅವರ ಮನೆಗೆ ಬಿಜೆಪಿ ಪ್ರಮುಖರು ಹಾಗೂ ಹಿಂದೂ ಸಂಘಟನೆಯ ಮುಖಂಡರು ಭೇಟಿ ನೀಡಿದ್ದಾರೆ. ಯುವತಿಯ ಪತ್ತೆಯಾದ ನಂತರ, ಹಿಂದೂ ಸಂಘಟನೆಯ ಮುಖಂಡರು,...