Monday, July 14, 2025

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತಾಲೂಕು ಮಟ್ಟದ ಪುಸ್ತಕ ವಿತರಣೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಪಠ್ಯಪುಸ್ತಕ ವಿತರಣಾ ಕಾರ್ಯ ಕ್ರಮಕ್ಕೆ ಬಿಸಿರೋಡಿನ ಅಜ್ಜಿಬೆಟ್ಟು ಸರಕಾರಿ ಪ್ರೌಢ ಶಾಲೆ ಅಜ್ಜಿಬೆಟ್ಟು ಇಲ್ಲಿ ಚಾಲನೆ ನೀಡಲಾಯಿತು.

ಕಾರ್ಯ ಕ್ರಮಕ್ಕೆ ಚಾಲನೆ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಬಳಿಕ ಮಾತನಾಡಿ, ಕೋವಿಡ್ ನ ಸಂಕಷ್ಟದ ಸಮಯದಲ್ಲಿ ಶೈಕ್ಷಣಿಕ ಅವಧಿ ಗೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಾರಂಭ ಮಾಡಲು ಸರಕಾರ ಮುಂದಾಗಿದೆ.

ಕೊರೊನಾ ಸಂಬಂದಿಸಿದಂತೆ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಿಕೊಂಡು ತರಗತಿಗಳನ್ನು ಪ್ರಾರಂಭಿಸಲು ಸರಕಾರ ಸೂಚನೆ ನೀಡಿದೆ.

ಸರಕಾರದ ಸೂಚನೆಯನ್ನು ಪಾಲಿಸಿಕೊಂಡು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಯಾವುದೇ ರೀತಿಯ ಸಮಸ್ಯೆಗಳು ಆಗದ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ ಮೂಲಕ ಶಿಕ್ಷಣ ಇಲಾಖೆ ಹೆಚ್ಚಿನ ಜವಬ್ದಾರಿ ಯನ್ನು ವಹಿಸಿ ಬೇಕು ಎಂದರು.

ಪಠ್ಯಪುಸ್ತಕ ಗಳನ್ನು ವಿದ್ಯಾರ್ಥಿಗಳ ಪೋಷಕರು ಶಾಸಕರ ಮೂಲಕ ಪಡೆದುಕೊಂಡರು.

ಕಾರ್ಯಕ್ರಮ ದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಗಣೇಶ್ ಆಚಾರ್ಯ, ಸದಸ್ಯ ರಾದ ಸದಾನಂದ ರಂಗೋಲಿ, ರಾಜೇಶ್, ಸ್ಥಳೀಯ ಪ್ರಮುಖರಾದ ನಾಗೇಶ್ ಅಜ್ಜಿಬೆಟ್ಟು, ಗೋಪಾಲ ಸುವರ್ಣ, ಪ್ರಮೋದ್ ಅಜ್ಜಿಬೆಟ್ಟು, ಕೇಶವ ದೈಪಲ, ಪ್ರದೀಪ್ ಅಜ್ಜಿಬೆಟ್ಟು, ಪ್ರಣಾಮ್ ಅಜ್ಜಿಬೆಟ್ಟು,

ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ , ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ನೋಣಯ್ಯ ಮತ್ತಿತರರು ಉಪಸ್ಥಿತರಿದ್ದರು.

ಅಜ್ಜಿಬೆಟ್ಟು ಶಾಲಾ 9 ತರಗತಿಯ ವಿದ್ಯಾರ್ಥಿನಿ ಭವ್ಯ ಶ್ರೀ ಅಮ್ಟಾಡಿ ಇತ್ತೀಚಿಗೆ ಕಾಯಿಲೆಯೊಂದಕ್ಕೆ ತುತ್ತಾಗಿ ತುರ್ತುನಿಗಾ ಘಟಕದ ಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿ ನಿಗೆ ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ಗೆ ವ್ಯವಸ್ಥೆ ಕಲ್ಪಿಸಿ, ಬದುಕಿಗೆ ಆಸರೆಯಾದ ಶಾಸಕ ರಾಜೇಶ್ ನಾಯ್ಕ್ ಅವರನ್ನು ವಿದ್ಯಾರ್ಥಿನಿಯ ತಾಯಿ ಪುಸ್ತಕ ಗೌರವ ಅರ್ಪಿಸಿ ಅಮೂಲಕ ಧನ್ಯವಾದ ಅರ್ಪಿಸಿದ ಕ್ಷಣ ಕಾರ್ಯ ಕ್ರಮದ ವಿಶೇಷ ವಾಗಿತ್ತು.

More from the blog

ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ..

ಪೊಳಲಿ: ವ್ಯಾಸ ಪೂರ್ಣಿಮೆಯನ್ನು ಗುರುಪೂರ್ಣಿಮೆಯಂದು ಹಿಂದಿನಿAದಲು ಜಗತಿನಾಧ್ಯಂತ ಆಚರಣೆಯನ್ನು ಮಠ ಆಶ್ರಮಗಳಲ್ಲಿ ಆಚರಿಸುತ್ತ ಬಂದಿರುತ್ತಾರೆ. ಹಿಂದುಗಳಿಗಲ್ಲದೆ ಬೇರೆ ಸಾಂಪ್ರದಾಯದವರಿಗೂ ವೀಶೇಷ ಗುರುಪೂರ್ಣಿಮೆದಿನವಾಗಿರುತ್ತದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮಿಜಿಯವರು...

ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

ಕೈಕಂಬ: ಆಸರೆ ಸೇವಾ ಫೌಂಡೇಶನ್ (ರಿ) ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು ೬ರಂದು ಭಾನುವಾರ ಪುಂಚಮೆ ಶ್ರೀ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತರಾದ ಪೊಳಲಿ...

ನೆಟ್ಲಮುಡ್ನೂರು : ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಜನಜಾಗೃತಿ ಅಭಿಯಾನ..

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ "ಜನಜಾಗೃತಿ ಅಭಿಯಾನ" ನೇರಳಕಟ್ಟೆಯಲ್ಲಿ ಶನಿವಾರ ಸಂಜೆ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಸಚಿವ...

ಶಕ್ತಿ ಯೋಜನೆಯ ಪ್ರಯಾಣಿಕರ ಸಂಖ್ಯೆ 500 ಕೋಟಿ ದಾಟಿದೆ – ಭರತ್ ಮುಂಡೋಡಿ..

ಬಂಟ್ವಾಳ: ಬಡವರ ಉದ್ಧಾರ, ಮಹಿಳಾ ಸ್ವಾವಲಂಬನೆಯ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ದ.ಕ.ಜಿಲ್ಲೆಯಲ್ಲಿ ಯೋಜನೆಯಿಂದ ಹೊರಗುಳಿದ ಫಲಾನುಭವಿಗಳನ್ನು ಯೋಜನಾ ವ್ಯಾಪ್ತಿಗೆ ತರಲಾಗಿದೆ. ಪ್ರಸ್ತುತ ಶಕ್ತಿ ಯೋಜನೆಯ...