ಸುಬ್ರಹ್ಮಣ್ಯ: ಮಾ.9 ರಂದು ಕುಕ್ಕೆ ಸುಬ್ರಹ್ಮಣ್ಯದ ಯುವಕ ಅಜಿತೇಶ್ ಪಿ.ಎಸ್, ಭಾರತೀಯ ಸೇನೆಯ ಉನ್ನತ ಹುದ್ದೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡರು.

ಭಾರತದ ಅತ್ಯಂತ ಕಠಿಣ ಪರೀಕ್ಷೆಯಾದ SSB (UPSC) ಯಲ್ಲಿ ಉತ್ತೀರ್ಣರಾಗಿ, ಒಂದು ವರ್ಷಗಳ ಕಾಲ “ಅಧಿಕಾರಿಗಳ ತರಬೇತಿ ಅಕಾಡೆಮಿ”(OTA) ಯಲ್ಲಿ ತರಬೇತಿ ಪಡೆದು, ಇಂದು ಪಾಸಿಂಗ್ ಔಟ್ ಪೆರೇಡ್ ನಡೆಯಿತು.
ಅಜಿತೇಶ್ ಅವರು ಸುಬ್ರಹ್ಮಣ್ಯಗ್ರಾಮದ ನೂಚಿಲದ ಶ್ರೀಕೃಷ್ಣ ಶರ್ಮ ನಿವೃತ್ತ ಮುಖ್ಯೋಪಾಧ್ಯಾಯರು ವಿದ್ಯಾರತ್ನ ಮುಖ್ಯೋಪಾಧ್ಯಾಯರು ರವರ ಸುಪುತ್ರ ಪಾಸಿಂಗ್ ಔಟ್ ಪರೇಡ್ ಸಮಾರಂಭದಲ್ಲಿ ಅಜಿತೇಶ್ ರವರ ಕುಟುಂಬಸ್ತರು ಭಾಗವಹಿಸಿದರು.
ಚಿಕ್ಕ ವಯಸ್ಸಿನಲ್ಲೇ ಸೇನೆಗೆ ಸೇರುವ ಆಸೆಯಿಟ್ಟುಕೊಂಡಿದ್ದ ಅಜಿತೇಶ್ ರವರ ಕನಸು ನನಸಾಗಿದೆ. ಸುಬ್ರಹ್ಮಣ್ಯ ಗ್ರಾಮದ ಯುವಕನ ಸಾಧನೆ ಇಂದು ರಾಜ್ಯಕ್ಕೆ ಹೆಮ್ಮೆ ತಂದಿದೆ.
ತಂದೆ, ತಾಯಿ ಭಾರತೀಯ ಸೇನೆಗೆ ಸೇರಲು ತುಂಬಾ ಪ್ರೋತ್ಸಾಹ ನೀಡಿದ್ದಾರೆ,ಸೇನೆಗೆ ಸೇರಬೇಕು ಎಂಬುದು ಬಾಲ್ಯದ ಕನಸಾಗಿತ್ತು ಭಾರತ ದೇಶದ ಸೇನೆಯಲ್ಲಿ ಸೇವೆ ಮಾಡಲು ಹೆಮ್ಮೆ ಗೌರವ ಇದೆ,
ಸುಬ್ರಹ್ಮಣ್ಯ ಗ್ರಾಮದಲ್ಲಿ ಬಾಲ್ಯದ ವಿದ್ಯಾಭ್ಯಾಸ ಮಾಡಿ ಉನ್ನತ ವಿದ್ಯಾಭ್ಯಾಸಕ್ಕೆ ಬೇರೆಡೆ ತೆರಳಿದ್ದೇನೆ,ಸುಬ್ರಹ್ಮಣ್ಯ ಹೃದಯಕ್ಕೆ ತುಂಬಾ ಹತ್ತಿರವಾದ ಊರು ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ನನಗೆ ಭಾರತೀಯ ಸೇನೆಯಲ್ಲಿ ಅವಕಾಶ ಸಿಕ್ಕಿದೆ, ಒಂದು ವರ್ಷ ಕಠಿಣ ತರಬೇತಿ ಪಡೆದು ಮಾ.9ರಂದು ಲೆಫ್ಟಿನೆಂಟ್ ಆಗಿ ಅಧಿಕಾರ ಸ್ವೀಕರಿಸಿದ್ದೇನೆ,
ಲಡಾಕ್ ನಿಂದ ದೇಶಸೇವೆ ಪ್ರಾರಂಭ ವಾಗಲಿದೆ ಎಂದು ಮಾಧ್ಯಮದ ಮುಂದೆ ಸಂತೋಷದಿಂದ ತಿಳಿಸಿದರು.