Thursday, July 10, 2025

ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಮತ್ತು ನೂತನ ನಾರಾಯಣ ಗುರು ವೇದಿಕೆ ಉದ್ಘಾಟನೆ

ಯಕ್ಷ ಚಿಗುರು ಕಲಾ ತಂಡ ಅಡ್ಯಾಲು ಅಜಿಲಮೊಗರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಮತ್ತು ನೂತನ ನಾರಾಯಣ ಗುರು ವೇದಿಕೆ ಉದ್ಘಾಟನೆ ಇಂದು ನಡೆಯಿತು.

ನವೀನ್ ಶಾಂತಿ ಅಡ್ಯಾಲು ಇವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವ ಯಕ್ಷ ಚಿಗುರು ಕಲಾ ತಂಡದ ವತಿಯಿಂದ ಸಾಯಿ ಶಾಂತಿ ಕೋಕಲ ಇವರ ಪೌರೋಹಿತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಹಾಗೂ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಇಳಿಯೂರು ಇವರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ನಂತರ ನಾರಾಯಣ ಗುರು ವೇದಿಕೆಯ ಉದ್ಘಾಟನೆ ಕಾರ್ಯದಲ್ಲಿ ಪ್ರಶಾಂತ್ ನಾಯಕ್ ಮಾವಿನಕಟ್ಟೆ, ನಟರಾಜ್ ಪೂಜಾರಿ ಕುಟ್ಟಿಕಲ ಮತ್ತು ಪುರುಷೋತ್ತಮ ಪೂಜಾರಿ ಕಾಯರ್ ಪಲ್ಕೆ ಇವರಿಗೆ ಗೌರವಾರ್ಪಣೆ ನಡೆಯಿತು. ಸಭಾ ವೇದಿಕೆಯಲ್ಲಿ ಪುರುಷೋತ್ತಮ ಪೂಜಾರಿ ಮೊಗರು ಮಜಲು, ಶಿವಪ್ಪ ಪೂಜಾರಿ ಹಟದಡ್ಕ, ಸಾಯಿ ಶಾಂತಿ ಕೋಕಲ, ಲಕ್ಷ್ಮೀನಾರಾಯಣ ನೇಲ್ಯಪಲ್ಕೆ, ಮತ್ತು ನವೀನ್ ಶಾಂತಿ ಅಡ್ಯಾಲು ಉಪಸ್ಥಿತರಿದ್ದು, ಯಕ್ಷ ಚಿಗುರು ಕಲಾ ತಂಡದ ವಿದ್ಯಾರ್ಥಿಗಳು, ಊರ ಪರವೂರ ನಾಗರಿಕರು ಭಾಗವಹಿಸಿದರು.

More from the blog

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ – ದಿನೇಶ್ ಗುಂಡೂರಾವ್.. 

ಮಂಗಳೂರು : ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದುಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅವರು...

ಕಾರ್ಮಿಕರ ಅಖಿಲ ಭಾರತ ಮುಷ್ಕರದ ಅಂಗವಾಗಿ ಕಾರ್ಮಿಕರ ಪ್ರತಿಭಟನೆ..

ಬಂಟ್ವಾಳ : ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರದ ದ ಅಂಗವಾಗಿ ಜೆ.ಸಿ.ಟಿ.ಯು ಮತ್ತು ಸಂಯುಕ್ತ ಹೋರಾಟ...

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...