ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಸಂಘಟನೆಯು ಸ್ಥಾಪನೆಯಾಗಿ ಒಂದು ವರ್ಷದಲ್ಲೇ ದೇಶಾಧ್ಯಂತ ಸುಮಾರು 9.50ಲಕ್ಷಕ್ಕಿಂತಲೂ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿದ್ದು ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕಾರ್ಯನಿರ್ವಹಿಸುತ್ತಿವೆ.
ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರುವ ಸಂಧರ್ಭದಲ್ಲಿ ದೇಶಾಧ್ಯಂತ ಆಹಾರ ಸಾಮಗ್ರಿಗಳನ್ನು ಲಕ್ಷಾಂತರ ಅರ್ಹ ಫಲಾನುಭವಿಗಳಿಗೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ತಲುಪಿಸಿ ಕೊಡುವ ಮುಖಾಂತರ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ.
ಇದೀಗ ದಕ್ಷಿಣಕನ್ನಡ ಜಿಲ್ಲೆಗೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ರಾಜ್ಯ ಅಧ್ಯಕ್ಷರಾದ ಜ! ನಸೀರ್ ಅಹ್ಮದ್ ರವರ ಶಿಫಾರಸ್ಸಿನ ಮೇರೆಗೆ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾದ ಜ! ಶಕೀಲ್ ಹಸನ್ ಎಚ್ ರವರು ದಕ್ಷಿಣ ಕನ್ನದ ಜಿಲ್ಲಾ ಅಧ್ಯಕ್ಷರನ್ನಾಗಿ ಆಸಿಫ್ ಚೊಕ್ಕಬೆಟ್ಟು ಅವರನ್ನು ಆಯ್ಕೆಮಾಡಿರುತ್ತಾರೆ.

