ಬಂಟ್ವಾಳ : ಕುಲಾಲ ಕುಂಬಾರರ ವೇದಿಕೆ, ಪಣೋಲಿಬೈಲು ಇದರ ನಾಲ್ಕನೇ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭವು ಜ. 10ರಂದು ಸಂಜೆ 6.30ಕ್ಕೆ ಶ್ರೀ ಕೄಷ್ಣ ಭಜನಾ ಮಂದಿರ ಪಣೋಲಿಬೈಲು ಸಭಾಂಣದಲ್ಲಿ ವೇದಿಕೆಯ ಅಧ್ಯಕ್ಷರಾದ ರವಿಂದ್ರ ಕುಲಾಲ್ ಕಂದೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅಥಿತಿಯಾಗಿ ಕೊರಗಪ್ಪ ಕುಲಾಲ ಜಾಡಕೋಡಿ ಗೌರವ ಅಧ್ಯಕ್ಷರಾದ ರಮೇಶ್ ಕುಲಾಲ್ ಗೌರವ ಸಲಹೆಗಾರ ಲಿಂಗಪ್ಪ ಬಂಗೇರ ಕಾರಜೆ ಉಪಾಧ್ಯಕ್ಷ ರಮೇಶ್ ಎಂ ಪಣೋಲಿಬೈಲು ಭಾಗವಹಿಸಿದ್ದರು. ಶಿವರಾಮ ಮರ್ತಾಜೆ ಸ್ವಾಗತಿಸಿದರು. ಶ್ಲಂ ಧರ್ ಮೂಲ್ಯ ಲೆಕ್ಕಪತ್ರ ಮಂಡನೆ ಮಾಡಿದರು. ಶ್ರೀ ಶಿವರಾಮ್ ವರದಿ ಮಂಡಿಸಿದರು. ನೂತನ ಅಧ್ಯಕ್ಷ ರಾಗಿ ರಮೇಶ್ ಎಂ ಪಣೋಲಿಬೈಲು ಉಪಾಧ್ಯಕ್ಷ ರಾಗಿ ಉಮೇಶ್ ಕುಲಾಲ್ ಪಣೋಲಿಬೈಲು ಕಾರ್ಯದರ್ಶಿ ಯಾಗಿ ಶ್ರೀ ರವಿರಾಜ್ ಕುಲಾಲ್ ಜತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೊಳಕೆ ಲೆಕ್ಕಪರಿಶೋಧಕರ ರಾಗಿ ನವೀನ್ ಕುಮಾರ್ ಪಣೋಲಿಬೈಲು ಕೋಶಾಧಿಕಾರಿಯಾಗಿ ಬಾಲಕೃಷ್ಣ ಜಾಡಕೋಡಿ ಆಯ್ಕೆ ಯಾಗಿದ್ದರೆ. ರವಿರಾಜ್ ಕುಲಾಲ್ ವಂದಿಸಿದರು ಜಲಂಧರ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

