Wednesday, February 12, 2025

ಶ್ರೀಕೃಷ್ಣ ಮಂದಿರ ಅಮ್ಟೂರು ಅಧ್ಯಕ್ಷರಾಗಿ ರಮೇಶ್‌ ಕರಿಂಗಾಣ ಆಯ್ಕೆ

ಶ್ರೀ ಕೃಷ್ಣ ಮಂದಿರಅಮ್ಟೂರು ಇದರ18-19 ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಮಂದಿರದ ಹಿರಿಯರಾದ ಮಹಾಬಲ ಶೆಟ್ಟಿ ನಂದಾಗೋಕುಲ ಇವರ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ನಂತರ2019-20ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಮೇಶ್‌ ಕರಿಂಗಾಣ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಸಂತ ಭಟ್ಟಹಿತ್ಲು, ಕಾರ್‍ಯದರ್ಶಿ ಅನಿಲ್ ಪೊಯ್ಯಕಂಡ, ಜೊತೆಕಾರ್‍ಯದರ್ಶಿ ಗೋಪಾಲ ಪೂಜಾರಿ, ಕೋಶಾಧಿಕಾರಿಜಯಪ್ರಕಾಶ್, ಲೆಕ್ಕಪರಿಶೋಧಕರಾಗಿ ಕುಶಾಲಪ್ಪಅಮ್ಟೂರು, ಭಜನಾ ಕಾರ್‍ಯದರ್ಶಿ ವೇಣುಗೋಪಾಲ, ಭಜನಾ ಸಂಘಟಕರಾಗಿ ಪುರುಷೋತ್ತಮ ಪೊಯ್ಯಕಂಡ, ಸುರೇಶ, ರಾಜೇಶ, ತಾರಾನಾಥಅಮ್ಟೂರು, ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಐತಾಳ್ ಓಣಿಬೈಲು ಇವರನ್ನು ಆಯ್ಕೆ ಮಾಡಲಾಯಿತು.

ಸಲಹೆಗಾರರಾಗಿ ಶರತ್‌ಕುಮಾರ್, ಮಹಾಬಲ ಕುಲಾಲ್, ದಯಾನಂದ ಪೂಜಾರಿ, ಮಹಾಬಲ ಬಿ, ಹರೀಶ ಬಿ, ಸೂರ್‍ಯ, ಮೋಹನ ಆಚಾರ್‍ಯ, ಗಂಗಾಧರ, ನೋಣಯ್ಯ, ಜಿತೇಶ್ ಬಾಳಿಕೆ, ದಿವಾಕರ ಪೂಜಾರಿ, ಹರೀಶ್ ಬಿ.ಪೊಯ್ಯಕಂಡ, ಶಂಕರ ಬಿ.ಇವರನ್ನುಆಯ್ಕೆ ಮಾಡಲಾಯಿತು.
ಕುಶಾಲಪ್ಪಅಮ್ಟೂರುಕಾರ್‍ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...