ವಿಟ್ಲ: ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬ್ಯಾಂಕೊಂದರ ಕಿಟಕಿ ಮುರಿದು ಒಳ ನುಸುಳಿ ಕಳ್ಳರು ಕೋಟ್ಯಂತರ ಮೌಲ್ಯದ ಹಣ-ಒಡವೆ ದೋಚಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನಡೆದಿದೆ.


ಕರ್ನಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಲ್ಲಿ ಈ ಕಳ್ಳತನ ದುಷ್ಕೃತ್ಯ ನಡೆದಿದ್ದು, ಸಾರ್ವತ್ರಿಕ ಆತಂಕ ಉಂಟು ಮಾಡಿದೆ.
ಸುಮಾರು 20 ವರುಷಗಳ ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಇದ್ದು, ಬ್ಯಾಂಕಿನ ಸುತ್ತಮುತ್ತಲೂ ಕಾಡು-ಪೊದೆಗಂಟಿಗಳು ಬೆಳೆದು ಕಾಡಿನಂತಾಗಿದೆ. ಈ ಜಾಗದ ಮೂಲಕ ಕಳ್ಳರು ಕನ್ನಡ ಹಾಕಿದ್ದಾರೆ. ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬ್ಯಾಂಕ್ ಗ್ರಾಹಕರು ಸೇಫ್ ಲಾಕರ್ ನಲ್ಲಿ ಇರಿಸಿದ್ದ, ಆಭರಣ ಸಾಲಕ್ಕೆ ನೀಡಿದ್ದ ಒಡವೆಗಳನ್ನು ಮತ್ತು ಲಕ್ಷಾಂತರ ನಗದನ್ನು ದೋಚಿದ್ದಾರೆ. ನಿಪುಣ ಕಳ್ಳರು ತಂಡದಿಂದ ಈ ಕೃತ್ಯ ನಡೆದಿದ್ದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಹಿತ ಸ್ಥಳಕ್ಕೆ ಭೇಟಿ ನೀಡಿದ್ದು, ಬೆರಳಚ್ಚು, ಶ್ವಾನ ದಳ ಪರಿಶೀಲನೆ ನಡೆಸಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಾಗಿದೆ.