Thursday, January 29, 2026

ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ನಾನಾ ಸಂಘಗಳ ಉದ್ಘಾಟನೆ

ಅಡ್ಯನಡ್ಕ : ಜನತಾ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷದ ನಾನಾ ಸಹಪಠ್ಯ ಸಂಘಗಳನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಎಂ. ನಾರಾಯಣ ಉಪಾಧ್ಯಾಯ ಅವರು ಸಾಹಿತ್ಯ ಸಂಘ, ಗ್ರಾಹಕ ಸಂಘ, ಕ್ರೀಡಾ ಸಂಘ, ಸಮಾಜ ವಿಜ್ಞಾನ ಸಂಘ, ವಿಜ್ಞಾನ ಮತ್ತು ಪರಿಸರ ಸಂಘವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಯಶಸ್ವಿಯಾಗಿ ಹೊರಹೊಮ್ಮಲು ಸಹಪಠ್ಯ ಚಟುವಟಿಕೆಗಳು ಪೂರಕವಾಗಿವೆ. ಕಲಿಕೆಯಲ್ಲಿ ಏಕತಾನತೆಯನ್ನು ನಿವಾರಿಸಿ ತನ್ಮಯತೆಯಿಂದ ತೊಡಗಿಕೊಳ್ಳಲು ಅವು ಪ್ರೇರಣೆ ನೀಡುತ್ತವೆ ಎಂದರು.
ಮುಖ್ಯ ಶಿಕ್ಷಕ ಟಿ. ಆರ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕ ಶಿವಕುಮಾರ ಸಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ, ನಾನಾ ಸಂಘಗಳ ಅಧ್ಯಕ್ಷರಾದ ಮಧುರಾ ಬಿ., ವಿಜೇತ ಎಂ, ಬಲ್ಕೀಸಾಬಾನು, ಸಹನಕುಮಾರಿ ಎ. ಹಾಗೂ ರಶ್ಮಿತಾ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕಿ ಕುಸುಮಾವತಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಮೂಹಗಾನ ಮತ್ತು ಭಾಷಣ ಜರುಗಿತು. ಬಲ್ಕೀಸಾಬಾನು ಸ್ವಾಗತಿಸಿದರು. ತೃಪ್ತಿ ವಂದಿಸಿದರು. ಫಾತಿಮತ್ ಅಫೀಝ ಕಾರ್‍ಯಕ್ರಮ ನಿರೂಪಿಸಿದರು.

More from the blog

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...

ಕೊಳ್ನಾಡು: ಕಾಲುಜಾರಿ ಬಾವಿಗೆ ಬಿದ್ದು ಕೃಷಿಕ ಸಾವು

ವಿಟ್ಲ: ದಾರಿ ಬದಿಯ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಕೊಳ್ನಾಡು ಗ್ರಾಮದ ಸಾಲೆತ್ತೂರು ಕೋಡಿ ನಿವಾಸಿ ಕೃಷ್ಣಪ್ಪ ಪೂಜಾರಿ(70) ಮೃತ ಪಟ್ಟಿದ್ದಾರೆ. ಮಂಗಳವಾರ ಸಂಜೆ ಎಂದಿನಂತೆ ಸಾಲೆತ್ತೂರು ಪೇಟೆಗೆ ಹೋಗಿ ಹಿಂತಿರುಗಿ ಬರುವಾಗ...