ಅಡ್ಯನಡ್ಕ: ಅಡ್ಯನಡ್ಕ ಜನತಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏಕಾಗ್ರತೆ ಮತ್ತು ಮೆದುಳಿನ ಶಕ್ತಿ ವರ್ಧನೆಗೆ ಪೂರಕವಾದ ಧ್ಯಾನ,
ಉಸಿರಾಟ ಮತ್ತು ಆಸನಗಳನ್ನು ಪರಿಚಯಿಸುವ ಯೋಗ ಪ್ರಾಣ ವಿದ್ಯಾ ತರಬೇತಿ ಕಾರ್ಯಕ್ರಮವು ಜು.12ರಂದು ಜರುಗಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಯೋಗ ಪ್ರಾಣ ವಿದ್ಯಾ ಸೆಂಟರ್ ಪುತ್ತೂರು ಇಲ್ಲಿನ ತರಬೇತುದಾರರಾದ ವಿನುತಾ ಎಂ.ಎಸ್. ಹಾಗೂ
ಪೂರ್ಣಿಮಾ ತರಬೇತಿ ನೀಡಿದರು. ಸೂಪರ್ ಬ್ರೈನ್ ಆಸನ, ಲಯಬದ್ಧ ಯೋಗೀಯ ಉಸಿರಾಟ, ಕ್ಷಮಾ ಸಾಧನ, ಪೃಥ್ವಿ ಶಾಂತಿ ಧ್ಯಾನ
ಇವುಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್, ವಿಜ್ಞಾನ ಸಂಘದ ಮಾರ್ಗದರ್ಶಿ ಶಿಕ್ಷಕಿ ಕುಸುಮಾವತಿ ವೇದಿಕೆಯಲ್ಲಿ
ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ವಂದಿಸಿದರು.

