Saturday, February 8, 2025

ಬಂಟ್ವಾಳದ ಇರಾದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಕೇಂದ್ರ ಕಾರಾಗೃಹ ಸ್ಥಳ ಪರಿಶೀಲನೆ ನಡೆಸಿದ ಎ.ಡಿ.ಜಿ.ಪಿ.ಮೇಘರಿಕ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಮುಡಿಪು ಸಮೀಪದ ಇರಾ ಮತ್ತು ಕುರ್ನಾಡು ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೇಂದ್ರ ಕಾರಾಗ್ರಹ ಮತ್ತು ಅಧಿಕಾರಿಗಳ ವಸತಿ ಸಮುಚ್ಚಯ ದ ಸ್ಥಳ ಪರಿವೀಕ್ಷಣೆ ಗೆ ಬೆಂಗಳೂರು ಎಡಿಜಿಪಿ ಎನ್.ಎಸ್.ಮೇಘರಿಕ್ ಅಗಮಿಸಿದ್ದರು.


ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ
ಸೂಕ್ತವಾದ ಮಾಹಿತಿ ಪಡೆದು ಶೀಘ್ರವಾಗಿ ಕಾಮಗಾರಿಯ ಆರಂಭಕ್ಕೆ ಯಾವ ಎಲ್ಲಾ ರೀತಿಯ ವ್ಯವಸ್ಥೆ ಗಳು ಬೇಕು ಎಂಬುದನ್ನು ತಿಳಿದುಕೊಂಡರು.
ಪ್ರಸ್ತುತ ಮಂಗಳೂರು ಬೆಸೆಂಟ್ ಕಾಲೇಜಿನ ಪಕ್ಕದಲ್ಲಿರುವ ಹಳೆಯ ಜೈಲಿನ ಜಾಗದ ಕೊರತೆಯನ್ನು ನೀಗಿಸಲು ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲೂಕಿನ ಇರಾ ಮತ್ತು ಕುರ್ನಾಡು ಸಮೀಪದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮದವರು ನೀಡಿರುವ ಸುಮಾರು 64 ಎಕರೆ ಜಮೀನಿನಲ್ಲಿ ಅಂದಾಜು 250 ಕೋಟಿ ವೆಚ್ಚದಲ್ಲಿ 1000 ಜನ ಕೈದಿಗಳಿಗೆ ವ್ಯವಸ್ಥೆ ಇರುವ ಸುಸಜ್ಜಿತ ಮಾದರಿ ಜೈಲು ನಿರ್ಮಾಣ ಕ್ಕೆ ಮತ್ತು ಅಲ್ಲೇ ಪಕ್ಕದಲ್ಲಿ ಅಧಿಕಾರಿಗಳ ವಸತಿಗ್ರಹ ನಿರ್ಮಾಣಕ್ಕೆ ಸರಕಾರ ಮುಂದಾಗಿದ್ದಾರೆ.
ಪ್ರಥಮ ಹಂತದಲ್ಲಿ 100 ಕೋಟಿ ವೆಚ್ಚದಲ್ಲಿ ಜೈಲು ನಿರ್ಮಾಣ ಕಾರ್ಯ ನಡೆದ ಬಳಿಕ ಎರಡನೇ ಹಂತದಲ್ಲಿ ಅಧಿಕಾರಿಗಳ ವಸತಿ ನಿರ್ಮಾಣ ನಡೆಯುವ ಯೋಜನೆ ಹಾಕಿಕೊಂಡಿದ್ದಾರೆ
ಹಳೆಯ ಜೈಲು 11 ಎಕರೆ ಜಮೀನಿನಲ್ಲಿ ಇದ್ದು ಕೇವಲ 200 ಕೈದಿಗಳನ್ನು ಮಾತ್ರ ಜೈಲಿನಲ್ಲಿ ಹಾಕಲು ಸಾಧ್ಯವಾಗುತ್ತದೆ. ಉಳಿದಂತೆ ಅನೇಕ ಕೈದಿಗಳನ್ನು ಈ ಕೊರತೆಯಿಂದ ಬೇರೆ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
ಈ ಸಮಸ್ಯೆ ನೀಗಿಸಲು ಮಾದರಿ ಕಾರಾಗ್ರಹ ನಿರ್ಮಾಣ ದ ಯೋಚನೆ ನಡೆಸಿ ಈಗಾಗಲೇ ಪೋಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಆಡಳಿತಾತ್ಮಕ ಅನುಮೋದನೆಯ ಹಂತದಲ್ಲಿ ದೆ ಎಂದು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಕಾರಾಗೃಹ ನಿರ್ಮಾಣ ಕ್ಕೆ ಸೂಚಿಸಲಾಗಿರುವ ಜಮೀನಿಗೆ ಎ.ಡಿ.ಜಿ.ಪಿ.ಮೇಘರಿಕ್ , ಪಶ್ಚಿಮ ವಲಯ ಐ.ಜಿ.ಪಿ.ಹರಿಶೇಖರನ್ ,ಪೋಲೀಸ್ ಕಮೀಷನರ್ ಟಿ.ಆರ್.ಸುರೇಶ್, ಎಸ್.ಪಿ.ಡಿ.ಎಮ್.ಲಕ್ಮೀ ಪ್ರಸಾದ್, ಡಿ.ಸಿ.ಪಿ.ಉಮಾ, ಎ.ಸಿ.ಪಿ.ಶ್ರೀನಿವಾಸ ಗೌಡ,ಬಂಟ್ವಾಳ ಎ.ಎಸ್.ಪಿ.ಸೈದುಲ್ ಅಡಾವತ್ , ಜಿಲ್ಲಾ ಕಾರಾಗೃಹ ಅಧೀಕ್ಷಕ ಚಂದನ್ , ಪಿ.ಡಬ್ಲೂ.ಡಿ.ಇಂಜಿನಿಯರ್ ಉಮೇಶ್ ಭಟ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು

More from the blog

ಬಂಟ್ವಾಳ : ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

ಬಂಟ್ವಾಳ: ಪ್ಯಾನ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಎಂಬಲ್ಲಿ  ನಡೆದಿದೆ. ಅರಳ ನಿವಾಸಿ ಭವಾನಿ ಶಂಕರ ಯಾನೆ ರಾಜೇಶ್ ಮೃತಪಟ್ಟ ವ್ಯಕ್ತಿ. ರಾಜೇಶ್  ಸಜೀಪ...

ಶ್ರೀ ಒಡಿಯೂರು ರಥೋತ್ಸವ – ಜಾತ್ರೆ ಅಂಗವಾಗಿ ನಡೆಯಿತು ಧರ್ಮಸಭೆ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ಶುಕ್ರವಾರ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಅಂಗವಾಗಿ ಧರ್ಮಸಭೆ ನಡೆಯಿತು. ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಿ,...

ಅನರ್ಹ ಮತದಾರರ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಗೆ ಪರಿಗಣಿಸಬಾರದು: ಉಚ್ಚ ನ್ಯಾಯಾಲಯದ ತೀರ್ಪು

ಬಂಟ್ವಾಳ: ಮಡಂತ್ಯಾ‌ರ್ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವ ವ್ಯಕ್ತಿಗಳ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ಉಚ್ಚ ನ್ಯಾಯಲಯವು ಐತಿಹಾಸಿಕ ತೀರ್ಪನ್ನು ಹೊರಡಿಸಿದೆ. ಮಡಂತ್ಯಾ‌ರ್ ಪ್ರಾಥಮಿಕ...

ಬಂಟ್ವಾಳ : ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೀಡಿ – ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ

ಬಂಟ್ವಾಳ: ಸುಸಜ್ಜಿತವಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವಿಭಾಗದಲ್ಲಿ ವೈದ್ಯರುಗಳಿಲ್ಲದೆ, ತಾಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಸಾಮಾಜಿಕ ಕಾರ್ಯಕರ್ತ ಸಮಾದ್ ಕೈಕಂಬ ಅವರು...