Sunday, February 9, 2025

ಹಿಂಬಾಗಿಲು ಕಿಟಕಿ ಮೂಲಕ ಬ್ಯಾಂಕ್ ಗೆ ನುಗ್ಗಿ ಲಕ್ಷಾಂತರ ನಗನಗದು ಕಳವು…..

ವಿಟ್ಲ: ಕಲ್ಲಡ್ಕ – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಅಡ್ಯನಡ್ಕದಲ್ಲಿ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಬೆಳಗ್ಗೆ ಕಛೇರಿಯನ್ನು ತೆರೆಯುವ ಸಂದರ್ಭದಲ್ಲಿ ಹಿಂಬಾಗಿಲ ಕಿಟಕಿ ಮೂಲಕ ಒಳನುಸುಳಿದ ದರೋಡೆಕೋರರ ತಂಡ ಸೇಫ್ ಲಾಕರ್ ಬಾಗಿಲು ಕೊರೆದಿರುವುದು ನಗದು ಸಹಿತ ಲಾಕರ್ ನಲ್ಲಿಟ್ಟ ಚಿನ್ನವನ್ನು ದೋಚಿದ ಕೃತ್ಯ ಬೆಳಕಿಗೆ ಬಂದಿದೆ.

ಅಡ್ಯನಡ್ಕ ಶಾಖೆಯ ಹಿಂಭಾಗದಲ್ಲಿ ಕಾಡಿದ್ದು, ಈ ದಾರಿಯನ್ನು ಬಳಸಿದ ತಂಡ ಕಿಟಕಿಯ ೮ ಸರಳುಗಳನ್ನು ಕಬ್ಬಿಣ ತುಂಡಸಿಸುವ ಗರಗಸ ಬಳಸಿ ತುಂಡರಿಸಲಾಗಿದೆ. ಬಳಿಕ ಇಬ್ಬರು ಒಳಗೆ ಹೋಗಿರುವ ಬಗ್ಗೆ ಸುಳಿವು ಮತ್ತೆಯಾಗಿದ್ದು, ಸೇಫ್ ಲಾಕರ್ ಬಾಗಿಲನ್ನು ಗ್ಯಾಸ್ ಕಟ್ಟರು ಬಳಸಿ ತುಂಡರಿಸಿ ನಗದು ದೋಚಿದ್ದಾರೆ. ಗ್ರಾಹಕರ ವೈಯಕ್ತಿಕ ಲಾಕರ್ ಪೈಕಿ ಕೆಲವನ್ನು ತೆರೆಯುವಲ್ಲಿ ತಂಡ ಯಶಸ್ವಿಯಾಗಿದೆ ಎಂಬ ಮಾಹಿತಿಯಿದೆ.

ಅಡ್ಯನಡ್ಕ ಪೇಟೆಯಲ್ಲಿ ಸುಮಾರು ೧೧ ಗಂಟೆಯವರೆಗೂ ಜನ ಸಂಚಾರ ಇದ್ದು, ಆ ಸಮಯದ ಬಳಿಕ ತಂಡ ಆಗಮಿಸಿರಬಹುದೆಂದು ಹೇಳಲಾಗುತ್ತಿದೆ. ಗುರುವಾರ ಬೆಳಿಗ್ಗೆ ೯.೩೦ ರ ಸುಮಾರಿಗೆ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ವಿಟ್ಲ ಠಾಣೆಗೆ ಹಾಗೂ ಬ್ಯಾಂಕ್ ಹಿರಿಯ ಅಧಿಕಾರಿಗಳಿಗೆ ತಿಳಿಸುವ ಕಾರ್ಯ ಮಾಡಿದ್ದಾರೆ. ಸುಮಾರು ೧೦.೩೦ರ ಸಮಯಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕ್ ಆವರಣವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಿದ್ದಾರೆ.

ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ಹೊರತು ಪಡಿಸಿ ಉಳಿದವರನ್ನು ಹೊರಗಡೆ ನಿಲ್ಲಿಸಿ ಅಗತ್ಯ ವಿಚಾರಣೆ ನಡೆಸಿದ್ದಾರೆ. ಅಂದಾಜು ಪ್ರಕಾರ ಲಾಕರ್ ಒಳಗಿದ್ದ ೧೬ ಲಕ್ಷ ನಗದು ಹಾಗೂ ಕೆಲವು ವೈಯಕ್ತಿಕ ಲಾಕರ್ ಗಳನ್ನು ಕಳ್ಳರು ತೆರೆದು ಅದರಲ್ಲಿದ್ದ ಚಿನ್ನಾಭರಣವನ್ನು ದೋಚುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ೧೨.೩೦ಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದೆ. ಚಿನ್ನಾಭರಣ ಅಡವು ಸಾಲ ನೀಡಿದ ಚಿನ್ನ ಭದ್ರವಾಗಿದೆ ಎಂಬ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ನೀಡಿದ್ದಾರೆ.

ಕೋಟ್ಯಾಂತರ ಮೌಲ್ಯದ ಚಿನ್ನಾಭರಣಗಳು ವೈಯಕ್ತಿಕ ಲಾಕರ್ ಗಳಲ್ಲಿ ಇತ್ತೆನ್ನಲಾಗಿದ್ದು, ಹಲವು ಮಂದಿ ಗ್ರಾಹಕರು ಬ್ಯಾಂಕ್ ದರೋಡೆ ವಿಚಾರ ಹೊರಬರುತ್ತಿದ್ದಂತೆ ಬ್ಯಾಂಕ್ ಮುಂದೆ ಬರಲಾರಂಭಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣೆಯ ಅಧಿಕಾರಿಗಳು ಆಗಮಿಸುವ ಜತೆಗೆ ಪೊಲೀಸ್ ಅಧೀಕ್ಷಕ ರಿಷ್ಯಂತ್ ಆಗಮಿಸಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೆಲವು ಗಂಟೆಗಳ ಕಾರ್ಯಾಚರಣೆ

ಇಲಾಖೆಯ ಪ್ರಕಾರ ರಾತ್ರಿ ಸುಮಾರು ೨ರಿಂದ ಬೆಳಗ್ಗಿನ ಜಾವ ೫ ಗಂಟೆ ಮಧ್ಯ ಭಾಗದಲ್ಲಿ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಆದರೆ ಸೇಫ್ ಲಾಕರ್ ಬಾಗಿಲನ್ನು ತುಂಡರಿಸಲು ಕೇವಲ ೩ ಗಂಟೆ ಮಾತ್ರ ಸಾಕಾಗಿರಬಹುದಾ ಎಂಬ ಪ್ರಶ್ನೆ ಮೂಡುತ್ತಿದೆ. ಬ್ಯಾಂಕ್ ಒಳ ಭಾಗದಲ್ಲಿ ಕಳ್ಳರು ಎಷ್ಟು ಗಂಟೆಗೆ ನುಗ್ಗಿದ್ದಾರೆಂಬ ನಿಖರ ಮಾಹಿತಿ ಲಭ್ಯವಾಗದಿದ್ದರೂ, ರಾತ್ರಿ ಬೇಗನೆ ಒಳಗೆ ಹೋಗಿ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಈ ಕೃತ್ಯ ನಡೆಸಿರಬಹುದಾ ಎಂಬ ಗುಮಾನ ಮೂಡುತ್ತಿದೆ.

ಬೊಬ್ಬೆ ಹಾಕದ ಅಲರಾಂ

ಸೇಫ್ ಲಾಕರ್ ಬಾಗಿಲು ತೆರೆಯುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ, ತಕ್ಷಣ ರಕ್ಷಣಾ ಅಲರಾಂ ಮೊಳಗಬೇಕಾಗಿತ್ತು. ಆದರೆ ಕೆಲವು ಗಂಟೆಗಳ ಕಾಲ ಬ್ಯಾಂಕ್ ಒಳಗೆ ಇರುವ ಮೂಲಕ ಭದ್ರತಾ ವ್ಯವಸ್ಥೆಗೇ ಸವಾಲು ಹಾಕಿದ್ದಾರೆ. ತಂತ್ರಜ್ಞಾನ ಇದು ಮೊಳಗದಂತೆ ಮಾಡಲು ಯಾವ ವ್ಯವಸ್ಥೆಯನ್ನು ಬಳಸಿದ್ದಾರೆ ಎಂಬದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.

More from the blog

ದೆಹಲಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ…. ಸಿದ್ದಕಟ್ಟೆ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ*

  ದೆಹಲಿ ವಿಧಾನ ಸಭೆಗೆ ನಡೆದ ಚುನಾವಣೆ ಯಲ್ಲಿ ಭಾರತೀಯ ಜನತಾ ಪಕ್ಷ 70 ಸ್ಥಾನ ಗಳಲ್ಲಿ ಬರೋಬ್ಬರಿ 48 ಸ್ಥಾನ ಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಭೇರಿ ಗಳಿಸುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ...

ಜುಗಾರಿ ಅಡ್ಡೆಗೆ ದಾಳಿ: ಹತ್ತು ಜನರ ಬಂಧನ

ಬಂಟ್ವಾಳ: ಹಣ ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಹಾಗೂ ಸಾವಿರಾರು...

ಮಾರ್ಬಲ್ ಲಾರಿ ಪಲ್ಟಿ

ಬಂಟ್ವಾಳ: ಮಾರ್ಬಲ್ ಲೋಡ್ ಲಾರಿಯೊಂದು ತಾಂತ್ರಿಕ ದೋಷದಿಂದ ರಸ್ತೆಯ ವಿಭಾಜಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ರಾಷ್ಟ್ರೀಯ ಮಂಗಳೂರು- ಬೆಂಗಳೂರು ರಸ್ತೆಯ ತುಂಬೆ ಸಮೀಪದ ರಾಮಲ್ ಕಟ್ಟೆ ಎಂಬಲ್ಲಿ ಪಲ್ಟಿಯಾಗಿದೆ. ಘಟನೆಯಿಂದ ಯಾವುದೇ ಅಪಾಯ...

ಶ್ರೀ ಒಡಿಯೂರು ರಥೋತ್ಸವ – ಜಾತ್ರೆ ಅಂಗವಾಗಿ ನಡೆಯಿತು ಧರ್ಮಸಭೆ

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ಶುಕ್ರವಾರ ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಅಂಗವಾಗಿ ಧರ್ಮಸಭೆ ನಡೆಯಿತು. ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಿ,...