Thursday, February 13, 2025

ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣ: ಪೋಲೀಸ್ ತನಿಖೆಯಿಂದ ಅನೇಕ ಮಾಹಿತಿ ಲಭ್ಯ….

ವಿಟ್ಲ: ಕರ್ಣಾಟಕ ಬ್ಯಾಂಕ್ ನಿಂದ ಕದ್ದ ಹಣವನ್ನು ಕೇರಳದ ಮೈದಾನವೊಂದರಲ್ಲಿ ಹೂತಿಡುವ ಜತೆಗೆ ಲಾಕರ್ ತುಂಡರಿಸಲು ವೆಲ್ಡಿಂಗ್ ಕೆಲಸದಲ್ಲಿ ನೈಪುಣ್ಯತೆಯನ್ನು ಹೊಂದಿದ ವ್ಯಕ್ತಿಯನ್ನು ಬಳಸಿಕೊಂಡಿದ್ದರೆಂಬ ಮಾಹಿತಿ ಪೊಲೀಸ್ ವಶದಲ್ಲಿರುವ ವ್ಯಕ್ತಿಗಳ ತನಿಖೆಯಿಂದ ಬಹಿರಂಗಗೊಂಡಿದೆ.

ಕಳ್ಳತನದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯವನ್ನು ಕೇರಳದಲ್ಲಿ ಬೀಡು ಬಿಟ್ಟು ನಡೆಸುತ್ತಿದ್ದಾರೆ. ಕಾಸರಗೋಡು ಭಾಗದ ಮೂವರ ಜತೆಗೆ ಬಾಯಾರು ವ್ಯಕ್ತಿಯೊಬ್ಬ ಭಾಗಿಯಾಗಿದ್ದಾನೆ. ಇವರನ್ನು ಬಂಧಿಸುವ ಜತೆಗೆ ಮನೆಯವರಲ್ಲಿದ್ದ ಬಂಗಾರವನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ.

ಬಾಯಾರು ನಿವಾಸಿ ಊರಿನಲ್ಲಿ ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳನ್ನು ಖರೀದಿಗೆ ಕೆಲವು ದಿನದಿಂದ ಮುಂದಾಗಿದ್ದಾನೆ. ಈ ನಡುವೆ ಅಡ್ಯನಡ್ಕಕ್ಕೆ ಆಗಮಿಸಿ ಮಧ್ಯ ಸೇವನೆ ಮಾಡಿ ನಶೆಯಲ್ಲಿ ಬ್ಯಾಂಕ್ ನುಗ್ಗಿ ಹಣ ಕಳವು ಮಾಡಿದ್ದು, ಯಾರು ಏನು ಮಾಡಿದರು ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಪೊಲೀಸರಿಗೆ ಸ್ಥಳೀಯರು ತಿಳಿಸಿದ ಹಿನ್ನಲೆಯಲ್ಲಿ ಈ ಸಿಕ್ಕಿಬಿದಿದ್ದಾನೆ ಎನ್ನಲಾಗಿದೆ. ಈ ವರೆಗೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಈ ಗುರುತಿಸಿಕೊಂಡಿಲ್ಲ ಎನ್ನಲಾಗಿದೆ.

ಅಡ್ಯನಡ್ಕ ಬ್ಯಾಂಕ್ ಕಳ್ಳತನ ಪ್ರಕರಣ ಫೆ.೭ರಂದು ರಾತ್ರಿ ನಡೆದಿದ್ದು, ಫೆ.೮ರಂದು ಬೆಳಗ್ಗೆ ಬ್ಯಾಂಕ್ ಅಧಿಕಾರಿಗಳು ಕಛೇರಿಗೆ ತೆರಳುವ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಆ ಬಳಿಕ ಸ್ಥಳೀಯ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸುವ ಜತೆಗೆ ವಾಹನದ ಚಲನವಲನವನ್ನು ಸಿಸಿಕ್ಯಾಮಾರಾಗಳ ಮೂಲಕ ಪತ್ತೆ ಮಾಡಿದ್ದರು. ವಾರದ ಹಿಂದೆ ಇಬ್ಬರು ಪ್ರಮುಖ ರುವಾರಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಕದ್ದ ಮಾಲನ್ನು ನಾಲ್ಕು ಪಾಲು ಮಾಡಿಕೊಂಡಿರುವ ವಿಚಾರ ಆಸಂದರ್ಭದಲ್ಲಿ ತಿಳಿದು ಬಂದಿತ್ತು.

ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿರುವ ಬಾಯಾರು ಪೈವಳಿಕೆ ಗಾಳಿಯಡ್ಕ ನಿವಾಸಿ ಬ್ಯಾಂಕ್ ನ ಲಾಕರ್ ಗಳನ್ನು ತುಂಡರಿಸಲು ಕಳ್ಳರ ಜತೆಗೆ ಸೇರಿಕೊಂಡಿದ್ದಾನೆ ಎಂಬುದು ಬಹಿರಂಗಗೊಂಡಿದೆ. ಲಾಕರ್ ಗಳನ್ನು ತುಂಡರಿಸಿರುವ ಶೈಲಿಯನ್ನು ಗಮನಿಸಿದ ಪೊಲೀಸರಿಗೆ ಆಗಲೇ ಕಬ್ಬಿಣ ತುಂಡರಿಸಿ ನೈಪುಣ್ಯತೆಯನ್ನು ಹೊಂದಿರುವ ವ್ಯಕ್ತಿ ಭಾಗಿಯಾಗಿರುವ ಅನುಮಾನ ಮೂಡಿದ್ದು, ತನಿಖೆಯಿಂದ ದೃಢ ಪಟ್ಟಿದೆ. ವೆಲ್ಡರ್ ಹಾಗೂ ಬ್ಯಾಂಕ್ ನಲ್ಲಿ ಹಿಂದೆ ಇದ್ದ ಅಧಿಕಾರಿಯೊಬ್ಬರು ಸಂಬಂಧಿಕರಾಗಿದ್ದು, ಅವರಿಂದ ಮಾಹಿತಿ ಪಡೆಯಲಾಗಿತ್ತಾ? ಬ್ಯಾಂಕ್ ನ ಕೆಲವು ವೆಲ್ಡಿಂಗ್ ಕೆಲಸವನ್ನು ಇದೇ ವ್ಯಕ್ತಿ ನಡೆಸಿದ್ದನಾ ಎಂಬ ಅನುಮಾನದ ಮಾತುಗಳೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕಳ್ಳತನದ ಬಳಿಕ ಯಾರಿಗೂ ಅನುಮಾನಗಳು ಮೂಡಬಾರದೆಂಬ ಕಾರಣಕ್ಕೆ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಂಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ನಗದು ಹಾಗೂ ಚಿನ್ನಾಭರಣವನ್ನು ಹೂತಿಟ್ಟಿದ್ದರು. ಈ ಬಗ್ಗೆ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾರೆಂದು ತಿಳಿದು ಬಂದಿದೆ. ಕಳ್ಳತನ ನಡೆದ ದಿನ ಬೆಳಗ್ಗೆ ಸುಮಾರು ೫.೩೦ರ ಆಸುಪಾಸಿನಗಲ್ಲಿ ಕಾರು ಸಾರಡ್ಕ ಭಾಗದಿಂದ ಕುದ್ದುಪದವು ಕಡೆಗೆ ಸಾಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಪತ್ತೆಯಾಗಿರುವುದು ಬಾಯಾರಿಗೆ ಸಂಚರಿಸಿರುವುದಕ್ಕೆ ಪುಷ್ಠಿಯನ್ನು ನೀಡುತ್ತದೆ.

ಬ್ಯಾಂಕ್ ಕಳ್ಳತನದಲ್ಲಿ ಸಿಕ್ಕವನ್ನು ನಾಲ್ವರು ಹಂಚಿಕೊಂಡಿದ್ದು, ಆ ಬಳಿಕ ಬಾಯಾರಿನ ವ್ಯಕ್ತಿ ಸಾರ್ವಜನಿಕವಾಗಿ ಐಷಾರಾಮಿ ತನವನ್ನು ತೋರಿಸಲು ಮುಂದಾಗಿದ್ದಾನೆ. ನಿತ್ಯ ಸ್ಥಳೀಯರು ವಾಲೀಬಾಲು ಆಡುವ ಸಂದರ್ಭದಲ್ಲಿ ೩ರಿಂದ ೪ಸಾವಿರ ಬೆಟ್ಟಿಂಗ್ ಗೆ ನಿಲ್ಲುವುದಕ್ಕೆ ಪ್ರಾರಂಭಿಸಿದ್ದಾನೆ. ಇದರಿಂದ ಅನುಮಾನಗೊಂಡ ಕೆಲವರು ಆತನನ್ನು ಪ್ರಶ್ನಿಸಿದಾಗ ತನಗೆ ಲಾಟರಿಯಲ್ಲಿ ಹಣ ಬಂದಿದೆ ಎಂದು ಹೇಳಿಕೊಂಡಿದ್ದಾನೆ.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...