Friday, June 27, 2025

ಅಡ್ಯನಡ್ಕ ಬ್ಯಾಂಕ್ ಕಳವು ಪ್ರಕರಣ : ಪ್ರಮುಖ ಆರೋಪಿಯ ಸಹಿತ ಕೇರಳ ಮೂಲದ ಮೂವರು ಪೊಲೀಸರ ವಶಕ್ಕೆ

ವಿಟ್ಲ: ಕರ್ಣಾಟಕ ಬ್ಯಾಂಕ್ ಕಿಟಕಿ ಮೂಲಕ ಒಳ ನುಸುಳಿ ಕೋಟ್ಯಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರನ್ನು ಸೋಮವಾರ ಸ್ಥಳ ಮಹಜರಿಗೆ ಅಡ್ಯನಡ್ಕ ಪೊಲೀಸರು ಕರೆದುಕೊಂಡು ಬಂಧಿಸಿದ್ದಾರೆ.

ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಕಳ್ಳತನದ ಪ್ರಮುಖ ರುವಾರಿಗಳು ಎನ್ನಲಾಗಿದೆ. ಫೆ.೨೮ ರಂದು ಈ ಆರೋಪಿಗಳನ್ನು ಪೊಲಿಸರು ವಶಕ್ಕೆ ಪಡೆಯುವ ಕಾರ್ಯವನ್ನು ಮಾಡಿದ್ದು, ಮಾ.೧೦ರಂದು ಬಂಧನವನ್ನು ಅಧಿಕೃತಗೊಳಿಸಿದ್ದಾರೆ.

ಬ್ರೀಝಾ ಕಾರಿನ ಮೂಲಕ ಆಗಮಿಸಿದ ಕಳ್ಳರು ಬ್ಯಾಂಕ್ ಕಿಟಕಿಯ ಸರಳು ತುಂಡರಿಸಿ, ಸೇಪ್ ಲಾಕರ್ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ಕೊರೆದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದರು. ಆ ಬಳಿಕ ನಾಲ್ಕು ಮಾಡಿಕೊಂಡ ಕಳ್ಳರು ಒಂದು ಪಾಲನ್ನು ಬಾಯಾರಿನ ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಂಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಇದನ್ನು ಅಡಗಸಿಟ್ಟಿರುವ ವಿಚಾರವನ್ನು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು.

ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಸೇಪ್ ಲಾಕರ್ ತುಂಡರಿಸಲು ಸಹಕರಿಸಿದ್ದು, ಕಾಸರಗೋಡು ಮೂಲದ ವಿವಿಧ ಪ್ರಕರಣದಲ್ಲಿ ಆರೋಪಿಗಳಾಗಿರುವವರು ಎಂದು ತನಿಖೆಯಿಂದ ತಿಳಿದು ಬಂದಿದೆ.

More from the blog

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಅರ್ಜಿ ಆಹ್ವಾನ..

ಮಂಗಳೂರು : ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ವತಿಯಿಂದ 2025 ಸಾಲಿನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ರಾಷ್ಟ್ರಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ ಪಂಚಾಯತಿ ಹಾಗೂ ಜಿಲ್ಲಾಮಟ್ಟದಲ್ಲಿ...

ವಿಠಲ ಪದವಿ ಪೂರ್ವ ಕಾಲೇಜಿನ ಮಹಮ್ಮದ್ ಶಾಹಿಲ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ..

ವಿಟ್ಲ: ಹರಿದ್ವಾರದ ರಾಣಿಪುರ್ ಮಾಡ ಬಳಿಯ ಶ್ರೀ ಪ್ರೇಮ್ ನಗರ್ ಆಶ್ರಯದಲ್ಲಿ ಜೂನ್ 28ರಿಂದ ಜುಲೈ 1ರವರೆಗೆ ನಡೆಯಲಿರುವ 18 ರ ವಯೋಮಿತಿಯ ಬಾಲಕರ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ...