ಧರ್ಮಸ್ಥಳ: ಭೀಕರ ಕಾರು ಅಪಘಾತ ನಡೆದು 12 ಜನ ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರಿನ ಕುಣಿಗಲ್ ಅಮ್ರತೂರಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಕಾರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದು, ಕುಣಿಗಲ್ ಸಮೀಪದ ಬ್ಯಾಲದಕೆರೆ ಬಳಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು, ಬಳಿಕ ಎದುರಿನಿಂದ ಬರುತ್ತಿದ್ದ ಟವೇರಾಕ್ಕೆ ಡಿಕ್ಕಿ ಹೊಡೆದಿದೆ. ಟವೇರಾದಲ್ಲಿದ್ದ 10 ಜನರು ಹಾಗೂ ಕಾರಿನಲ್ಲಿದ್ದ 3 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟವೇರಾದ ಪ್ರಯಾಣಿಕರು ಮಂಜುನಾಥ್ (35), ತನುಜಾ (25), 8 ತಿಂಗಳ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸೌಂದರರಾಜ್ (48), ರಾಜೇಂದ್ರ (27), ಸರಳಾ (31), ಪ್ರಶನ್ಯಾ (14) ಕಾರಿನಲ್ಲಿದ್ದ ಲಕ್ಷ್ಮೀಕಾಂತ್ (24), ಸಂದೀಪ (35), ಮಧು (28) ಮೃತರು ಎಂದು ಪೋಲಿಸರು ತಿಳಿಸಿದ್ದಾರೆ
.


