Thursday, June 26, 2025

ಪದೇ ಪದೇ ಜೀವಗಳ ಬಲಿಪಡೆಯುತ್ತಿದೆ ರಾಷ್ಟ್ರೀಯ ಹೆದ್ದಾರಿ ಮಾಣಿ-ಕಲ್ಲಡ್ಕ ಮಧ್ಯೆ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಜನರ ಆಕ್ರೋಶ, ಬಂಟ್ವಾಳ ಪೊಲೀಸರಿಂದ ಸ್ಥಳ ಪರಿಶೀಲನೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗುತ್ತಿರುವ ರಸ್ತೆ ಅಪಘಾತಗಳು ಮತ್ತು ಡೆತ್ ಪ್ರಕರಣಗಳು. ರಸ್ತೆ ಅಪಘಾತದಿಂದ ಸಾವು ನೋವುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತವಾದ ಕ್ರಮಕ್ಕಾಗಿ ಪೋಲೀಸ್ ಇಲಾಖೆ ಮುಂದಾಗಿದೆ.

ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಒಂದೇ ದಿನ ಎರಡು ಅಪಘಾತದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರು ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟೈನ್ ಡಿ.ಸೋಜ ಘಟನಾ ಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣದಿಂದ ಅಪಘಾತಗಳು ನಡೆಯುತ್ತದೆ ಮತ್ತು ಅಪಘಾತಗಳು ಕಡಿಮೆಯಾಗುವಂತೆ ಮಾಡಲು ಪೋಲೀಸ್ ಇಲಾಖೆ ಏನೇನೂ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬ ಬಗ್ಗೆ ಯೂ ಟ್ರಾಫಿಕ್ ಎಸ್.ರಾಜೇಶ್ ಕೆ.ವಿ, ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಗ್ರಾಮಾಂತರ ಎಸ್.ಐ. ಪ್ರಸನ್ನ, ಅವರ ಜೊತೆ ಚರ್ಚಿಸಿ ಬಳಿಕ ಕೆಲವೊಂದು ಪರಿಹಾರ ಕ್ರಮಗಳ ಬಗ್ಗೆ ತಿಳಿಸಿದ್ದಾರೆ. ಅದಲ್ಲದೆ ರಸ್ತೆಗೆ ಸಂಬಂಧಿಸಿದ ಇಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

 

*ಬ್ಯಾರಿಕೇಡ್ ಹಾಗೂ ಕೋನ್ ಅಳವಡಿಕೆ*

ಕಲ್ಲಡ್ಕ ಜಂಕ್ಸನ್ ಅಂದರೆ ಮಂಗಳೂರು ಕಡೆಯಿಂದ ಪುತ್ತೂರು ಮತ್ತು ವಿಟ್ಲಕ್ಕೆ ತಿರುಗುವ ಶ್ರೀರಾಮ ಭಜನಾ ಮಂದಿರದ ಮುಂಭಾಗದ ಪ್ರದೇಶ ದಲ್ಲಿ ಅನೇಕ ಅಪಘಾತ ಗಳು ನಡೆಯುತ್ತಿದ್ದು, ನಿನ್ನೆಯೂ ಇದೇ ಸ್ಥಳದಲ್ಲಿ ಅಪಘಾತ ನಡೆದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ.

ಜೊತೆಗೆ ವಿಟ್ಲ ರಸ್ತೆಯಲ್ಲಿ ಕೋನ್ ಅಳವಡಿಕೆ ಮಾಡಲಾಗಿದೆ. ಟ್ರಾಫಿಕ್ ಪೋಲೀಸರು ಕೂಡ ಈ ಭಾಗದಲ್ಲಿ ನಿಂತು ವಾಹನ ಸವಾರರಿಗೆ ಹಾಗೂ ರಸ್ತೆ ದಾಟುವಾಗ ಸಹಾಯ ಮಾಡುವ ಮೂಲಕ ಅಪಘಾತ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

*ಕಲ್ಲಡ್ಕದಲ್ಲಿ ಸರ್ಕಲ್ ಅಥವಾ ಹಮ್ಸ್ ಆಗಬೇಕಾಗಿದೆ*

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಕಲ್ಲಡ್ಕದಲ್ಲಿ ವಿಟ್ಲ ಕಡೆಗೆ ತಿರುಗುವ ಪ್ರದೇಶದಲ್ಲಿ ಸರ್ಕಲ್ ಒಂದು ಆಗಬೇಕಾಗಿದೆ, ಅಥವಾ ರಸ್ತೆಯಲ್ಲಿ ಹುಬ್ಬು ತಗ್ಗುಗಳನ್ನು (ಹಮ್ಸ್) ತುರ್ತಾಗಿ ಹಾಕಬೇಕಾದ ಅವಶ್ಯಕತೆ ಇದೆ ಎಂಬುದು ಸ್ಥಳೀಯ ರ ಮಾತು.

ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಅಪಘಾತಗಳು ನಡೆದು ಸಾವುನೋವುಗಳು ಸಂಭವಿಸಿದೆ. ಇಲ್ಲಿನ ಅಪಘಾತಗಳು ಕಡಿಮೆಯಾಗಬೇಕಾದರೆ ಇದರ ಅಗತ್ಯ ವಿದೆ ಎಂದು ಹೇಳುತ್ತಿದ್ದಾರೆ.

ಅಥವಾ ಕಿರಿದಾದ ಈ ಭಾಗದ ರಸ್ತೆಯ ಅಗಲೀಕರಣವಾದರೂ ಆಗಬೇಕಾಗಿದೆ . ತುರ್ತಾಗಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

*ಅವೈಜ್ಞಾನಿಕ ರೀತಿಯ ಕಾಮಗಾರಿಗಳೇ ರಸ್ತೆ ಅಪಘಾತಕ್ಕೆ ಕಾರಣ?*

ರಾಷ್ಟ್ರೀಯ ಹೆದ್ದಾರಿಯ ಡಾಮರೀಕರಣ ಆಗದೆ ಎರಡು ವರ್ಷಗಳು ಆಗಿತ್ತು. ಕೊನೆಗೂ ಈ ಬಾರಿ ರಸ್ತೆಗೆ ಡಾಮರೀಕರಣ ಮಾಡಲಾಗಿದೆ ಆದರೆ ಡಾಮರೀಕರಣದ ಬಳಿಕ ರಸ್ತೆಯ ಎರಡು ಬದಿಗಳು ಎತ್ತರವಾಗಿದ್ದು ರಸ್ತೆಯಿಂದ ಕೆಳಗೆ ವಾಹನಗಳನ್ನು ಇಳಿಸುವಂತಿಲ್ಲ, ಹಾಗಾಗಿ ರಸ್ತೆಯ ಎರಡು ಬದಿಗಳಿಗೆ ಡಾಮರೀಕರಣವಾದ ಕೂಡಲೇ ಮಣ್ಣು ಹಾಕುವ ಕೆಲಸ ಮಾಡಬೇಕಾಗಿತ್ತು.

ಅದಲ್ಲದೆ ರಸ್ತೆಯ ಬದಿಯಲ್ಲಿ ಪೊದೆಗಳು, ಗಿಡಗಂಟುಗಳು ಬೆಳೆದಿದ್ದು ರಸ್ತೆಯೇ ಕಾಣುತ್ತಿಲ್ಲ ರಾತ್ರಿ ಹೊತ್ತಿನಲ್ಲಿ ವಾಹನ ಚಾಲನೆ ಮಾಡುವ ಚಾಲಕರಿಗೆ ಬಹಳ ತೊಂದರೆಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಕ್ಯಾಟ್ ಐ (ರಾತ್ರಿ ಹೊತ್ತಿನಲ್ಲಿ ಬೆಳಗುವ ನಾಮಫಲಕಗಳನ್ನು ) ವ್ಯವಸ್ಥೆ ಆಗಬೇಕಾಗಿದೆ.

ಈ ರೀತಿಯ ಕೆಲವೊಂದು ಪ್ರಮುಖವಾದ ಕೆಲಸಗಳು ಆಗಬೇಕಾದ ಅನಿವಾರ್ಯ ತೆ ಇದೆ ಎಂಬುದು ಸಾರ್ವಜನಿಕ ವಲಯದ ಮಾತು.

*ರಸ್ತೆ ನಿಯಮ ಪಾಲಿಸಿ*

ವಾಹನ ಸವಾರರು ಕೂಡ ಹೆಚ್ಚಿನ ಜಾಗೃತೆ ವಹಿಸಿ ಚಾಲನೆ ಮಾಡಬೇಕು ಮತ್ತು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು.

ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಜಾಗರೂಕತೆ ವಹಿಸಬೇಕಾಗಿದೆ. ಅಂಕಿಅಂಶಗಳ ಪ್ರಕಾರ ರಸ್ತೆ ಅಪಘಾತದಲ್ಲಿ ಹೆಚ್ಚು ಸಾವುನೋವುಗಳು ಉಂಟಾಗಿದ್ದು ದ್ವಿಚಕ್ರವಾಹನ ಸವಾರರದ್ದು ಎಂಬುದು ದಾಖಲಾಗಿದೆ.

More from the blog

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...