Friday, July 11, 2025

ಬೈಕುಗಳೆರಡು ಮುಖಾಮುಖಿ ಡಿಕ್ಕಿ, ಪುಂಜಾಲಕಟ್ಟೆ ಠಾಣೆಯ ಪೋಲೀಸ್ ಸಿಬ್ಬಂದಿ ಸಾವು, ಇನ್ನೋರ್ವ ಗಂಭೀರ. ಪುಂಜಾಲಕಟ್ಟೆ ಆಸ್ಪತ್ರೆಗೆ ಬೀಗ! ಸಹೋದ್ಯೋಗಿಯ ಜೀವ ಉಳಿಸಲಾಗದೆ ಕಣ್ಣೀರಿಟ್ಟ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಸಿಬ್ಬಂದಿಗಳು

ಬಂಟ್ವಾಳ: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅವರು ಮೃತಪಟ್ಟ ಘಟನೆ ಪಿಲಾತಬೆಟ್ಟು ಗ್ರಾಮದ ಮೂರ್ಜೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ವೇಣೂರಿನ ಮರೊಳಿ ನಿವಾಸಿ ಅಬೂಬಕ್ಕರ್ (47) ಮೃತಪಟ್ಟ ವರಾಗಿದ್ದಾರೆ.

 

ಇವರು ವಾಮದಪದವಿನಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಭಾಗವಹಿಸಿ ವಾಪಾಸಾಗುತ್ತಿದ್ದ ವೇಳೆ ನೇರಳಕಟ್ಟೆ ಬಳಿ ಎದುರಿನಿಂದ ಬಂದ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.

ಘಟನೆಯಿಂದ ಇನ್ನೊಂದು ಬೈಕಿನ ಸವಾರ ಇರ್ವತ್ತೂರು ನಿವಾಸಿ ದುರ್ಗಾಪ್ರಸಾದ್ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುಂಜಾಲಕಟ್ಟೆಯ ಇತರ ಸಿಬ್ಬಂದಿ ಗಳೊಂದಿಗೆ ಗೃಹ ಪ್ರವೇಶಕ್ಕೆ ತೆರಳಿದ್ದು, ಅಬೂಬಕ್ಕರ್ ಅವರು ತನ್ನ ಬೈಕಿನಲ್ಲಿ ವಾಪಸು ಆಗುತ್ತಿದ್ದರೆ ಉಳಿದವರು ಇಲಾಖಾ ಜೀಪಿನಲ್ಲಿ ಹಿಂಬಂದಿಯಿಂದ ಆಗಮಿಸುತ್ತಿದ್ದರು. ನೇರಳಕಟ್ಟೆ ಸಮೀಪ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಈ ಸಂದರ್ಭದಲ್ಲಿ ಹಿಂಬದಿಯಿಂದ ಜೀಪಿನಲ್ಲಿ ಬರುತ್ತಿದ್ದ ಪೋಲೀಸ್ ಸಿಬ್ಬಂದಿ ಗಳು ಗಾಯಳುಗಳನ್ನು ತಕ್ಷಣ ಜೀಪಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದು ಆಬೂಬಕ್ಕರ್ ಅವರು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆಗೆ ಬೀಗ

ಗಾಯಳು ಆಬೂಬಕ್ಕರ್ ಅವರನ್ನು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಯಿತು. ಈ ವೇಳೆ ಆಸ್ಪತ್ರೆಗೆ ಬೀಗ ಹಾಕಲಾಗಿತ್ತು. ಇಲ್ಲಿನ ವೈದ್ಯರು ರಜೆಯ ಮೇಲೆ ತೆರಳಿದ್ದರೆ ಇತರ ಸಿಬ್ಬಂದಿಗಳು ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ.
ಚಿಂತಾಜನಕ ಸ್ಥಿತಿಯಲ್ಲಿದ್ದ ಅಬೂಬಕ್ಕರ್ ಅವರನ್ನು ತಕ್ಷಣ ಅದೇ ಜೀಪಿನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಹೆದ್ದಾರಿಯಲ್ಲಿರುವ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಮತ್ತು ಒಬ್ಬನೇ ಒಬ್ಬ ಸಿಬ್ಬಂದಿಗಳಿಲ್ಲದೆ ಬೀಗ ಹಾಕಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಜೀವ ಉಳಿಸಬೇಕಾದ ಸರಕಾರಿ ಆಸ್ಪತ್ರೆಗಳ ಬೇಜಾವಬ್ದಾರಿತನಕ್ಕೆ ಇದೊಂದು ಉದಾಹರಣೆ ಆಗಿದೆ. ಈ ಹಿಂದೆಯೂ ಕೂಡ ಇದೇ ರೀತಿಯ ಘಟನೆಗಳಾದಗಲೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಗಾಯಳುಗಳು, ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡಿದ ಪ್ರಸಂಗಗಳು ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶುಕ್ರವಾರ ನಡೆದ ಅಪಘಾತದಿಂದ ಗಂಭೀರ ಗಾಯಗೊಂಡ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಎಚ್.ಸಿ.ಆಬೂಬಕ್ಕರ್ ಅವರು ಜೀವನಮ್ಮರಣ ಹೋರಾಟ ನಡೆಸುತ್ತಿದ್ದರು, ಈ ಸಂದರ್ಭದಲ್ಲಿ ಅವರಿಗೆ ತುರ್ತು ಚಿಕಿತ್ಸೆ ದೊರಕದಿದ್ದು ಅಲ್ಲಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿಹೋಗಿದೆ.
ಇವರ ಅಕಾಲಿಕ ಸಾವಿನಿಂದ ಪುಂಜಾಲಕಟ್ಟೆ ಪೋಲೀಸ್ ಠಾಣೆಯ ಸಿಬ್ಬಂದಿಗಳ ಕಣ್ಣೆದುರಲ್ಲೆ ಪ್ರಾಣ ಬಿಟ್ಟ ಸಹಪಾಠಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.
ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಸಹೋದ್ಯೋಗಿಯ ಅಕಾಲಿಕ ಸಾವಿನಿಂದ ಪುಂಜಾಲಕಟ್ಟೆ ಠಾಣೆ ಶೋಕತಪ್ತವಾಗಿದೆ.
ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

More from the blog

ರಾಷ್ಟ್ರ, ಧರ್ಮಕಾರ್ಯದಲ್ಲಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವುದೇ ನಿಜವಾದ ಗುರುದಕ್ಷಿಣೆ – ಮಂಜುಳಾ ಗೌಡ

ಬಂಟ್ವಾಳ : ಪ್ರಸ್ತುತ ಹಿಂದೂ ಧರ್ಮದ ಮೇಲಿನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹಿಂದೂಗಳ ಸಂಘಟನೆ ಆವಶ್ಯಕತೆಯಿದೆ. ಆದರೆ ‘ಸಾಧನೆ ಮತ್ತು ಧರ್ಮ' ಇದು ಸಂಘಟನೆಯ ಅಡಿಪಾಯವಾಗಿದ್ದರೆ ಮಾತ್ರ ರಾಷ್ಟ್ರ-ಧರ್ಮ ಕಾರ್ಯದ ಕಟ್ಟಡ ಭದ್ರವಾಗಿರಲು ಸಾಧ್ಯ....

ಬಂಟ್ವಾಳ ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ಉಮೇಶ್ ಗೌಡ ಮಾಡತ್ತೇಲು ಆಯ್ಕೆ

ಬಂಟ್ವಾಳ : ತುಳುನಾಡಿನ ಅಸ್ಮಿತೆಯ ಚಳುವಳಿಯಾಗಿ ಗುರುತಿಸಲ್ಪಟ್ಟ ತುಳುವ ಮಹಾಸಭೆ ತನ್ನ ಶತಮಾನೋತ್ಸವದ ಸಂಧರ್ಭದಲ್ಲಿ ಹೊಸ ಚಟುವಟಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಇಂತಹ ನಿರ್ಣಾಯಕ ಸಮಯದಲ್ಲಿ, ಬಂಟ್ವಾಳ ತಾಲೂಕು ಘಟಕದ ಸಂಚಾಲಕರಾಗಿ ಸಮಾಜ ಶಾಸ್ತ್ರದಲ್ಲಿ...

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬಸ್ : ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ..

ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ...

ವೀರಕಂಭ ಮಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಭೆ.. 

ಬಂಟ್ವಾಳ : ಜೀವನದಲ್ಲಿ ತಾಯಿಯ ಪಾತ್ರ ಬಹಳ ದೊಡ್ಡದು. ಮಗುವಿನ ನೋವು ನಲಿವಿನಲ್ಲಿ ಮಾತ್ರವಲ್ಲದೆ ಸಂಸ್ಕಾರಯುತ ಶಿಕ್ಷಣ ಹೊಂದುವಲ್ಲೂ ತಾಯಿ ಮಗುವಿನ ಪ್ರತಿ ಹಂತದಲ್ಲೂ ಜೊತೆಯಾಗಿರಬೇಕು, ಸಂಸ್ಕಾರಯುತ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುವಲ್ಲಿ ತಾಯಿಯೇ...