ಬಂಟ್ವಾಳ: ಮಂಗಳೂರು ಬಿಸಿರೋಡು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆ ಎಂಬಲ್ಲಿ ಕಾರು ಮರಕ್ಕೆ ಡಿಕ್ಕಿಯಾಗಿ ಐವರು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.


ಮಂಗಳೂರು ನಿವಾಸಿಗಳಾದ ಆನಂದಿತ್, ಶರತ್,ಶುಸಾನ್, ಹರ್ಷ,ಶ್ರೀರಾಮ್ ಗಾಯಗೊಂಡವರು.
ಮಂಗಳೂರಿನಿಂದ ಪುತ್ತೂರು ಕಡೆಗೆ ಕಿರುಚಲನ ಚಿತ್ರವೊಂದರ ಸೂಟಿಂಗ್ ನಡೆಸಲು ಐದು ಜನರ ತಂಡವೊಂದು ಬೆಳಿಗ್ಗೆ ಮಂಗಳೂರಿನಿಂದ ಹೊರಟಿತ್ತು.
ರಾಮಲ್ ಕಟ್ಟೆ ಎಂಬಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಅಥವಾ ಕಾರಿನ ತಾಂತ್ರಿಕ ದೋಷ ವೋ ಗೊತ್ತಿಲ್ಲ ರಸ್ತೆಯ ಬದಿಗೆ ತೆರಳಿ ಮರವೊಂದಕ್ಕೆಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ ಗೊಂಡಿದೆ.
ಕಾರಿನಲ್ಲಿದ್ದ ಐವರು ಪ್ರಯಾಣಿಕರ ಪೈಕಿ ಇಬ್ಬರು ಗಂಭೀರ ವಾಗಿ ಗಾಯಗೊಂಡರೆ ಉಳಿದ ಮೂವರಿಗೆ ಅಲ್ಪಸ್ವಲ್ಪ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಎಸ್. ಐ.ರಾಜೇಶ್ ಕೆ.ವಿ.ಬೇಟಿ ನೀಡಿದ್ದಾರೆ.

